Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್

Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್
ವ್ಯಕ್ತಿಯನ್ನು ಕಾಪಾಡಿದ ರೈಲ್ವೆ ಸಿಬ್ಬಂದಿ
Image Credit source: NDTV

ಸತೀಶ್​ ಕುಮಾರ್ ಅವರಂತಹ ಕೆಚ್ಚೆದೆಯ, ಪ್ರಾಮಾಣಿಕ ಸಿಬ್ಬಂದಿಯನ್ನು ಹೊಂದಿರುವುದಕ್ಕೆ ರೈಲ್ವೆ ಇಲಾಖೆ ಬಹಳ ಹೆಮ್ಮೆ ಪಡುತ್ತದೆ ಎಂದು ಟ್ವಿಟ್ಟರ್​​ನಲ್ಲಿ ಈ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ.

TV9kannada Web Team

| Edited By: Sushma Chakre

Jun 24, 2022 | 8:35 AM

ನವದೆಹಲಿ: ವೇಗವಾಗಿ ಬರುತ್ತಿದ್ದ ರೈಲು (Train) ಇನ್ನೇನು ರೈಲ್ವೆ ಹಳಿಯ ಮೇಲಿದ್ದ ವ್ಯಕ್ತಿಯ ಮೇಲೆ ಹಾದುಹೋಗಬೇಕು ಎನ್ನುವಷ್ಟರಲ್ಲಿ ಓಡಿಬಂದ ರೈಲ್ವೆ ಸಿಬ್ಬಂದಿ ಆ ವ್ಯಕ್ತಿಯನ್ನು ಹಳಿಯಿಂದ ಮೇಲೆತ್ತಿ ಕಾಪಾಡಿದ್ದಾರೆ. ಪ್ಲಾಟ್​ಫಾರ್ಮ್​ ಮೇಲೆ ನಿಂತವರು ಆತಂಕದಿಂದ ನೋಡುತ್ತಿರುವಂತೆಯೇ ತನ್ನ ಪ್ರಾಣವನ್ನೂ ಲೆಕ್ಕಿಸದ ರೈಲ್ವೆ (Indian Railways) ಸಿಬ್ಬಂದಿ ರೈಲಿನ ಎದುರು ಹಾರಿ ಆ ವ್ಯಕ್ತಿಯನ್ನು ರಕ್ಷಿಸಿರುವ ವಿಡಿಯೋ (Video Viral) ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್​​ನಲ್ಲಿ ಶೇರ್ ಮಾಡಿಕೊಂಡಿದೆ.

ಸೇವೆ, ಸುರಕ್ಷತಗೆ ನಾವು ಆದ್ಯತೆ ನೀಡುತ್ತೇವೆ. ನಮ್ಮ ಇಲಾಖೆಯ ಧೈರ್ಯಶಾಲಿ ಸಿಬ್ಬಂದಿಯಿಂದಾಗಿ ಒಂದು ಅಮೂಲ್ಯವಾದ ಜೀವ ಉಳಿದಿದೆ. ಸತೀಶ್​ ಕುಮಾರ್ ಅವರಂತಹ ಕೆಚ್ಚೆದೆಯ, ಪ್ರಾಮಾಣಿಕ ಸಿಬ್ಬಂದಿಯನ್ನು ಹೊಂದಿರುವುದಕ್ಕೆ ರೈಲ್ವೆ ಇಲಾಖೆ ಬಹಳ ಹೆಮ್ಮೆ ಪಡುತ್ತದೆ ಎಂದು ಟ್ವಿಟ್ಟರ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ದೃಶ್ಯ ರೈಲ್ವೆ ಪ್ಲಾಟ್​ಫಾರ್ಮ್​ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?

24 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ರೈಲ್ವೆ ಉದ್ಯೋಗಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಟ್ರ್ಯಾಕ್‌ನಲ್ಲಿ ಮಲಗಿರುವ ವ್ಯಕ್ತಿಯನ್ನು ನೋಡುತ್ತಾನೆ. ಅಷ್ಟರಲ್ಲೇ ರೈಲು ಪ್ಲಾಟ್​ಫಾರ್ಮ್​ಗೆ ಬರುತ್ತಿರುವುದು ಕಾಣುತ್ತದೆ. ಒಂದುಕ್ಷಣವೂ ತಡಮಾಡದ ಆ ಸಿಬ್ಬಂದಿ ತನ್ನ ಕೈಲಿರುವುದನ್ನು ಪ್ಲಾಟ್​ಫಾರ್ಮ್​ಗೆ ಎಸೆದು, ತನ್ನ ಪ್ರಾಣವನ್ನೂ ಲೆಕ್ಕಿಸದೆ ರೈಲ್ವೆ ಹಳಿಯ ಮೇಲೆ ಜಿಗಿದು ಆ ವ್ಯಕ್ತಿಯನ್ನು ಎತ್ತಿಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಟ್ರ್ಯಾಕ್‌ನ ಇನ್ನೊಂದು ಬದಿಗೆ ಆತನನ್ನು ಎಳೆದುಕೊಂಡು ಹೋಗುತ್ತಾರೆ. ಆತ ರೈಲ್ವೆ ಟ್ರ್ಯಾಕ್ ದಾಟಿದ ಕೂಡಲೆ ಗೂಡ್ಸ್ ರೈಲು ಅವರನ್ನು ದಾಟಿ ಹೋಗುತ್ತದೆ.

Follow us on

Related Stories

Most Read Stories

Click on your DTH Provider to Add TV9 Kannada