Tokenisation: ಜನವರಿ 1 ರಿಂದ ಆನ್​ಲೈಲ್ ಪೇಮೆಂಟ್ ನಿಮಯದಲ್ಲಿ ಬದಲಾವಣೆ: ಹೊಸ ರೂಲ್ಸ್ ಬಗ್ಗೆ ಇಲ್ಲಿದೆ ಮಾಹಿತಿ

Online Payments: ಇನ್ಮುಂದೆ ಶಾಪಿಂಗ್ ಮಾಡಲು ಡಿಜಿಟಲ್ ಪಾವತಿಗಾಗಿ 16 ಅಂಕಿಗಳ ಕಾರ್ಡ್ ವಿವರಗಳು ಮತ್ತು ಕಾರ್ಡ್ ಅವಧಿ ಮೀರಿದ ದಿನಾಂಕವನ್ನು ಇನ್ನು ಮುಂದೆ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಜನವರಿ 1 ರಿಂದ ಆನ್​ಲೈಲ್ ಪೇಮೆಂಟ್ ನಿಮಯದಲ್ಲಿ ಹೊಸ ಬದಲಾವಣೆ ಆಗಲಿದೆ.

Tokenisation: ಜನವರಿ 1 ರಿಂದ ಆನ್​ಲೈಲ್ ಪೇಮೆಂಟ್ ನಿಮಯದಲ್ಲಿ ಬದಲಾವಣೆ: ಹೊಸ ರೂಲ್ಸ್ ಬಗ್ಗೆ ಇಲ್ಲಿದೆ ಮಾಹಿತಿ
Online Payments Rules
Follow us
TV9 Web
| Updated By: Vinay Bhat

Updated on: Dec 23, 2021 | 10:08 AM

ಹೊಸ ವರ್ಷಕ್ಕೆ ಹೊಸ ನಿಯಮ ಎಂಬಂತೆ ಜನವರಿ 1 ರಿಂದ ಆನ್​ಲೈನ್ ಪೇಮೆಂಟ್​ನಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಆನ್​ಲೈನ್ ಪಾವತಿಯನ್ನು(Online payment) ಹೆಚ್ಚು ಸುರಕ್ಷಿತವಾಗಿಡುವ ದೃಷ್ಟಿಯಿಂದ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸುರಕ್ಷತೆ ಹೆಚ್ಚಿಸಲು ಆನ್​ಲೈನ್ ವ್ಯಾಪಾರಿಗಳು (online merchants) ಹಾಗೂ ಪೇಮೆಂಟ್ ಗೇಟ್​​ವೇಗಳ (payment gateways) ಬಳಿಯಿರುವ ಕಾರ್ಡ್ ಮಾಹಿತಿಗಳನ್ನು ಅಳಿಸಿ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್  (RBI) ಈ ಹಿಂದೆಯೇ  ನಿರ್ದೇಶನ ನೀಡಿದೆ. ಅಲ್ಲದೆ, ಈ ಕೆಲಸವನ್ನು ಜನವರಿ 1 ಒಳಗೆ ಮಾಡಿ ಮುಗಿಸಲು ಗಡುವು ವಿಧಿಸಿದೆ. ಆ ಬಳಿಕ ಆನ್ ಲೈನ್ ವ್ಯಾಪಾರಿಗಳು ವಹಿವಾಟುಗಳನ್ನು ನಡೆಸಲು ಟೋಕನೈಸೇಷನ್ (tokenisation) ವ್ಯವಸ್ಥೆಯನ್ನು ಅಳವಡಿಸಿಕೊಳ್ಳೋದು ಕಡ್ಡಾಯವಾಗಿದೆ. ಈ ಮೂಲಕ ಇನ್ಮುಂದೆ ಶಾಪಿಂಗ್ ಮಾಡಲು ಡಿಜಿಟಲ್ ಪಾವತಿಗಾಗಿ 16 ಅಂಕಿಗಳ ಕಾರ್ಡ್ ವಿವರಗಳು ಮತ್ತು ಕಾರ್ಡ್ ಅವಧಿ ಮೀರಿದ ದಿನಾಂಕವನ್ನು ಇನ್ನು ಮುಂದೆ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.

ಆರ್​ಬಿಐ ಆದೇಶದ ಪ್ರಕಾರ ಟೋಕನೈಸೇಷನ್ ಎಂಬ ಹೊಸ ವಿಧಾನದ ಮೂಲಕ ಸಂಪರ್ಕರಹಿತ ಪಾವತಿಗಳನ್ನು ತ್ವರಿತವಾಗಿ ಮಾಡಬಹುದು. ಟೋಕನೈಸೇಶನ್ ಎನ್ನುವುದು ಕಾರ್ಡ್ ಮಾಹಿತಿಯನ್ನು ಟೋಕನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವಾಗಿದೆ. ಗ್ರಾಹಕರ ವೈಯಕ್ತಿಕ ಮಾಹಿತಿಗೆ ಧಕ್ಕೆಯಾಗದಂತೆ ಖರೀದಿಗಳು ಸುಗಮವಾಗಿ ನಡೆಯುತ್ತವೆ ಎಂದು ಟೋಕನೈಸೇಶನ್ ಖಾತರಿಪಡಿಸುತ್ತದೆ.

RBI ಯ ಟೋಕನೈಸೇಶನ್ ನೀತಿಯು ಈ ವಿಧಾನಗಳನ್ನು ಹೇಗೆ ಕಲ್ಪಿಸಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂಬುದನ್ನು ಗುರುತಿಸುತ್ತದೆ. ನಿಮ್ಮ ಡೆಬಿಟ್ ಕಾರ್ಡ್ ಬದಿಯಲ್ಲಿರುವ CVV ಸಂಖ್ಯೆಯು ಸಂಪರ್ಕರಹಿತ ಬ್ಯಾಂಕಿಂಗ್‌ಗೆ ಇನ್ನು ಮುಂದೆ ಅಗತ್ಯವಿರುವುದಿಲ್ಲ, ಇದು ಸಂಪೂರ್ಣ ನೆಟ್‌ವರ್ಕ್ ಅನ್ನು ಸುರಕ್ಷಿತ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತದೆ.

ಈ ಹಿಂದೆ ಆನ್ ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಕಾರ್ಡ್ ಆನ್ ಫೈಲ್ (CoF)ನಲ್ಲಿ ಸಂಗ್ರಹಿಸಿಡುತ್ತಿದ್ದರು. ಇದರಿಂದ ನೀವು ನಿರ್ದಿಷ್ಟಆನ್ ಲೈನ್ ತಾಣದಲ್ಲಿ ಮೊದಲ ಬಾರಿಗೆ  ಶಾಪಿಂಗ್ ಮಾಡೋವಾಗ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ನೀಡಿದರೆ ಸಾಕು, ಮುಂದಿನ ಬಾರಿ ಶಾಪಿಂಗ್ ಮಾಡುವಾಗ ಈ ಮಾಹಿತಿಗಳನ್ನು ಇನ್ನೊಮ್ಮೆ ನೀಡಬೇಕಾದ ಅಗತ್ಯವಿಲ್ಲ. ಆದರೆ ಇದ್ರಿಂದ ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಸೈಬರ್ ವಂಚಕರು ಕದ್ದು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆನ್ ಲೈನ್ ಪಾವತಿ ಸಮಯದಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಹೆಚ್ಚು ಸುರಕ್ಷಿತವಾಗಿಡೋ ಉದ್ದೇಶದಿಂದ ಆರ್ ಬಿಐ ಆನ್ ಲೈನ್ ವ್ಯಾಪಾರಿಗಳು ಹಾಗೂ ಗೇಟ್ ವೇಗಳು ಜನವರಿ 1ರಿಂದ ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಿಸುವಂತಿಲ್ಲ.ಇದರ ಬದಲು ಟೋಕನೈಸೇಷನ್ ವ್ಯವಸ್ಥೆ ಅಳವಡಿಸಿಕೊಳ್ಳಬಹುದು.

ಏನು ಪ್ರಯೋಜನ?:

ಟೋಕನೈಸೇಷನ್ ಡೇಟಾ  ಮಾಹಿತಿ ಕಳ್ಳತನ ಅತವಾ ಒಳನುಗ್ಗುವಿಕೆಯನ್ನು ನಿಖರವಾಗಿ ತಡೆಯದಿದ್ದರೂ, ಇದರ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಟೋಕನೈಸೇಷನ್ ಸಾಧನಗಳೊಂದಿಗೆ ಶಾಪಿಂಗ್ ಅನ್ನು ಸುಲಭ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತದೆ. POS ಚಟುವಟಿಕೆಗಳು, ಪ್ರಯಾಣದಲ್ಲಿರುವಾಗ ಪಾವತಿಗಳವರೆಗೆ, ನಿಯಮಿತ ಫ್ಲಿಪ್​ಕಾರ್ಟ್​, ಅಮೆಜಾನ್​ನಂತಹ ಇ-ಕಾಮರ್ಸ್‌ನಿಂದ ಆಧುನಿಕ ಅಪ್ಲಿಕೇಶನ್ ಪಾವತಿಗಳಲ್ಲಿ ಟೋಕನಸೇಶನ್ ಮೂಲಕ ಹಣ ಪಾವತಿಸುವ ಆವಕಾಶಗಳಿವೆ. ಟೋಕನೈಸ್ ಮಾಡಿದ ಕಾರ್ಡ್‌ಗಳನ್ನು ನಿರ್ವಹಿಸಲು, ಸರಬರಾಜುದಾರ ಬ್ಯಾಂಕ್ ಪ್ರತ್ಯೇಕ ಇಂಟರ್ಫೇಸ್ ಅನ್ನು ನೀಡುತ್ತದೆ (ಅದರ ಸ್ವಂತ ವೆಬ್‌ಸೈಟ್‌ನಲ್ಲಿ). ಕಾರ್ಡ್ ಸದಸ್ಯರು ಯಾವುದೇ ಸಮಯದಲ್ಲಿ ಟೋಕನ್‌ಗಳನ್ನು ಅಳಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ.

ಟೋಕನಿಸ್ಡ್ ಕಾರ್ಡ್ ಹೇಗೆ ಬಳಸುವುದು?

ಟೋಕನೈಸೇಷನ್ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದೆ. ಬಳಕೆದಾರರು ತಮಗೆ ಬೇಕಾದಷ್ಟು ಕಾರ್ಡ್ ಗಳನ್ನು ಟೋಕ್ಯಾನಿಸ್ ಮಾಡಬಹುದು. ಆದಾಗ್ಯೂ, ದೇಶೀಯ ಕಾರ್ಡ್ ಗಳು ಮಾತ್ರ ಪ್ರಸ್ತುತ ನಿಯಮಗಳಿಗೆ ಒಳಪಟ್ಟಿರುತ್ತವೆ. ಟೋಕನೈಸೇಷನ್ ವಿದೇಶಿ ಕಾರ್ಡ್ ಗಳಿಗೆ ಅನ್ವಯಿಸುವುದಿಲ್ಲ. ಬಳಕೆದಾರರು ಉತ್ಪನ್ನಗಳನ್ನು ಖರೀದಿಸುವಾಗ ಶಾಪಿಂಗ್ ವೆಬ್ ಸೈಟ್ ನ ಚೆಕ್-ಔಟ್ ಪುಟದಲ್ಲಿ ಕಾರ್ಡ್ ವಿವರಗಳನ್ನು ನಿಖರವಾಗಿ ನಮೂದಿಸಬೇಕು. ಅಲ್ಲದೆ, ಟೋಕನೈಸೇಷನ್ ಅನ್ನು ಆಯ್ಕೆ ಮಾಡಬೇಕು. ಆನ್ ಲೈನ್ ನಲ್ಲಿ ಉತ್ಪನ್ನಗಳನ್ನು ಖರೀದಿಸುವಾಗ ಬಳಕೆದಾರರು ತಮ್ಮ ಕಾರ್ಡ್ ಮಾಹಿತಿಯನ್ನು ಸಲ್ಲಿಸಬೇಕು. ನಂತರ ಟೋಕನೈಸೇಷನ್ ಆಯ್ಕೆ ಮಾಡಿ. ಪಾವತಿಗಳ ಸಮಯದಲ್ಲಿ ಇನ್ ಪುಟ್ ಅನ್ನು ಖಚಿತಪಡಿಸಿಕೊಳ್ಳಲು ಟೋಕನ್ ಗಳು ಸಹಾಯ ಮಾಡುತ್ತದೆ. ಈ ವಿಧಾನವು ಆನ್ ಲೈನ್ ವಂಚನೆಯನ್ನು ತಡೆಗಟ್ಟುತ್ತದೆ. ಹ್ಯಾಕರ್ ಟೋಕನ್ ನಿಂದ ಖರೀದಿದಾರರ ಮಾಹಿತಿಯನ್ನು ಸಂಗ್ರಹಿಸುವುದು ಸುಲಭವಲ್ಲ.

Stock Market investors wealth: ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು 6.56 ಲಕ್ಷ ಕೋಟಿ ರೂಪಾಯಿ ಹೆಚ್ಚಳ

(Online payment tokenisation new rules will come into effect from January 1 All you need to know)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?