AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Political Crisis ನಾನು ಸಿಎಂ ಬಂಗಲೆ ತೊರೆದಿರಬಹುದು, ಆದರೆ ನನ್ನ ನಿರ್ಣಯಗಳು ದೃಢವಾಗಿದೆ: ಉದ್ಧವ್ ಠಾಕ್ರೆ

Uddhav Thackeray ಶಿವಸೇನಾ ಬಂಡಾಯ ಶಾಸಕರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ಠಾಕ್ರೆ, "ಬಿಟ್ಟುಹೋದವರ ಬಗ್ಗೆ ನಾನೇಕೆ ಕೆಟ್ಟ ಭಾವನೆ ಹೊಂದಬೇಕು? ಎಂದು ಕೇಳಿದ್ದಾರೆ

Maharashtra Political Crisis ನಾನು ಸಿಎಂ ಬಂಗಲೆ ತೊರೆದಿರಬಹುದು, ಆದರೆ ನನ್ನ ನಿರ್ಣಯಗಳು ದೃಢವಾಗಿದೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 24, 2022 | 5:28 PM

Share

ಮುಂಬೈ: ಶಿವಸೇನಾ (Shiv Sena) ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರು ಪ್ರಸ್ತುತ ಬಂಡಾಯ ಎದುರಿಸುತ್ತಿರುವ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಶುಕ್ರವಾರ ಭಾಷಣ ಮಾಡಿದ್ದಾರೆ. ರಾಜಕೀಯ ಸಂಘಟನೆ ಮತ್ತು ಎಂವಿಎ(MVA) ಸರ್ಕಾರದ ಉಳಿವಿನ ಸುತ್ತಲಿನ ಭಯವನ್ನು ನಿವಾರಿಸಲು ಪ್ರಯತ್ನಿಸುತ್ತಿರುವ ಠಾಕ್ರೆ, ಪಕ್ಷವು ಈ ಹಿಂದೆ ಎದುರಿಸಿದ ಬಂಡಾಯಗಳ ಹೊರತಾಗಿಯೂ, ಅದು ಎರಡು ಬಾರಿ ಅಧಿಕಾರಕ್ಕೆ ಬಂದಿತು. ನಾನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ವನ್ನು ತೊರೆದಿರಬಹುದು, ಆದರೆ ನನ್ನ ನಿರ್ಣಯವಲ್ಲ ಎಂದು ಹೇಳಿದ್ದಾರೆ. ಉದ್ಧವ್ ಠಾಕ್ರೆ ಎಲ್ಲಾ ಜಿಲ್ಲಾ ಮುಖ್ಯಸ್ಥರ ಸಭೆಯನ್ನು ಕರೆದಿದ್ದು ಶುಕ್ರವಾರ ಮಧ್ಯಾಹ್ನ ಅವರ ಪುತ್ರ ಮತ್ತು ಪಕ್ಷದ ನಾಯಕ ಆದಿತ್ಯ ಠಾಕ್ರೆ ಮುಂಬೈನ ಸೇನಾ ಭವನದಲ್ಲಿ ಸಭೆಗೆ ಹಾಜರಾಗಿದ್ದಾರೆ. ಶಿವಸೇನಾ ಬಂಡಾಯ ಶಾಸಕರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ಠಾಕ್ರೆ, “ಬಿಟ್ಟುಹೋದವರ ಬಗ್ಗೆ ನಾನೇಕೆ ಕೆಟ್ಟ ಭಾವನೆ ಹೊಂದಬೇಕು? ಎಂದು ಕೇಳಿದ್ದಾರೆ. ಕೊವಿಡ್ ಬಾಧಿತರಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ನಾಯಕರ ಗುಂಪನ್ನುದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದು, ಶಿವಸೇನಾ ತೊರೆಯುವುದಕ್ಕಿಂತ ಸಾಯುವುದು ಮೇಲು ಎಂದು ಹೇಳಿದವರು ಇಂದು “ಓಡಿಹೋಗಿದ್ದಾರೆ”. ಶಿವಸೇನಾ ಮತ್ತು ಠಾಕ್ರೆ ಅವರ ಹೆಸರು ಬಳಸದೆ ಅವರು ಎಲ್ಲಿಯವರೆ ಹೋಗಬಲ್ಲರು? ನೀವು ಮರದಿಂದ ಹೂವುಗಳನ್ನು ಹಣ್ಣುಗಳನ್ನು ಮತ್ತು ಕಾಂಡವನ್ನು ತೆಗದುಕೊಂಡು ಹೋಗಬಹುದು. ಆದರೆ ಬೇರುಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಕೇಳಿದ್ದಾರೆ.

ಏಕನಾಥ್ ಶಿಂಧೆ ಅವರು 40 ಶಾಸಕರಿಗಿಂತ ಹೆಚ್ಚು ಶಾಸಕರ ಬೆಂಬಲ ಹೊಂದಿದ್ದೇವೆ ಎಂದು ಹೇಳಿದ ನಂತರ ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆ ಶಿವಸೇನಾದ ಜಿಲ್ಲಾ ಮುಖ್ಯಸ್ಥರನ್ನು ಶುಕ್ರವಾರ ಮಧ್ಯಾಹ್ನ ಭೇಟಿ ಮಾಡಿದ್ದಾರೆ. ಆದಿತ್ಯ ಠಾಕ್ರೆ ಅವರು ಸಭೆಗೆ ಖುದ್ದಾಗಿ ಹಾಜರಾಗಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರು ಬಂಡಾಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಕಣ್ಣೀರಾಗಿದ್ದಾರೆ.

ಏಕನಾಥ್ ಶಿಂಧೆ ಮತ್ತು ಬಂಡಾಯ ಶಾಸಕರ ಗುಂಪು ಅಸ್ಸಾಂನ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾರೆ. ವಾರಾಂತ್ಯದಲ್ಲಿ ಅವರ ಸಂಖ್ಯೆ 50 ದಾಟುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಶಿಂಧೆ ಅವರು ಸ್ವಲ್ಪ ಸಮಯದಿಂದ ಚುರುಕಾಗಿದ್ದರು. ಆದರೆ ಆದಿತ್ಯ ಠಾಕ್ರೆ ಅವರು ಪಕ್ಷದಲ್ಲಿ ವರ್ಚುವಲ್ ನಂಬರ್ 2 ಆಗಿ ಬೆಳೆದದ್ದು ಅವರನ್ನು ಮತ್ತಷ್ಟು ದೂರ ತಳ್ಳಿತು ಎಂದು ಮೂಲಗಳು ಹೇಳುತ್ತವೆ.

ಇದನ್ನೂ ಓದಿ
Image
ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಯ ಹವ್ಯಾಸ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ
Image
Maharashtra Political Crisis ಮತ್ತಷ್ಟು ಬಂಡಾಯ ಶಾಸಕರ ಅನರ್ಹತೆಗೆ ಮುಂದಾದ ಶಿವಸೇನಾ, ಶಿಂಧೆ ಬಣಕ್ಕೆ 44 ಶಾಸಕರ ಬೆಂಬಲ
Image
MVA Crisis: ವಿಶ್ವಾಸಮತ ಯಾಚನೆಗೆ ಮೈತ್ರಿ ಸರ್ಕಾರದ ಸಿದ್ಧತೆ, ಶರದ್ ಪವಾರ್ ಉರುಳಿಸುವ ದಾಳದ ಬಗ್ಗೆ ಕುತೂಹಲ

ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ,  ಏಕನಾಥ್ ಶಿಂಧೆ ಅವರು ತಮ್ಮ ಮಗನನ್ನೇ ಸಂಸದರನ್ನಾಗಿಸಿದ್ದಾರೆ. ಹೀಗಿರುವಾಗ ನನ್ನ ಮಗನಿಂದ ಏನು ಸಮಸ್ಯೆ ಇದೆ?

“ನನ್ನ ದೇಹ, ನನ್ನ ತಲೆ ಮತ್ತು ಕುತ್ತಿಗೆಯಿಂದ ನನ್ನ ಪಾದದವರೆಗೆ ನೋಯುತ್ತಿತ್ತು. ಕೆಲವರು ನಾನು ಚೇತರಿಸಿಕೊಳ್ಳುವುದಿಲ್ಲ ಎಂದು ಭಾವಿಸಿದ್ದರು .ನನ್ನ ಕಣ್ಣುಗಳು ತೆರೆಯುತ್ತಿಲ್ಲ, ಆದರೆ ನಾನು ನನ್ನ ಬಗ್ಗೆ ಕಾಳಜಿ ವಹಿಸಲಿಲ್ಲ. ನಾನು ಅಧಿಕಾರದ ಆಟಗಳಲ್ಲಿಲ್ಲ.”

ಬುಧವಾರದ ನಂತರ ಠಾಕ್ರೆಯವರ ಮಾಡಿದ ಎರಡನೇ ಭಾವನಾತ್ಮಕ ಭಾಷಣವಾಗಿದೆ ಇದು. ಬುಧವಾರ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು ಯಾವುದಾದರೂ ಶಾಸಕ ನನ್ನ ಮುಂದೆ ಬಂದು ರಾಜೀನಾಮೆ ನೀಡಿ ಎಂದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದಿದ್ದರು.

Published On - 5:19 pm, Fri, 24 June 22