Agniveer Recruitment 2022: ಅಗ್ನಿವೀರರಾಗಲು ಇಂದೇ ಹೆಸರು ನೋಂದಾಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಅಗ್ನಿವೀರ್ ನೇಮಕಾತಿ 2022ಗಾಗಿ ಭಾರತೀಯ ಸೇನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Agniveer Recruitment 2022: ಅಗ್ನಿವೀರರಾಗಲು ಇಂದೇ ಹೆಸರು ನೋಂದಾಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jun 24, 2022 | 3:11 PM

Agniveer Recruitment 2022: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯಡಿ ಅಗ್ನಿವೀರ್ ನೇಮಕಾತಿ 2022 ಗಾಗಿ ಭಾರತೀಯ ಸೇನೆಯು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ನೋಂದಣಿ ಮಾಡಿಕೊಳ್ಳಬಹುದು.

  • ನೇಮಕಾತಿ ಸಂಸ್ಥೆ : ಭಾರತೀಯ ವಾಯುಪಡೆ (IAF)
  • ಹುದ್ದೆ ಹೆಸರು: ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ), ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ಖಾ
  • ಲಿ ಹುದ್ದೆಗಳು: 3500
  • ಸಂಬಳ/ ವೇತನ ಶ್ರೇಣಿ: ತಿಂಗಳಿಗೆ 30,000ರೂ. ಮತ್ತು  ಭತ್ಯೆಗಳು
  • ಉದ್ಯೋಗ ಸ್ಥಳ: ಭಾರತದಲ್ಲಿ ಎಲ್ಲಿಯೂ

ನೆನಪಿಡಬೇಕಾದ ಪ್ರಮುಖ ದಿನಾಂಕಗಳು

  • IAF ಅಗ್ನಿಪಥ್ ಅಧಿಸೂಚನೆ: ಜೂನ್ 20, 2022
  • ನೋಂದಣಿ ಆರಂಭ: ಜೂನ್ 24, 2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 5, 2022
  • ಪರೀಕ್ಷೆ: 2022ರ ಜುಲೈ ಕೊನೆಯ ವಾರ
  • ಅಗ್ನಿಪಥ್ ಯೋಜನೆಯ ದಾಖಲಾತಿ ದಿನಾಂಕ: ಡಿ. 11, 2022

ವೇತನದ ಏರಿಕೆ:

ಸೇವೆಗೆ ಸೇರ್ಪಡೆಯಾದ ಮೊದಲ ವರ್ಷಗಳಲ್ಲಿ ಅಗ್ನಿವೀರರಿಗೆ ತಿಂಗಳಿಗೆ 30,000 ರೂಪಾಯಿ, 2ನೇ ವರ್ಷದಲ್ಲಿ 33,000 ರೂ. ವೇತನ ನೀಡಲಾಗುತ್ತದೆ. ಮೂರನೇ ವರ್ಷದಲ್ಲಿ 36,500 ಮತ್ತು 4ನೇ ಹಾಗೂ ಕೊನೆಯ ವರ್ಷದಲ್ಲಿ 40,000 ರೂಪಾಯಿ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: HPCL Recruitment 2022: ಎಚ್​ಪಿಸಿಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ ಮತ್ತು ವಿದ್ಯಾರ್ಹತೆ:

2022-23 ನೇಮಕಾತಿ ವರ್ಷಕ್ಕೆ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅದರಂತೆ ಕನಿಷ್ಠ ವಯಸ್ಸು 17.5 ವರ್ಷಗಳಿಂದ ಮೇಲ್ಪಟ್ಟು ಹಾಗೂ ಗರಿಷ್ಠ ವಯಸ್ಸು 23ಕ್ಕಿಂತ ಕೆಳಪಟ್ಟ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.

  • ಜನರಲ್ ಡ್ಯೂಟಿ- ಕನಿಷ್ಠ 45% ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣ
  • ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ ​​/ ಯುದ್ದ ಸಾಮಗ್ರಿ)- ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಶೇ.50 ಅಂಕಗಳೊಂದಿಗೆ 12ನೇ ತರಗತಿ ತೇರ್ಗಡೆ
  • ಕ್ಲರ್ಕ್ / ಸ್ಟೋರ್‌ಕೀಪರ್- ಕನಿಷ್ಠ 60% ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣ ಮತ್ತು ಇಂಗ್ಲಿಷ್​ನಲ್ಲಿ ಶೇ.50ರಷ್ಟು ಅಂಕ ಪಡೆದಿರಬೇಕು
  • ಟ್ರೇಡ್ಸ್‌ಮ್ಯಾನ್- 10 ನೇ ಮತ್ತು 8 ನೇ ಉತ್ತೀರ್ಣ, ಎಲ್ಲಾ ವಿಷಯದಲ್ಲಿ ಕನಿಷ್ಠ ಶೇ.33ರಷ್ಟು ಅಂಕಗಳೊಂದಿಗೆ ಉತ್ತೀರ್ಣ

ನೇಮಕಾತಿ ಹಂತ:

  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ದೈಹಿಕ ಅಳತೆ
  • ವೈದ್ಯಕೀಯ ಪರೀಕ್ಷೆ
  • ಸಾಮಾನ್ಯ ಪ್ರವೇಶ ಪರೀಕ್ಷೆ (CEE)

ದೈಹಿಕ ಮಾನದಂಡಗಳು ಮತ್ತು ದೈಹಿಕ ಸಾಮರ್ಥ್ಯ (PST & PFT)

  • ಎತ್ತರ: 152.5 ಸೆಂ.
  • ಎದೆ: ಕನಿಷ್ಠ 5 ಸೆಂ. ವಿಸ್ತರಣೆ
  • 1.6-ಕಿ.ಮೀ. ಓಟ 6.30 ನಿಮಿಷಗಳಲ್ಲಿ ಕ್ರಮಿಸುವಂತೆ
  • 10 ಪುಷ್-ಅಪ್‌ಗಳು, 10 ಸಿಟ್-ಅಪ್‌ಗಳು ಮತ್ತು 20 ಸ್ಕ್ವಾಟ್‌ಗಳನ್ನು ನಿಗದಿಪಡಿಸಿದ ಸಮಯದಲ್ಲಿ ನಿರ್ವಹಿಸಬೇಕು.

ಇದನ್ನೂ ಓದಿ: Indian Army Recruitment 2022: ಸೇನಾ ನೇಮಕಾತಿ: SSLC ಪಾಸಾದವರಿಗೆ ಇಲ್ಲಿದೆ ಸುವರ್ಣಾವಕಾಶ

ನೋಂದಣಿ ಮಾಡುವುದು ಹೇಗೆ?

ಮೊದಲ ಹಂತ: ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‌ಸೈಟ್ www.mod.gov.inಗೆ ಭೇಟಿ ಕೊಡಿ

ಎರಡನೇ ಹಂತ: ಮುಖ್ಯ ಪುಟದಲ್ಲಿ ಅಗ್ನಿಪತ್ ಅಪ್ಲಿಕೇಶನ್ ಲಿಂಕ್‌ ಕ್ಲಿಕ್ ಮಾಡಿ

ಮೂರನೇ ಹಂತ: ಲಿಂಕ್ ಕ್ಲಿಕ್ ಮಾಡಿದ ಮೇಲೆ ಅರ್ಜಿ ಫಾರ್ಮ್ ಸಿಗುತ್ತದೆ ಮತ್ತು ಅರ್ಜಿ ಭರ್ತಿ ಮಾಡಿ

ನಾಲ್ಕನೇ ಹಂತ: ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ

ಐದನೇ ಹಂತ: ದಾಖಲೆಗಳು ಅಪ್ಲೋಡ್​ ಮಾಡಿದ ನಂತರ ಅರ್ಜಿ ಶುಲ್ಕ ಪಾವತಿಸಿ ಮತ್ತು ನಂತರ ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ

ಆರನೇ ಹಂತ: ಅರ್ಜಿ ಪರಿಶೀಲನೆ ನಂತರ ಡೇಟಾವನ್ನು ಸಂಗ್ರಹಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ

ಇದನ್ನೂ ಓದಿ: CIL recruitment 2022: ಕೋಲ್ ಇಂಡಿಯಾ ನೇಮಕಾತಿ: ತಿಂಗಳ ವೇತನ 1.6 ಲಕ್ಷ ರೂ.