Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಚೀನಾ ಮೂಲದ ಮೊಬೈಲ್ ಫೋನ್ ತಯಾರಕ ಕಂಪೆನಿಗಳಾದ ಒಪ್ಪೋ, ಒನ್ಪ್ಲಸ್, ಶಿಯೋಮಿ ಕಚೇರಿ ಆವರಣದ ಮೇಲೆ ಆದಾಯ ತೆರಿಗೆ ಇಲಾಖೆಯು ತೆರಿಗೆ ಕಳವಿನ ಆರೋಪದಲ್ಲಿ ದಾಳಿ ನಡೆಸಿದೆ.
ತೆರಿಗೆ ವಂಚನೆ ಆರೋಪದ ಮೇಲೆ ಮೊಬೈಲ್ ಫೋನ್ ತಯಾರಕ ಕಂಪೆನಿ ಕಚೇರಿ ಆವರಣಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೂಲಗಳು ಸಿಎನ್ಬಿಸಿ- 18ಗೆ ತಿಳಿಸಿರುವುದಾಗಿ ವರದಿ ಮಾಡಲಾಗಿದೆ. ಒಪ್ಪೋ (Oppo), ಶಿಯೋಮಿ (Xiaomi) ಮತ್ತು ಒನ್ಪ್ಲಸ್ (OnePlus) ಸೇರಿದಂತೆ ಪ್ರಮುಖ ಫೋನ್ ತಯಾರಕರ ಕಚೇರಿಗಳ ಮೇಲೆ ಅಖಿಲ ಭಾರತ ಮಟ್ಟದಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ. “ಒಪ್ಪೋ, ಶಿಯೋಮಿ ಮತ್ತು ಒನ್ಪ್ಲಸ್ನ ಪ್ರಮುಖ ವಿತರಕರ ಮೇಲೆ ದೇಶಾದ್ಯಂತ ಶೋಧ ಕಾರ್ಯಾಚರಣೆ ನಡೆಯುತ್ತಿದೆ,” ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಒಪ್ಪೋ, ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆ ಎಂದು ಹೇಳಿದೆ. “ಭಾರತದಲ್ಲಿ ಹೂಡಿಕೆ ಮಾಡಿದ ಪಾಲುದಾರರಾಗಿ, ನಾವು ಇಲ್ಲಿನ ಕಾನೂನನ್ನು ಹೆಚ್ಚು ಗೌರವಿಸುತ್ತೇವೆ ಮತ್ತು ಪಾಲಿಸುತ್ತೇವೆ. ಕಾರ್ಯವಿಧಾನದ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾವು ಸಂಪೂರ್ಣವಾಗಿ ಸಹಕರಿಸುವುದನ್ನು ಮುಂದುವರಿಸುತ್ತೇವೆ,” ಎಂದು ಕಂಪೆನಿಯ ವಕ್ತಾರರು ಹೇಳಿರುವುದಾಗಿ ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದು ಮೊಬೈಲ್ ಫೋನ್ ತಯಾರಕ ಶಿಯೋಮಿ ಸಹ “ಇದು ಭಾರತೀಯ ಕಾನೂನುಗಳಿಗೆ ಅನುಸಾರವಾಗಿದೆ,” ಎಂದು ಹೇಳಿದೆ. “ಜವಾಬ್ದಾರಿಯುತ ಕಂಪೆನಿಯಾಗಿ ನಾವು ಭಾರತೀಯ ಕಾನೂನುಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಾಮುಖ್ಯ ನೀಡುತ್ತೇವೆ. ಭಾರತದಲ್ಲಿ ಹೂಡಿಕೆ ಮಾಡಿದ ಪಾಲುದಾರರಾಗಿ, ಅಗತ್ಯವಿರುವ ಎಲ್ಲ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ,” ಎಂದು ಶಿಯೋಮಿ ವಕ್ತಾರರು ಹೇಳಿದ್ದಾರೆ.
ಯಾವ ನಿರ್ದಿಷ್ಟ ಕಾರಣಕ್ಕೆ ಈ ಶೋಧ ನಡೆದಿದೆ ಮತ್ತು ಯಾವ ಕಾರಣಕ್ಕೆ ವಶ ಪಡಿಸಿಕೊಳ್ಳಲಾಗಿದೆ ಮತ್ತು ಇತರ ವಿವರಗಳು ಇನ್ನೂ ಲಭ್ಯವಿಲ್ಲ.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ವೇಳೆ ಈ 4 ಕ್ಲೇಮ್ಗಳ ಬಗ್ಗೆ ಗಮನ ನೀಡದಿದ್ದರೆ ನುಕ್ಸಾನ್ ಆದೀತು ಎಚ್ಚರ
Published On - 12:16 pm, Thu, 23 December 21