ಅಗ್ನಿಪಥ್ ಯುವಜನಾಂಗಕ್ಕೆ ಹಾನಿಕಾರಕ, ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ: ಮೋದಿಗೆ ಕೇಜ್ರಿವಾಲ್ ಒತ್ತಾಯ

Agnipath Scheme ಅಗ್ನಿಪಥ್ ಯೋಜನೆಯು ನಮ್ಮ ಯುವಕರಿಗೆ ಮತ್ತು ದೇಶಕ್ಕೆ ಹಾನಿಕಾರಕವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ಅವರನ್ನು ಮಾಜಿ ಸೈನಿಕರೆಂದು ಕರೆಯಲಾಗುವುದು. ಯಾವುದೇ ಪಿಂಚಣಿ ಅವರಿಗಿರುವುದಿಲ್ಲ. ಕೇಂದ್ರ ಸರ್ಕಾರ ಇದನ್ನು ಪರಿಶೀಲಿಸಬೇಕು

ಅಗ್ನಿಪಥ್ ಯುವಜನಾಂಗಕ್ಕೆ ಹಾನಿಕಾರಕ, ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ: ಮೋದಿಗೆ ಕೇಜ್ರಿವಾಲ್ ಒತ್ತಾಯ
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 24, 2022 | 4:37 PM

ದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ (Agnipath) ಯುವಕರಿಗೆ ಮತ್ತು ದೇಶಕ್ಕೆ ಹಾನಿಕಾರಕ. ಈ ಯೋಜನೆಯನ್ನು ಪರಿಶೀಲಿಸುವಂತೆ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಶುಕ್ರವಾರ ಒತ್ತಾಯಿಸಿದ್ದಾರೆ. “ಅಗ್ನಿಪಥ್ ಯೋಜನೆಯು ನಮ್ಮ ಯುವಕರಿಗೆ ಮತ್ತು ದೇಶಕ್ಕೆ ಹಾನಿಕಾರಕವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ಅವರನ್ನು ಮಾಜಿ ಸೈನಿಕರೆಂದು ಕರೆಯಲಾಗುವುದು. ಯಾವುದೇ ಪಿಂಚಣಿ ಅವರಿಗಿರುವುದಿಲ್ಲ. ಕೇಂದ್ರ ಸರ್ಕಾರ ಇದನ್ನು ಪರಿಶೀಲಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ” ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ. ಜೂನ್ 14ರಂದು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಘೋಷಿಸಿದಂದಿನಿಂದ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ . ಹದಿನೇಳೂವರೆ ಮತ್ತು 21 ವರ್ಷದ ಮಧ್ಯೆಯಿರುವ ಯುವಕ/ಯುವತಿಯರನ್ನು ನಾಲ್ಕು ವರ್ಷಗಳ ಕಾಲ ಸೇನೆಗೆ ಸೇರಿಸುವ ಯೋಜನೆ ಇದಾಗಿದ್ದು ,ಕಾಲಾವಧಿಯ ನಂತರ ಇವರಿಗೆ ಗ್ಯಾಚ್ಯುಟಿ, ಪಿಂಚಣಿ ಸೌಲಭ್ಯ ಇರುವುದಿಲ್ಲ. ಪ್ರತಿಭಟನೆಗಳ ನಡುವೆಯೇ ಸರ್ಕಾರ ವಯೋಮಿತಿಯನ್ನು 23ಕ್ಕೆ ಏರಿಸಿತ್ತು. ಇದಕ್ಕಿಂತ ಮುಂಚೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪರಮ್ ವೀರ್ ಚಕ್ರ ವಿಜೇತ ಕ್ಯಾಪ್ಟನ್ ಬಾನಾ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನ ಟೀಕಿಸುವ ವಿಡಿಯೊ ಹಂಚಿಕೊಂಡಿದ್ದು, ಹೊಸ ಭಾರತದಲ್ಲಿ ಸ್ನೇಹಿತರು ಹೇಳಿದ್ದು ಮಾತ್ರ ಕೇಳುತ್ತದೆಯೇ ಹೊರತು ಹೀರೊಗಳು ಹೇಳಿದ್ದಲ್ಲ ಎಂದಿದ್ದರು.

ಈ ಟ್ವೀಟ್​ನ್ನು ಶೇರ್ ಮಾಡಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ,ಒಂದೆಡೆ ಮೋದಿಯ ದುರಹಂಕಾರ ಮತ್ತು ಸರ್ವಾಧಿಕಾರ, ಮತ್ತೊಂದೆಡೆ ಪರಮ್​​ವೀರ್ ಎಂದಿದ್ದರು.

ಇದನ್ನೂ ಓದಿ
Image
ಅಗ್ನೀಪಥ್ ಯೋಜನೆ ಯಾಕೆ ಬೇಕು? ಪೊಲೀಸರನ್ನು ತಳ್ಳಾಡಿ ಅಸಭ್ಯವಾಗಿ ಬೆರಳು ತೊರಿಸಿ ವಾರ್ನಿಂಗ್ ಕೊಟ್ಟ ನಲಪಾಡ್​
Image
Agniveer Recruitment 2022: ಅಗ್ನಿವೀರರಾಗಲು ಇಂದೇ ಹೆಸರು ನೋಂದಾಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Image
Gujarat Riots: ಗುಜರಾತ್​ ಗಲಭೆಯಲ್ಲಿ ನರೇಂದ್ರ ಮೋದಿಗೆ ಕ್ಲೀನ್​ಚಿಟ್ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ
Image
Agnipath Scheme: ಅಗ್ನಿಪಥ್​ ಯೋಜನೆ; ಭಾರತೀಯ ವಾಯುಪಡೆಗೆ ಇಂದಿನಿಂದ ಅಗ್ನಿವೀರ್​ಗಳ​​ ನೋಂದಣಿ ಆರಂಭ

ಕಳೆದ ವಾರ ಅಗ್ನಿಪಥ್ ವಿರೋಧಿಸಿ ಬಿಹಾರ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರ್ಯಾಣ ಮತ್ತು ತೆಲಂಗಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.