Viral Video: ರಸ್ತೆ ಮಧ್ಯೆ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು! ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ
ಮುಂಬೈನಲ್ಲಿ ಬುಧವಾರ ರಾತ್ರಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಇದು ಭಾರತದಲ್ಲಿ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹತ್ತಿಕೊಂಡ ಮೊದಲ ಪ್ರಕರಣವಾಗಿದೆ. ಸದ್ಯ ಕಂಪನಿಯು ಘಟನೆಯ ಸತ್ಯಾಸತ್ಯತೆ ತಿಳಿಯಲು ತನಿಖೆ ಆರಂಭಿಸಿದೆ.
ಮುಂಬೈ: ರಸ್ತೆ ಮಧ್ಯೆ ಟಾಟಾ ನೆಕ್ಸಾನ್ ಇವಿ (Tata Nexon EV) ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬುಧವಾರ ತಡರಾತ್ರಿ ಮುಂಬೈನ ವಸೈ ವೆಸ್ಟ್ (ಪಂಚವಟಿ ಹೋಟೆಲ್ ಬಳಿ) ನಿಂದ EV ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಇದು ಭಾರತದಲ್ಲಿ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹತ್ತಿಕೊಂಡ ಮೊದಲ ಪ್ರಕರಣವಾಗಿದ್ದು, ಕಂಪನಿಯು ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: Automobile: ಅತ್ಯುತ್ತಮ ಮೈಲೇಜ್‌ನೊಂದಿಗೆ ಭಾರತದಲ್ಲಿ ಖರೀದಿಸಬಹುದಾದ CNG ಕಾರುಗಳು ಇಲ್ಲಿವೆ ನೋಡಿ
ವರದಿಗಳ ಪ್ರಕಾರ, ಕಾರಿನ ಮಾಲೀಕರು ತಮ್ಮ ನೆಕ್ಸಾನ್ EV ಅನ್ನು ತಮ್ಮ ಕಚೇರಿಯಲ್ಲಿ ಚಾರ್ಜ್ ಮಾಡಿದ್ದಾರೆ. ಕಚೇರಿಯಿಂದ ಮನೆ ಕಡೆ ಹೊರಟ 5 ಕಿ.ಮೀ ದೂರದಲ್ಲಿ ಕಾರಿನಲ್ಲಿ ಶಬ್ದ ಬರಲು ಆರಂಭಿಸಿದೆ ಮತ್ತು ಡ್ಯಾಶ್ಬೋರ್ಡ್ನಲ್ಲಿ “ವಾಹನವನ್ನು ನಿಲ್ಲಿಸಿ ಕಾರಿನಿಂದ ಇಳಿಯಿರಿ” ಎಂಬ ಸಂದೇಶ ಬಂದಿರುವುದನ್ನು ಚಾಲಕ ನೋಡಿದ್ದಾರೆ. ನೋಡನೋಡುತ್ತಿದ್ದಂತೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 11,499 ರೂ. ಗೆ ಸ್ಯಾಮ್ಸಂಗ್ ಗ್ಯಾಲಕ್ಸಿ F13 ಬಿಡುಗಡೆ
Tata Nexon EV catches massive fire in Vasai West (near Panchvati hotel), a Mumbai Suburb, Maharashtra. @TataMotors pic.twitter.com/KuWhUCWJbB
— Kamal Joshi (@KamalJoshi108) June 22, 2022
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, ಸುಮಾರು ನಾಲ್ಕು ವರ್ಷಗಳಲ್ಲಿ 30,000ಕ್ಕೂ ಹೆಚ್ಚು ಇವಿಗಳು ಒಟ್ಟು 1 ಮಿಲಿಯನ್ ಕಿ.ಮೀ ದೇಶಾದ್ಯಂತ ಕ್ರಮಿಸಿದ ನಂತರ ಇದು ಮೊದಲ ಘಟನೆಯಾಗಿದೆ. ಈ ಘಟನೆಗೆ ಕಾರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ನಂತರವಷ್ಟೇ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದು. ನಮ್ಮ ವಾಹನಗಳು ಮತ್ತು ಅವುಗಳ ಬಳಕೆದಾರರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.
ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಾಗಿದ್ದು, ಕಂಪನಿಯು ಈವರೆಗೆ 30,000 Nexon EVಗಳನ್ನು ಮಾರಾಟ ಮಾಡಿದೆ. ದೇಶದಲ್ಲಿ ಬ್ಯಾಟರಿ ಸ್ಫೋಟದಿಂದಾಗಿ ಹಲವಾರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾದ ಪ್ರಕರಣಗಳ ನಂತರ ಇದೀಗ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡಿದೆ.
ಇದನ್ನೂ ಓದಿ: Realme 9 Pro Plus 5G: ರಿಯಲ್ ಮಿ 9 ಪ್ರೋ ಪ್ಲಸ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 7,000 ರೂ. ಗೆ ನಿಮ್ಮದಾಗಿಸಿ
Published On - 4:37 pm, Thu, 23 June 22