Enforcement Directorate: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ

ಫೆಮಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಶಿಯೋಮಿಯಿಂದ ಜಾರಿ ನಿರ್ದೇಶನಾಲಯವು 5551 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.

Enforcement Directorate: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 30, 2022 | 8:02 PM

ಜಾರಿ ನಿರ್ದೇಶನಾಲಯವು (Enforcement Directorate) ಏಪ್ರಿಲ್ 30ರ ಶನಿವಾರದಂದು ಚೀನಾದ ಗ್ಯಾಜೆಟ್ ದೈತ್ಯ ಕಂಪೆನಿಯ ಸ್ಥಳೀಯ ಅಂಗ ಸಂಸ್ಥೆಯಾದ ಶಿಯೋಮಿ (Xiaomi) ಇಂಡಿಯಾದಿಂದ 5,551.27 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದು, “ಕಂಪೆನಿಯಿಂದ ಕಾನೂನುಬಾಹಿರವಾಗಿ ಮಾಡಿದ ಬಾಹ್ಯ ಹಣ ರವಾನೆ”ಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫೆಮಾ (FEMA) ನಿಬಂಧನೆಗಳ ಅಡಿಯಲ್ಲಿ ಕಂಪೆನಿ ಬ್ಯಾಂಕ್ ಖಾತೆಗಳಿಂದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ. ಆರೋಪಿಸಲಾದ ಅಕ್ರಮ ಹಣ ರವಾನೆಯ ತನಿಖೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು, “ಕಂಪೆನಿಯು 5551.27 ಕೋಟಿ ರೂಪಾಯಿಗಳಿಗೆ ಸಮಾನವಾದ ವಿದೇಶಿ ಕರೆನ್ಸಿಯನ್ನು ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ರವಾನೆ ಮಾಡಿದೆ, ಇದರಲ್ಲಿ ಒಂದು ಶಿಯೋಮಿ ಸಮೂಹದ ರಾಯಲ್ಟಿಯ ಸೋಗಿನಲ್ಲಿದೆ.”

“ರಾಯಲ್ಟಿ ಹೆಸರಿನಲ್ಲಿ ಅಂತಹ ದೊಡ್ಡ ಮೊತ್ತವನ್ನು ಅದರ ಚೀನೀ ಮಾತೃಸಂಸ್ಥೆಯ ಗುಂಪು ಘಟಕಗಳ ಸೂಚನೆ ಮೇರೆಗೆ ರವಾನೆ ಮಾಡಲಾಗಿದೆ,” ಎಂದು ಅದು ಹೇಳಿದೆ. “ಅಮೆರಿಕ ಮೂಲದ ಸಂಬಂಧ ಇರದ ಇತರ ಎರಡು ಘಟಕಗಳಿಗೆ” ರವಾನೆಯಾದ ಮೊತ್ತವು “ಶಿಯೋಮಿ ಗುಂಪಿನ ಘಟಕಗಳ ಅಂತಿಮ ಅನುಕೂಲಕ್ಕಾಗಿ” ಎಂದು ಇಡಿ ಗಮನಿಸಿದೆ. ಎಂಐ (MI) ಬ್ರ್ಯಾಂಡ್‌ನ ಅಡಿಯಲ್ಲಿ ಭಾರತದಲ್ಲಿ ಮೊಬೈಲ್ ಫೋನ್‌ಗಳ ವಿತರಕರಾಗಿರುವ ಶಿಯೋಮಿ ಇಂಡಿಯಾ 2014ರಲ್ಲಿ ದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು 2015ರಿಂದ ಬಾಹ್ಯ ಹಣ ರವಾನೆ ಮಾಡುತ್ತಿದೆ ಎಂದು ಇಡಿ ಹೇಳಿದೆ.

“ಶಿಯೋಮಿ ಇಂಡಿಯಾ ಅಂತಹ ಮೊತ್ತವನ್ನು ವರ್ಗಾಯಿಸಿದ ಮೂರು ವಿದೇಶಿ ಮೂಲದ ಘಟಕಗಳಿಂದ ಯಾವುದೇ ಸೇವೆಯನ್ನು ಪಡೆದಿಲ್ಲ,” ಇದು “ಗುಂಪು ಘಟಕಗಳ ನಡುವೆ ರಚಿಸಲಾದ ವಿವಿಧ ಸಂಬಂಧವಿಲ್ಲದ ದಾಖಲಾತಿಗಳ ಅಡಿಯಲ್ಲಿ”, ಕಂಪೆನಿಯು ಸೋಗಿನಲ್ಲಿ ಈ ಮೊತ್ತವನ್ನು ರವಾನಿಸಿದೆ ಎಂದು ಹೇಳಿದೆ. ವಿದೇಶಕ್ಕೆ ರಾಯಲ್ಟಿ ರೂಪದಲ್ಲಿ ಹಣ ಕಳುಹಿಸಿರುವುದು ಫೆಮಾದ ಸೆಕ್ಷನ್ 4ರ ಉಲ್ಲಂಘನೆಯಾಗುತ್ತದೆ. ವಿದೇಶಕ್ಕೆ ಹಣವನ್ನು ರವಾನೆ ಮಾಡುವಾಗ ಕಂಪೆನಿಯು ಬ್ಯಾಂಕ್‌ಗಳಿಗೆ ದಾರಿ ತಪ್ಪಿಸುವ ಮಾಹಿತಿಯನ್ನು ಸಹ ನೀಡಿದೆ ಎಂದು ಇಡಿ ಸೇರಿಸಿದೆ.

ಈ ವರದಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಇಡಿ ಕ್ರಮದ ಕುರಿತು ಶಿಯೋಮಿ ಇಂಡಿಯಾ ಇನ್ನೂ ಹೇಳಿಕೆಯನ್ನು ನೀಡಿರಲಿಲ್ಲ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್​ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು