AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?

ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ತೆಲಂಗಾಣ ಪೊಲೀಸರು ನಿಮ್ಮ ಪ್ರಾಣ ಮಾತ್ರವಲ್ಲದೆ ಬೇರೆಯವರ ಜೀವದ ಜೊತೆಗೂ ಆಟವಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

Viral Video: ಸ್ಕೂಟಿಯಲ್ಲಿ ಕೂರಲೂ ಜಾಗವಿಲ್ಲದಷ್ಟು ಸಾಮಾನು ತುಂಬಿಕೊಂಡು ಹೊರಟ ಯುವಕ; ವಿಡಿಯೋ ನೋಡಿದ ಪೊಲೀಸರು ಮಾಡಿದ್ದೇನು?
ಓವರ್​ ಲೋಡ್ ಆಗಿರುವ ಸ್ಕೂಟಿ ಚಲಾಯಿಸುತ್ತಿರುವ ಯುವಕImage Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on: Jun 22, 2022 | 4:08 PM

Share

ಬೈಕ್ ಚಲಾಯಿಸುವಾಗ ಇನ್ನಿಲ್ಲದ ರೀತಿಯ ಸ್ಟಂಟ್​​ಗಳು, ಸಾಹಸಗಳನ್ನು ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ವೀಲಿಂಗ್ (Wheeling) ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ. ಇಲ್ಲೊಬ್ಬ ಯುವಕ ತನ್ನ ಸ್ಕೂಟಿಯಲ್ಲಿ ಒಂದು ಆಟೋದಲ್ಲಿ ತುಂಬುವಷ್ಟು ಸಾಮಾನುಗಳನ್ನು ಸ್ಕೂಟಿಯಲ್ಲಿ ತುಂಬಿಕೊಂಡು, ತನಗೇ ಕೂರಲು ಜಾಗವಿಲ್ಲದಿದ್ದರೂ ಸೀಟಿನ ತುದಿಯಲ್ಲಿ ಕುಳಿತುಕೊಂಡ ಹೈವೇಯಲ್ಲಿ ಸಾಗುತ್ತಿರುವ ವಿಡಿಯೋವೊಂದು ಭಾರೀ ವೈರಲ್ (Video Viral) ಆಗಿದೆ. ಈ ಸ್ಕೂಟಿ ಚಾಲಕನ ಸಾಹಸಕ್ಕೆ ಹಲವರು ತಮಾಷೆ, ಟ್ರೋಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆದರೆ, ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಪೊಲೀಸರು (Telangana Police) ಟ್ವಿಟ್ಟರ್​​ನಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಪಾಯಕಾರಿಯಾಗಿ ಸ್ಕೂಟಿಯಲ್ಲಿ ಸಾಮಾನುಗಳನ್ನು ತುಂಬಿಕೊಂಡು ಹಿಂದಿನ ಸೀಟಿನ ತುದಿಯಲ್ಲಿ ಕುಳಿತು ಸ್ಕೂಟಿ ಚಲಾಯಿಸುತ್ತಿದ್ದ ಯುವಕನೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ತೆಲಂಗಾಣ ಪೊಲೀಸರ ಗಮನ ಸೆಳೆದಿದೆ.

ಈ ವಿಡಿಯೋ ಕ್ಲಿಪ್ ಅನ್ನು ಟ್ವಿಟರ್ ಬಳಕೆದಾರ ಸಾಗರ್ ಎಂಬುವವರು ಹಂಚಿಕೊಂಡಿದ್ದರು. “ನನ್ನ 32GB ಇನ್​ಬಿಲ್ಟ್ ಮೆಮೊರಿ ಇರುವ ಫೋನ್​ನಲ್ಲಿ 31.9 GB ಡೇಟಾ ಫುಲ್ ಆದಾಗ ಇದೇ ರೀತಿ ಆಗುತ್ತದೆ” ಎಂಬ ವ್ಯಂಗ್ಯದ ಕ್ಯಾಪ್ಷನ್ ನೀಡಿ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ತೆಲಂಗಾಣ ಪೊಲೀಸರು ಟ್ವಿಟ್ಟರ್​​ನಲ್ಲೇ ಆ ಸ್ಕೂಟಿ ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ಬೈಕ್ ಸವಾರರಿಗೆ ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಒಂದುವೇಳೆ ನಿಮ್ಮ ಮೊಬೈಲ್ ಫೋನ್ ಹಾನಿಗೊಳಗಾದರೂ ಅದರ ಡೇಟಾವನ್ನು ಹಿಂಪಡೆಯಬಹುದು. ಆದರೆ ಜೀವವು ಹಾಗಲ್ಲ. ಒಮ್ಮೆ ನಿಮ್ಮ ಪ್ರಾಣ ಹೋದರೆ ಮತ್ತೆ ವಾಪಾಸ್ ತರಲು ಸಾಧ್ಯವಿಲ್ಲ. ನಿಮ್ಮ ಪ್ರಾಣ ಮಾತ್ರವಲ್ಲದೆ ಬೇರೆಯವರ ಜೀವದ ಜೊತೆಗೂ ಆಟವಾಡಬೇಡಿ ಎಂದು ತೆಲಂಗಾಣ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಈಗಾಗಲೇ ಕ್ಲಿಪ್ 7,18,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 24,000ಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ