Draupadi Murmu: ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ, ಬಿಜೆಡಿ-ವೈಎಸ್​ಆರ್​ಪಿ ಬೆಂಬಲ ಘೋಷಣೆ

Presidential Election: ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಬಿಜು ಜನತಾ ದಳ ಮತ್ತು ಆಂಧ್ರ ಪ್ರದೇಶದ ವೈಎಸ್​ಆರ್​ಪಿ ಬೆಂಬಲ ಸೂಚಿಸಿವೆ.

Draupadi Murmu: ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ, ಬಿಜೆಡಿ-ವೈಎಸ್​ಆರ್​ಪಿ ಬೆಂಬಲ ಘೋಷಣೆ
ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 24, 2022 | 10:36 AM

ದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷ (Bharatiya Janata Party – BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (National Democratic Alliance – NDA) ಉಮೇದುವಾರರಾಗಿರುವ ದ್ರೌಪದಿ ಮುರ್ಮು ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಬಿಜು ಜನತಾ ದಳ (Biju Janata Dal – BJD) ಮತ್ತು ಆಂಧ್ರ ಪ್ರದೇಶದ ವೈಎಸ್​ಆರ್​ಪಿ (Yuvajana Sramika Rythu Congress Party – YSRCP) ಬೆಂಬಲ ಸೂಚಿಸಿವೆ.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಚಲಾವಣೆಯಾಗಬೇಕಿರುವ 10,86,431 ಮತಗಳ ಪೈಕಿ 5,32,351 (ಶೇ 49) ಮತಗಳು ಎನ್​ಡಿಎ ಪರವಾಗಿ ಇವೆ. ಬಿಜೆಡಿ 31,686 ಮತ್ತು ವೈಎಸ್​ಆರ್​ಸಿಪಿ 45,550, ಎಐಎಡಿಎಂಕೆ 14,940 ಮತಗಳನ್ನು ಹೊಂದಿದೆ. ಆರ್​ಜೆಡಿ ಅಥವಾ ವೈಎಸ್​ಆರ್​ಸಿಪಿ ಎರಡರ ಪೈಕಿ ಒಂದು ಪಕ್ಷದ ಬೆಂಬಲ ಸಿಕ್ಕರೂ ಮುರ್ಮು ಅವರ ಗೆಲುವು ಖಚಿತವಾಗುತ್ತದೆ. ಮುರ್ಮು ಅವರು ಜಯಗಳಿಸಿದರೆ ಭಾರತದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಯೊಬ್ಬರು ರಾಷ್ಟ್ರಪತಿ ಸ್ಥಾನಕ್ಕೆ ಬಂದಂತೆ ಆಗುತ್ತದೆ.

ಪರಿಶಿಷ್ಟ ಬುಡಕಟ್ಟಿಗೆ ಸೇರಿದವರೇ ಮುಂಚೂಣಿ ಸ್ಥಾನದಲ್ಲಿರುವ ಜಾರ್ಖಂಡ್​ನ ‘ಜಾರ್ಖಂಡ್ ಮುಕ್ತಿ ಮೋರ್ಚಾ’ (Jharkhand Mukti Morch – JMM) ಪಕ್ಷದ ಬೆಂಬಲದ ನಿರೀಕ್ಷೆಯನ್ನೂ ಎನ್​​ಡಿಎ ಇರಿಸಿಕೊಂಡಿದೆ. ಪ್ರತಿಪಕ್ಷಗಳು ತಮ್ಮ ಸಹಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುವುದರಿಂದ ಜೆಎಂಎಂ ಅಂತರ ಕಾಯ್ದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಶಿರೋಮಣಿ ಅಕಾಲಿ ದಳ, ತೆಲುಗುದೇಶಂ, ಬಹುಜನ ಸಮಾಜ ಪಕ್ಷಗಳು ಸಹ ಮುರ್ಮು ಅವರಿಗೆ ಬೆಂಬಲ ನೀಡಬಹುದು ಎಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇರಿಸಿಕೊಂಡಿದ್ದಾರೆ.

ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಬಿಜೆಪಿ ನಿರ್ಧಾರವನ್ನು ಹಲವು ರಾಜಕೀಯ ಪಕ್ಷಗಳು ಶ್ಲಾಘಿಸಿವೆ. ಬಿಜೆಪಿಯನ್ನು ಸೈದ್ಧಾಂತಿಕ ಕಾರಣಗಳಿಗೆ ವಿರೋಧಿಸುವ ಪಕ್ಷಗಳು ಸಹ ರಾಷ್ಟ್ರಪತಿ ಚುನಾವಣೆ ವೇಳೆ ಎನ್​ಡಿಎ ಅಭ್ಯರ್ಥಿ ಮುರ್ಮು ಅವರಿಗೆ ಬೆಂಬಲ ಸೂಚಿಸಬಹುದು ಎಂದು ವಿಶ್ಲೇಷಿಸಲಾಗಿದೆ. ರಾಷ್ಟ್ರಪತಿ ಚುನಾವಣೆಯ ಮತದಾನವು ಗೌಪ್ಯವಾಗಿರುತ್ತದೆ. ಪಕ್ಷಗಳು ನೀಡುವ ವಿಪ್​ಗೆ ನಿಷ್ಠರಾಗಿರಬೇಕು ಎಂಬ ಒತ್ತಾಯ ಇರುವುದಿಲ್ಲ.

ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಲು ಎನ್​ಡಿಎ ಅಭ್ಯರ್ಥಿಗೆ 20,000 ಮತಗಳು ಕಡಿಮೆಯಾಗುತ್ತವೆ. ಬಿಜೆಪಿಯೊಂದಿಗೆ ಮಿತ್ರಭಾವ ಹೊಂದಿರುವ ಬಿಜೆಡಿ ಮತ್ತು ವೈಎಸ್​ಆರ್​ಸಿಪಿ ಬೆಂಬಲದಿಂದ ಈ ಕೊರತೆ ನೀಗಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಎನ್​ಡಿಎ ಇದೆ. ಇದೀಗ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಿರುವ ಏಕನಾಥ್ ಶಿಂದೆ ಅವರ ಬೆಂಬಲಿಗರ ಮತವನ್ನೂ ಬಿಜೆಪಿ ನಿರೀಕ್ಷಿಸುತ್ತಿದೆ.

ಲೋಕಸಭೆಯ 533, ರಾಜ್ಯಸಭೆಯ 233, ರಾಜ್ಯ ವಿಧಾನಸಭೆಗಳ 4,033 ಮಂದಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಸಂಸಸ್ ಸದಸ್ಯರ ಮತಗಳಿಗೆ 5,43,200 ಹಾಗೂ ವಿಧಾನಸಭೆ ಸದಸ್ಯರ ಮತಗಳಿಗೆ 5,43,231 ಮೌಲ್ಯವಿದೆ. ಒಟ್ಟಾರೆ 10,86,431 ಮೌಲ್ಯದ ಮತಗಳು ಚಲಾವಣೆಯಾಗುತ್ತವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್​ಡಿಎ ಪ್ರಾಬಲ್ಯ ಹೊಂದಿದೆ. ಆದರೂ ಎನ್​ಡಿಎ ಅಭ್ಯರ್ಥಿಗಳ ಗೆಲುವಿಗೆ ಸಣ್ಣ ಪಕ್ಷಗಳ ಬೆಂಬಲದ ಅಗತ್ಯವಿದೆ. ಬಿಜೆಪಿಯು 18 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, 5,32,351 ಮತಗಳನ್ನು ಹೊಂದಿದೆ.

ಪಕ್ಷಾತೀತವಾಗಿ ಒಡಿಶಾದ ಎಲ್ಲ ಶಾಸಕರೂ ಮುರ್ಮು ಅವರನ್ನು ಬೆಂಬಲಿಸಬೇಕೆಂದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೋರಿದ್ದಾರೆ. ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಹಲವು ವಿಚಾರಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಜೆಡಿಯು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬ ನಿರೀಕ್ಷೆಗಳು ಬಿಜೆಪಿ ವಲಯದಲ್ಲಿ ವ್ಯಕ್ತವಾಗಿವೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಲಿಂಕ್: NDA Presidential candidate Draupadi Murmu

Published On - 9:39 am, Fri, 24 June 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್