Maharashtra Political Crisis ನಾಳೆ ಮಧ್ಯಾಹ್ನ 1 ಗಂಟೆಗೆ ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ
ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು 16 ಶಿವಸೇನೆಯ ಬಂಡಾಯ ಶಾಸಕರಿಗೆ ನಾಳೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ
ಮುಂಬೈ: ಶಿವಸೇನಾ ಶನಿವಾರ (ನಾಳೆ) ಮಧ್ಯಾಹ್ನ 1 ಗಂಟೆಗೆ ಮುಂಬೈನ ಸೇನಾ ಭವನದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿದೆ. ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಶಮನಗೊಳಿಸಲು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಅವರ ನಿವಾಸ ‘ಮಾತೋಶ್ರೀ’ಯಲ್ಲಿ (Matoshree) ಭೇಟಿಯಾಗಿದ್ದು ಮಹತ್ವದ ಸಭೆ ನಡೆಸಿದ್ದಾರೆ. ಶಿವಸೇನಾ ವರಿಷ್ಠ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕರ ನಡುವೆ ಅವರ ಮನೆ ‘ಮಾತೋಶ್ರೀ’ಯಲ್ಲಿ ಸಭೆ ನಡೆಯುತ್ತಿದ್ದ ವೇಳೆ ಪಕ್ಷದ ಕಾರ್ಯಕರ್ತರು ಮಾತೋಶ್ರೀ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಾತೋಶ್ರೀ ಹೊರಗೆ ಜಿಂದಾಬಾದ್ ಜಿಂದಾಬಾದ್ ಶಿವಸೇನಾ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
#WATCH | NCP chief Sharad Pawar, Deputy CM Ajit Pawar, state cabinet minister Jayant Patil and party leader Praful Patel arrive at Matoshree (Thackeray residence) in Mumbai.#MaharashtraCrisis pic.twitter.com/Azq782KOHr
ಇದನ್ನೂ ಓದಿ— ANI (@ANI) June 24, 2022
#WATCH | Shiv Sena workers gather outside Matoshree (Thackeray residence) in Mumbai as a meeting between CM Uddhav Thackeray and NCP leaders, including party chief Sharad Pawar, gets underway. #MaharashtraCrisis pic.twitter.com/8CqYEumYTc
— ANI (@ANI) June 24, 2022
ಮಹಾರಾಷ್ಟ್ರದಲ್ಲಿ ಪೊಲೀಸರ ಕಟ್ಟೆಚ್ಚರ
ಮಹಾರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳು ವಿಶೇಷವಾಗಿ ಮುಂಬೈನಲ್ಲಿರುವ ಪೊಲೀಸ್ ಠಾಣೆಗಳು ಹೈ ಅಲರ್ಟ್ ಆಗಿವೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಸನ್ನಿವೇಶದ ನಡುವೆ ಬಂಡಾಯ ಶಾಸಕನ ಹೋರ್ಡಿಂಗ್ ಕೆಲವು ಶಿವಸೈನಿಕರು ಧ್ವಂಸ ಮಾಡಿದ್ದಾರೆ.
ಬಂಡಾಯ ಶಾಸಕರು ಪಕ್ಷ ಒಡೆಯಲು ಬಯಸುತ್ತಿದ್ದಾರೆ: ಸಿಎಂ ಠಾಕ್ರೆ
ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶುಕ್ರವಾರ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು, ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಪಕ್ಷವನ್ನು ಒಡೆಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಉಪ ಸ್ಪೀಕರ್ 16 ಬಂಡಾಯ ಶಾಸಕರಿಗೆ ನೋಟಿಸ್ ಕಳುಹಿಸುವ ಸಾಧ್ಯತೆ
ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು 16 ಶಿವಸೇನೆಯ ಬಂಡಾಯ ಶಾಸಕರಿಗೆ ನಾಳೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಅನರ್ಹತೆಯ ವಿಚಾರಣೆ ನಡೆಯಲಿದ್ದು, ಬಂಡಾಯ ಮುಂಬೈನಲ್ಲಿ ಹಾಜರಿರಬೇಕು ಎಂದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
Published On - 10:34 pm, Fri, 24 June 22