‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿ. ಸುಕೇಶ್ ಜತೆ ಜಾಕ್ವೆಲಿನ್ ನಿರಂತರ ಸಂಪರ್ಕದಲ್ಲಿ ಇದ್ದರು. ಈ ಕಾರಣಕ್ಕೆ ಇಡಿ ಅಧಿಕಾರಿಗಳ ದೃಷ್ಟಿ ಜಾಕ್ವೆಲಿನ್ ಮೇಲೆ ಬಿದ್ದಿದೆ.

‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​
ಜಾಕ್ವೆಲಿನ್
TV9kannada Web Team

| Edited By: Rajesh Duggumane

Jun 27, 2022 | 4:37 PM

ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ‘ವಿಕ್ರಾಂತ್​ ರೋಣ’ ಸಿನಿಮಾ (Vikrant Rona) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಬೆಂಗಳೂರು, ಮುಂಬೈಗೆ ತೆರಳಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಈ ಮಧ್ಯೆ ಅವರು ಒಂದು ದಿನ ಬ್ರೇಕ್ ತೆಗೆದುಕೊಂಡು, ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಒಳಪಟ್ಟಿದ್ದಾರೆ. ನೂರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ (ಜೂನ್ 27) ನವದೆಹಲಿಯ ಕಚೇರಿಗೆ ತೆರಳಿರುವ ಜಾಕ್ವೆಲಿನ್ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿ. ಸುಕೇಶ್ ಜತೆ ಜಾಕ್ವೆಲಿನ್ ನಿರಂತರ ಸಂಪರ್ಕದಲ್ಲಿ ಇದ್ದರು. ಸುಕೇಶ್​ನಿಂದ ಹಲವು ದುಬಾರಿ ಗಿಫ್ಟ್​​ಗಳನ್ನು ಪಡೆದಿದ್ದರು. ಈ ಕಾರಣಕ್ಕೆ ಇಡಿ ಅಧಿಕಾರಿಗಳ ದೃಷ್ಟಿ ಜಾಕ್ವೆಲಿನ್ ಮೇಲೆ ಬಿದ್ದಿದೆ. ಈ ಕಾರಣಕ್ಕೆ ಅವರನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಬಾಲಿವುಡ್​ ನಟಿ ನೋರಾ ಫತೇಹಿ ಅವರ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಕಳೆದ ವರ್ಷ ಅವರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಜಾಕ್ವೆಲಿನ್​ಗೂ ತನಗೂ ಸಂಬಂಧ ಇರುವ ಬಗ್ಗೆ ಸುಕೇಶ್ ಹೇಳಿಕೆ ನೀಡಿದ್ದ. ಜಾಕ್ವೆಲಿನ್ ಜತೆ ಕಳೆದ ಖಾಸಗಿ ಕ್ಷಣದ ಫೋಟೋಗಳನ್ನು ಆತ ಲೀಕ್ ಮಾಡಿದ್ದ. ಇದರಿಂದ ನಟಿಗೆ ಸಾಕಷ್ಟು ಮುಜುಗರ ಎದುರಾಗಿತ್ತು. ‘ಸುಕೇಶ್ ಓರ್ವ ಉದ್ಯಮಿ ಆಗಿ ನನಗೆ ಗೊತ್ತು. ಆತ ಮಾಡಿದ ವಂಚನೆಗೂ ತಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಜಾಕ್ವೆಲಿನ್ ಹೇಳಿಕೆ ನೀಡಿದ್ದರು.

ಏಪ್ರಿಲ್​ ತಿಂಗಳಲ್ಲಿ ಇಡಿ ಅಧಿಕಾರಿಗಳು ಜಾಕ್ವೆಲಿನ್​ಗೆ ಸಂಬಂಧಿಸಿದ 7.12 ಕೋಟಿ ರೂಪಾಯಿ ಎಫ್​ಡಿ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್​ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಹಣವನ್ನು ಇಡಿ ಅಧಿಕಾರಿಗಳು ಅಕ್ರಮ ಎಂದು ಪರಿಗಣಿಸಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ವಿಶೇಷ ಹಾಡಿಗೆ ಜಾಕ್ವೆಲಿನ್ ಹೆಜ್ಜೆ ಹಾಕಿದ್ದು, ಕೆಲ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ನಟಿಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ‘ವಿಕ್ರಾಂತ್​ ರೋಣ’ ಮೂಲಕ ಮೊದಲ ಬಾರಿಗೆ ಅವರು ಕನ್ನಡಕ್ಕೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ಗೆ ಸಿಕ್ತು ಮತ್ತೊಂದು ಬ್ಯಾಟ್ ಗಿಫ್ಟ್​; ಇದರಲ್ಲಿದೆ ಹಲವು ದಿಗ್ಗಜರ ಆಟೋಗ್ರಾಫ್​

ಇದನ್ನೂ ಓದಿ

‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ವೇಳೆ ಕಪ್ಪುಡುಗೆ ತೊಟ್ಟು ಮಿಂಚಿದ ಜಾಕ್ವೆಲಿನ್ ಫರ್ನಾಂಡಿಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada