Viral Video: ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ ಟ್ವಿಟ್ಟಿಗನಿಗೆ ಅಚ್ಚರಿಯ ಉತ್ತರ ನೀಡಿದ ಆನಂದ್ ಮಹೀಂದ್ರಾ

ಟ್ವಿಟ್ಟರ್​ ಬಳಕೆದಾರರೊಬ್ಬರು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರಿಗೆ ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ್ದಾರೆ. ಅದಕ್ಕೆ ಆನಂದ್ ಮಹೀಂದ್ರಾ ನೀಡಿದ ಉತ್ತರ ಈಗ ವೈರಲ್ ಆಗಿದೆ.

Viral Video: ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ ಟ್ವಿಟ್ಟಿಗನಿಗೆ ಅಚ್ಚರಿಯ ಉತ್ತರ ನೀಡಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 28, 2022 | 11:14 AM

ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರ ಬಗ್ಗೆ ಹೊಸತಾಗೇನೂ ಹೇಳಬೇಕಾಗಿಲ್ಲ. ಟ್ವಿಟ್ಟರ್​​ನಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಆಗಾಗ ಸ್ಫೂರ್ತಿದಾಯಕ ವಿಚಾರ, ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಟ್ವಿಟರ್ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಗಮನ ಸೆಳೆಯುತ್ತವೆ. ಅವರು ತಮ್ಮ ಟ್ವಿಟ್ಟರ್​ ಫಾಲೋವರ್​​ಗಳೊಂದಿಗೆ ಹಾಸ್ಯದ ಒನ್​ ಲೈನರ್‌ಗಳು ಮತ್ತು ಜೀವನದ ಪಾಠಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಟ್ವಿಟ್ಟರ್​ ಬಳಕೆದಾರರೊಬ್ಬರು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರಿಗೆ ನಿಮ್ಮ ವಿದ್ಯಾರ್ಹತೆ ಏನೆಂದು ಕೇಳಿದ್ದಾರೆ. ಅದಕ್ಕೆ ಆನಂದ್ ಮಹೀಂದ್ರಾ ನೀಡಿದ ಉತ್ತರ ಈಗ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಸೋಮವಾರ ಕಾಡಿನ ಬಳಿ ಕುಳಿತು, ಓದಿನಲ್ಲಿ ಮುಳುಗಿದ್ದ ಚಿಕ್ಕ ಹುಡುಗಿಯ ಫೋಟೋವನ್ನು ಹಂಚಿಕೊಂಡು, ಅದಕ್ಕೆ ಕಮೆಂಟ್ ಮಾಡಿದ್ದರು. ಈ ಬಾಲಕಿ ನನ್ನ ಸೋಮವಾರದ ಮೋಟಿವೇಷನ್ ಎಂದು ಹೇಳಿದ್ದರು. ಟ್ವಿಟರ್ ಬಳಕೆದಾರ ಅಭಿಷೇಕ್ ದುಬೆ ಈ ಫೋಟೋವನ್ನು ಹಂಚಿಕೊಂಡಿದ್ದರು. “ಇಂದು ನಾನು ಹಿಮಾಚಲದ ಸ್ಟೌನ್ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದೆ, ಈ ಪುಟ್ಟ ಹುಡುಗಿ ಒಂಟಿಯಾಗಿ ಕುಳಿತು ಓದುತ್ತಾ, ಬರೆಯುತ್ತಾ ಉಳಿತಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಪುಸ್ತಕಗಳಲ್ಲಿ ಅವಳು ಹೊಂದಿದ್ದ ಏಕಾಗ್ರತೆಯನ್ನು ನೋಡಿ ನನಗೆ ಎಷ್ಟು ಆಶ್ಚರ್ಯವಾಯಿತು” ಎಂದು ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: Viral Video: ಕೊಲಂಬಿಯಾದಲ್ಲಿ ಗೂಳಿ ಕಾಳಗದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ; 4 ಜನ ಸಾವು, ನೂರಾರು ಮಂದಿಗೆ ಗಾಯ

ಆ ಪೋಸ್ಟನ್ನು ರೀಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರಾ ಈಕೆ ನನ್ನ ಸೋಮವಾರದ ಮೋಟಿವೇಷನ್ ಎಂದು ಹೇಳಿದ್ದರು. ಅದಕ್ಕೆ ಕಮೆಂಟ್ ಮಾಡಿದ ಒಬ್ಬ ಬಳಕೆದಾರರು ಆನಂದ್ ಮಹೀಂದ್ರಾಗೆ ಪ್ರಶ್ನೆಯನ್ನು ಹಾಕಿದರು. “ಸರ್ ನಿಮ್ಮ ವಿದ್ಯಾರ್ಹತೆ ಬಗ್ಗೆ ತಿಳಿಸುತ್ತೀರಾ?” ಎಂದು ಅವರು ಕೇಳಿದ್ದರು.

ಅದಕ್ಕೆ ಉತ್ತರಿಸಿದ ಆನಂದ್ ಮಹೀಂದ್ರಾ, “ನಿಜ ಹೇಳಬೇಕೆಂದರೆ ನನ್ನ ವಯಸ್ಸಿನಲ್ಲಿ ಅನುಭವವೇ ಏಕೈಕ ಅರ್ಹತೆಯಾಗಿದೆ” ಎಂದು 67 ವರ್ಷದ ಆನಂದ್ ಮಹೀಂದ್ರಾ ಉತ್ತರಿಸಿದ್ದಾರೆ.