ಮೂವತ್ತು ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ವಾಸವಾಗಿತ್ತೆನ್ನಲಾದ ವೂಲಿ ಮೊಮ್ಮತ್ ಪ್ರಾಣಿಯ ಸಂರಕ್ಷಿತ ದೇಹ ಕೆನಡಾದಲ್ಲಿ ಸಿಕ್ಕಿದೆ
ಪ್ರಾಗ್ಜೀವಶಾಸ್ತ್ರಜ್ಞ ಡಾ ಗ್ರ್ಯಾಂಟ್ ಜಜೂಲಾ ಅವರು, ಈ ಪರಿಶೋಧನೆಯನ್ನು ಅತ್ಯದ್ಭುತ ಅಂತ ವರ್ಣಿಸಿದ್ದು ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಹಿಮಯುಗದ ಮಮ್ಮಿಫೈಡ್ ದೇಹವೊಂದು ಪತ್ತೆಯಾಗಿದೆ ಎಂದಿದ್ದಾರೆ.
ಕೆನಡಾ: ಜೂನ್ 21 ರಂದು ಕೆನಡಾದ ಉತ್ತರಭಾಗದಲ್ಲಿ (North Canada) ನೈಜ ಚರ್ಮ ಮತ್ತು ಕೂದಲಿನೊಂದಿಗೆ ಅವೃತಗೊಂಡಿರುವ ಭಾರಿ ಗಾತ್ರದ ಮತ್ತು ಪ್ರಾಚೀನ ಕಾಲದಲ್ಲಿ ‘ಮಮ್ಮಿ’ಗಳ ಹಾಗೆ ಪರಿಪಕ್ವವಾಗಿ ಸಂರಕ್ಷಿಸಲ್ಪಟ್ಟ ಹೆಣ್ಣು ವೂಲಿ ಮಮ್ಮೊತ್ (woolly mammoth) (ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸವಾಗಿತ್ತೆನ್ನಲಾಗಿರುವ ಭಾರಿ ಗಾತ್ರದ ಪ್ರಾಣಿ) ದೇಹವೊಂದು ಪತ್ತೆಯಾಗಿದೆ.
ಕ್ಲೋಂಡಿಕ್ ಚಿನ್ನದ ಕ್ಷೇತ್ರಗಳಲ್ಲಿ ಗಣಿಗಾರಿಕೆ ಮಾಡುವ ಕಾರ್ಮಿಕರು ಈ ಅಪರೂಪದ ಮತ್ತು ಅಸಾಮಾನ್ಯವೆನಿಸುವ ಅವಿಷ್ಕಾರವನ್ನು ಮಾಡಿದ್ದಾರೆ. ಯುಕಾನ್ ಸರ್ಕಾರದ ಪ್ರಕಾರ, ಹೆಣ್ಣು ವೂಲಿ ಮೊಮ್ಮೊತ್ ಗೆ ಟ್ರೊಂಡೆಕ್ ಹ್ವಾಚಿನ್‌ನ ಹಾನ್ ಭಾಷೆಯಲ್ಲಿ ‘ನನ್ ಚೋ ಗಾ’ ಎಂದು ಹೆಸರಿಸಲಾಗಿದೆ. ಇದು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಿದರೆ ‘ದೊಡ್ಡ ಪ್ರಾಣಿಯ ಮರಿ’ ಅಂತಾಗುತ್ತದೆ. ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಟ್ರೆಡಿಷನಲ್ ಪ್ರಾಂತ್ಯದ ಟ್ರಾಂಡಕ್ ಹ್ವಾಚಿನ್‌ನ ಕ್ಲೋಂಡಿಕ್ ಗೋಲ್ಡ್ ಫೀಲ್ಡ್‌ಗಳಲ್ಲಿನ ಯುರೇಕಾ ಕ್ರೀಕ್‌ನಲ್ಲಿ ಪರ್ಮಾಸಾಫ್ಟ್ ಮೂಲಕ ಉತ್ಖನನದಲ್ಲಿ ತೊಡಗಿದ್ದ ಕಾರ್ಮಿಕನಿಗೆ ಈ ಸಂರಕ್ಷಿತ ಶವ ಕಂಡಿದೆ.
Being part of the recovery of Nun cho ga, the baby woolly mammoth found in the permafrost in the Klondike this week (on Solstice and Indigenous Peoples’ Day!), was the most exciting scientific thing I have ever been part of, bar none. https://t.co/WnGoSo8hPk pic.twitter.com/JLD0isNk8Y
— Prof Dan Shugar (@WaterSHEDLab) June 24, 2022
‘ನನ್ ಚೋ ಗಾ ಆವಿಷ್ಕಾರವು ಉತ್ತರ ಅಮೆರಿಕಾದಲ್ಲಿ ಕಂಡುಬಂದಿರುವ ಅಥವಾ ಪತ್ತೆಯಾಗಿರುವ ಮೊದಲ ಸಂಪೂರ್ಣ ಮತ್ತು ಪರಿಪಕ್ವವಾಗಿ ಸಂರಕ್ಷಿಸಲ್ಪಟ್ಟ (ಮಮ್ಮಿಫೈಡ್) ವೂಲಿ ಮಮ್ಮೊತ್ ದೇಹವಾಗಿದೆ’ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. 30,000 ಸಾವಿರ ವರ್ಷಗಳ ಹಿಂದಿನ ಹಿಮಯುಗದ ಅವಶೇಷವಿರಬಹುದು ಹೇಳಲಾಗುತ್ತಿರುವ ವೂಲಿ ಮಮ್ಮೊತ್ ದೇಹದ ಮೇಲಿನ ಚರ್ಮ ಮತ್ತು ಕೂದಲು ತಮ್ಮ ನೈಜ್ಯತೆಯನ್ನು ಉಳಿಸಿಕೊಂಡಿವೆ. ಬದುಕಿದ್ದಾಗ ಇದು ಯುಕಾನ್ ಪ್ರಾಂತ್ಯದಲ್ಲಿ ಕಾಡು ಕುದುರೆ ಮತ್ತು ಗುಹೆಗಳಲ್ಲಿ ವಾಸವಾಗಿರುತ್ತಿದ್ದ ಸಿಂಹಗಳೊಂದಿಗೆ ಓಡಾಡಿಕೊಂಡಿರಬಹುದು, ಎಂದು ತಜ್ಞರು ಹೇಳುತ್ತಿದ್ದಾರೆ. ಇದರ ಫೋಟೋಗಳನ್ನು ಪ್ರೊಫೆಸರ್ ಡ್ಯಾನ್ ಶುಗಾರ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
Discovered by placer miner who called Grant Zazula @yukonberingia, who put out call to any geologists in area to recover before it thawed. We were incredibly lucky to be in Dawson w Jeff Bond & Derek Cronmiller from Yukon Geol Survey. Was a fast drive down 60km of mining roads.
— Prof Dan Shugar (@WaterSHEDLab) June 24, 2022
ಪ್ರಾಗ್ಜೀವಶಾಸ್ತ್ರಜ್ಞ ಡಾ ಗ್ರ್ಯಾಂಟ್ ಜಜೂಲಾ ಅವರು, ಈ ಪರಿಶೋಧನೆಯನ್ನು ಅತ್ಯದ್ಭುತ ಅಂತ ವರ್ಣಿಸಿದ್ದು ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಹಿಮಯುಗದ ಮಮ್ಮಿಫೈಡ್ ದೇಹವೊಂದು ಪತ್ತೆಯಾಗಿದೆ ಎಂದಿದ್ದಾರೆ.
‘ಇದನ್ನು ಹೇಗೆ ನಿರ್ವಹಿಸಬಹುದು ಅಂತ ನನಗೆ ಅರ್ಥವಾಗುತ್ತಿಲ್ಲ. ಆದರೆ ನಮ್ಮ ಪ್ರಾಮಾಣಿಕ ಅನಿಸಿಕೆ ಕೇಳುವುದಾದರೆ ಇದೊಂದು ವಿಸ್ಮಯಕಾರಿ ಅವಿಷ್ಕಾರವಾಗಿದೆ,’ ಎಂದು ಜುಜೂಲಾ ಹೇಳಿದ್ದಾರೆ.
‘ಅವಳಿಗೆ ಸೊಂಡಿಲು ಜೊತೆ ಬಾಲವೂ ಇದೆ. ಎರಡು ಚಿಕ್ಕ ಚಿಕ್ಕ ಕಿವಿಗಳು ಅದಕ್ಕಿವೆ. ಅವಳ ಸೊಂಡಿಲಿನ ಮುಂಭಾಗದಲ್ಲಿ ಇಕ್ಕಳದಂಥ ರಚನೆ ಇದೆ. ಪ್ರಾಯಶಃ ಅವಳು ಹುಲ್ಲು ಕೀಳಲು ಅದನ್ನು ಬಳಸುತ್ತಿದ್ದಿರಬೇಕು. ಅವಳ ಆಂಗಾಂಗ ರಚನೆಯೆಲ್ಲ ಅದ್ಭುತವಾಗಿದೆ ಮತ್ತು ಅವಳು ಸುಂದರಿಯಾಗಿದ್ದಳು ಅನ್ನೋದಲ್ಲಿ ಅನುಮಾನವೇ ಬೇಡ,’ ಎಂದು ಅವರು ಹೇಳಿದ್ದಾರೆ.
ವೂಲಿ ಮಮ್ಮೊತ್ ತನ್ನ ಅಳಿವಿನವರೆಗೆ ಹೋಲೋಸೀನ್ ಯುಗದ ಪ್ಲೆಸ್ಟೊಸೀನ್ ಅವಧಿಯಲ್ಲಿ ವಾಸಿಸುತ್ತಿತ್ತು. ಸುಮಾರು 800,000 ವರ್ಷಗಳ ಹಿಂದೆ ಈ ಪ್ರಾಣಿಗಳು ಪೂರ್ವ ಏಷ್ಯಾದ ಹುಲ್ಲುಗಾವಲು ಪ್ರಾಂತ್ಯದಿಂದ ಬೇರೆಯಾಗಲಾರಂಭಿಸಿದವು. ವೂಲಿ ಮಮ್ಮೊತ್ ಗಳ ಹತ್ತಿರದ ಸಂಬಂಧಿ ಅಂದರೆ ಏಷ್ಯನ್ ಆನೆ.
ಅವುಗಳ ಗಾತ್ರ ಹೆಚ್ಚು ಕಡಿಮೆ ಆಫ್ರಿಕನ್ ಆನೆಗಳಷ್ಟೇ ಆಗಿತ್ತು. ಸೈಬೀರಿಯಾ ಮತ್ತು ಅಲಾಸ್ಕಾ ಪ್ರದೇಶಗಳಲ್ಲಿ ಈ ಪ್ರಾಣಿಗಳ ಪಳಯುಳಿಕೆಗಳು ದೊರೆತ ಕಾರಣ ಹಿಮಯುಗದ ಬೇರೆ ಪ್ರಾಣಿಗಳಿಗಿಂತ ಇವುಗಳ ಮೇಲೆ ಹೆಚ್ಚಿನ ಅಧ್ಯಯನ ನಡೆದಿದೆ.
ಇದನ್ನೂ ಓದಿ: Trending: 10 ತಿಂಗಳ ಹಿಂದೆ ನದಿಗೆ ಬಿದ್ದ ಐಫೋನ್ ಪತ್ತೆ, ನಂಬಲು ಅ’ಸಾಧ್ಯ’ವಾಗಿರುವುದು ಏನು ಗೊತ್ತಾ?