Sand Artist: ಮರಳು ಕಲಾವಿದನ ಕೈಚಳದಲ್ಲಿ ಮೂಡಿದ ದ್ರೌಪದಿ ಮುರ್ಮು ಮರಳು ಶಿಲ್ಪ
ಒಡಿಶಾ ಜನೆತೆಯ ಪರವಾಗಿ, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ NDA ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಮರಳು ಶಿಲ್ಪವನ್ನು ರಚಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಅವರನ್ನು ಬಿಜೆಪಿ NDA ಮಿತ್ರ ಪಕ್ಷಗಳು ಆಯ್ಕೆ ಮಾಡಿತ್ತು. ಇದೀಗ ಇಂದು ಬೆಳಿಗ್ಗೆ ಅವರು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟ ಸಚಿವರು, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಅವರು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ. ದ್ರೌಪದಿ ಮುರ್ಮು ಅವರು ಮೊಟ್ಟಮೊದಲ ಬಾರಿಗೆ ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡ ಮಹಿಳೆ.
ದ್ರೌಪದಿ ಮುರ್ಮು ಅವರು ಒಡಿಶಾ ರಾಜ್ಯದ ರಾಯರಂಗಪುರದ ಜಿಲ್ಲೆಯಲ್ಲಿ ಕೌನ್ಸಿಲರ್ ಆಗಿ 1997ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಇವರಿಗೂ ಒಡಿಶಾಕ್ಕೂ ಆತ್ಮೀಯಾ ಸಂಬಂಧ ಇದೆ. ಒಡಿಶಾ ಮಹಿಳೆ ಅದರಲ್ಲೂ ಆದಿವಾಸಿ ಸಮುದಾಯದಲ್ಲಿ ಬೆಳೆದ ಮಹಿಳೆ ಇಂದು ರಾಷ್ಟ್ರಪತಿ ಹುದ್ದೆಯನ್ನು ಅಲಂಕಾರ ಮಾಡುವುದಕ್ಕೆ ಮುನ್ನಡಿ ಬರೆದಿದ್ದಾರೆ. ಹೀಗಾಗಿ ಅವರಿಗೆ ಒಡಿಶಾ ಜನೆತೆಯ ಪರವಾಗಿ, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ NDA ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಮರಳು ಶಿಲ್ಪವನ್ನು ರಚಿಸಿದ್ದಾರೆ. ಈ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದೀಗ ಎಲ್ಲ ಕಡೆ ವೈರಲ್ ಆಗಿದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಲಾಗಿದೆ.
Odisha | Sand artist Sudarsan Pattnaik creates a sand sculpture of NDA's Presidential election candidate Droupadi Murmu at a sea beach in Puri. Murmu herself hails from Odisha
Earlier today, Droupadi Murmu filed her nomination for the Presidential election in Delhi pic.twitter.com/irRYkPdh54
— ANI (@ANI) June 24, 2022
ಸಾಮಾಜಿಕ ಬಲಕೆದಾರರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಸಾಮಾನ್ಯವಾಗಿ ಕಾಣುವ ಜನರು ಜಗತ್ತಿನಲ್ಲಿ ಅತ್ಯುತ್ತಮರು ಅದಕ್ಕಾಗಿಯೇ ಭಗವಂತ ಅವರಲ್ಲಿ ಅನೇಕರನ್ನು ಒಬ್ಬರನ್ನು ಸೃಷ್ಟಿ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾರೆ. ಈ ಮರಳು ಶಿಲ್ಪವನ್ನು ಅನೇಕರು ಹಂಚಿಕೊಂಡಿದ್ದಾರೆ. ದ್ರೌಪದಿ ಮುರ್ಮು ಅವರು ಇಂದು ನಾಮಪತ್ರ ಸಲ್ಲಿಸಲು ಹೋಗುತ್ತಿದ್ದರೆ ಅವರಿಗೆ ಅಭಿನಂದನೆಗಳು ಎಂದು ಈ ಮರಳು ಶಿಲ್ಪವನ್ನು ಹಂಚಿಕೊಂಡಿದ್ದಾರೆ.
Best wishes to Presidential candidate Smt. #DroupadiMurmu Ji My SandArt at Puri beach in Odisha. #MeraBharatMahan #PresidentialElections pic.twitter.com/BshkiGhlW3
— Sudarsan Pattnaik (@sudarsansand) June 24, 2022
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಹೀಗೆ ಅನೇಕ ರೀತಿ ಮರಳು ಶಿಲ್ಪವನ್ನು ಹಂಚಿಕೊಂಡಿದ್ದಾರೆ. ಹಲವು ಕಲೆಗಳನ್ನು ರಚನೆ ಮಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಹಬ್ಬಗಳು, ವಿಶೇಷ ದಿನಗಳಂದು ಮರಳು ಶಿಲ್ಪವನ್ನು ವಿಶೇಷವಾಗಿ ಶುಭಾಶಯವನ್ನು ತಿಳಿಸುತ್ತಾರೆ. ಇದೀಗ ಮರಳು ಶಿಲ್ಪಯ ಮೂಲಕ ದ್ರೌಪದಿ ಮುರ್ಮು ಅಭಿನಂದನೆ ಹೇಳಿದ್ದಾರೆ.
ದ್ರೌಪದಿ ಮುರ್ಮು ಅವರು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ. ದ್ರೌಪದಿ ಮುರ್ಮು ಅವರು ಮೊಟ್ಟಮೊದಲ ಬಾರಿಗೆ ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡ ಮಹಿಳೆ. ತಮ್ಮ 59ನೇ ವಯಸ್ಸಿನಲ್ಲಿ 2015ರ ಮೇ ನಲ್ಲಿ ಇವರು ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡರು. ಒಡಿಶಾ ರಾಜ್ಯದ ಕುಸುಮಿ ಬ್ಲಾಕ್ನ ಊಪರ್ಬೇಡಾ ಗ್ರಾಮದ ನಿವಾಸಿ. ಒಡಿಶಾ ರಾಜ್ಯದಿಂದ ಯಾವುದೇ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಇವರು.
Published On - 5:28 pm, Fri, 24 June 22