Viral News: 30 ಸಾವಿರ ವರ್ಷ ಹಳೆಯ ಚರ್ಮ ಮತ್ತು ಕೂದಲಿರುವ ಅಪರೂಪದ ಉಣ್ಣೆಯ ಬೃಹದ್ಗಜ ಪತ್ತೆ
ವಿಸ್ಮಯಕಾರಿಯಾಗಿರುವ ಬೃಹದ್ಗಜವು ಅದರ ಚರ್ಮ ಮತ್ತು ಕೂದಲನ್ನು ಹಾಗೇ ಉಳಿಸಿಕೊಂಡಿದೆ. ಇದು ಸುಮಾರು 30 ವರ್ಷಗಳ ಹಿಂದೆ ಹಿಮಯುಗದಲ್ಲಿ ಕಂಡು ಬಂದಿದೆ ಇದರ ದೇಹಗಳು ಕೂಡ ಹೆಪ್ಪುಗಟ್ಟಿತ್ತದೆ ಎಂದು ಹೇಳಲಾಗಿದೆ.
ಇದೊಂದು ವಿಚಿತ್ರವಾಗಿದ್ದರು, ನಿಜ ಜೂನ್ 21 ರಂದು ಕೆನಡಾದ ಉತ್ತರದಲ್ಲಿ ಚರ್ಮ ಮತ್ತು ಕೂದಲನ್ನು ಹೊಂದಿರುವ ಉಣ್ಣೆಯ ಬೃಹದ್ಗಜದ ದೇಹದ ಪ್ರಾಣಿಯೊಂದು ಪತ್ತೆಯಾಗಿದೆ. ಯುಕಾನ್ ಸರ್ಕಾರ ಟ್ರೊಂಡೆಕ್ ಹ್ವಾಚಿನ್ ಪ್ರಕಾರ, ಕೆನಡಾದಲ್ಲಿ ಚಿನ್ನದ ಗಣಿಗಾರರೊಬ್ಬರು ಈ ಉಣ್ಣೆಯ ಬೃಹದ್ಗಜವನ್ನು ಮಂಗಳವಾರ ಕಂಡುಹಿಡಿದಿದ್ದಾರೆ. ಹೆಣ್ಣು ಪ್ರಾಣಿಯ ನನ್ ಚೋ ಗಾ ಎಂದು ಹೆಸರಿಡಲಾಗಿದೆ, ಇದರರ್ಥ ಹಾನ್ ಭಾಷೆಯಲ್ಲಿ “ದೊಡ್ಡ ಮರಿ ಪ್ರಾಣಿ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ನನ್ ಚೋ ಗಾದ ಆವಿಷ್ಕಾರವು ಉತ್ತರ ಅಮೆರಿಕಾದಲ್ಲಿ ಕಂಡುಬಂದಿರುವ ಮೊದಲ ಉಣ್ಣೆಯ ಬೃಹದ್ಗಜ ಎಂದು ವರದಿ ತಿಳಿಸಿದೆ.
ವಿಸ್ಮಯಕಾರಿಯಾಗಿರುವ ಬೃಹದ್ಗಜವು ಅದರ ಚರ್ಮ ಮತ್ತು ಕೂದಲನ್ನು ಹಾಗೇ ಉಳಿಸಿಕೊಂಡಿದೆ. ಇದು ಸುಮಾರು 30 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಕಂಡು ಬಂದಿದೆ. ಇದರ ದೇಹಗಳು ಕೂಡ ಹೆಪ್ಪುಗಟ್ಟಿತ್ತದೆ ಎಂದು ಹೇಳಲಾಗಿದೆ. ತಜ್ಞರ ಪ್ರಕಾರ, ಉಣ್ಣೆಯ ಬೃಹದ್ಗಜವು ಜೀವಂತವಾಗಿರುವಾಗ ಕಾಡು ಕುದುರೆಗಳು ಮತ್ತು ಗುಹೆ ಸಿಂಹಗಳೊಂದಿಗೆ ಯುಕಾನ್‌ನಲ್ಲಿ ಸುತ್ತಾಡುತ್ತಿತ್ತು ಎನ್ನಲಾಗಿದೆ.
ಪ್ಯಾಲಿಯಂಟಾಲಜಿಸ್ಟ್ ಡಾ. ಗ್ರಾಂಟ್ ಜಝುಲಾ ಅವರು ಕಂಡುಹಿಡಿದ ಅತ್ಯಂತ ನಂಬಲಾಗದ ಹಿಮಯುಗದ ಪ್ರಾಣಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಇದೀಗ ನಿಮ್ಮ ಈ ಸಾಧನೆಗೆ ನಾನು ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದು ಬಾಲವನ್ನು ಹಾಗೂ ಚಿಕ್ಕ ಚಿಕ್ಕ ಕಿವಿಗಳನ್ನು ಹೊಂದಿದೆ. ತುಂಬಾ ಸುಂದರವಾಗಿದೆ ಮತ್ತು ಇದರ ಚಲನವಲನಗಳು ಕೂಡ ಸೂಕ್ಷ್ಮವಾಗಿರುತ್ತದೆ.
Being part of the recovery of Nun cho ga, the baby woolly mammoth found in the permafrost in the Klondike this week (on Solstice and Indigenous Peoples’ Day!), was the most exciting scientific thing I have ever been part of, bar none. https://t.co/WnGoSo8hPk pic.twitter.com/JLD0isNk8Y
— Prof Dan Shugar (@WaterSHEDLab) June 24, 2022
ಉಣ್ಣೆಯ ಬೃಹದ್ಗಜವು ಹೋಲೋಸೀನ್ ಯುಗದಲ್ಲಿ ಅಳಿವಿನ ಅಂಚಿನಲ್ಲಿದೆ. ಪೂರ್ವ ಏಷ್ಯಾದಲ್ಲಿ ಸುಮಾರು 800,000 ವರ್ಷಗಳ ಹಿಂದೆ ಬೃಹದ್ಗಜದಿಂದ ಬೇರೆಯಾಗಲು ಪ್ರಾರಂಭಿಸಿತ್ತು, ಏಷ್ಯನ್ ಆನೆಗಳು ಇದಕ್ಕೆ ಹತ್ತಿರದ ಸಸ್ತನಿಯಾಗಿದೆ. ಏಕೆಂದರೆ ಇದರ ಮುಖವು ಕೂಡ ಏಷ್ಯನ್ ಆನೆಯಂತಿದೆ. ಇದು ಆಧುನಿಕ ಆಫ್ರಿಕನ್ ಆನೆಗಳ ಗಾತ್ರವನ್ನು ಹೊಂದಿವೆ. ಸೈಬೀರಿಯಾ ಮತ್ತು ಅಲಾಸ್ಕಾದಲ್ಲಿ ಆವಿಷ್ಕಾರದಿಂದಾಗಿ ಈ ಜಾತಿಯ ಪ್ರಾಣಿಗಳನ್ನು ಕಾಣಬಹುದು.
ಇದನ್ನೂ ಓದಿ: Viral Video: ಪ್ರಥಮ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡ ಮುದ್ದು ಪಾಪಯ್ಯ