ಮುಳುಬಾಗಿಲುನಲ್ಲಿ ಮಹಿಳೆಯೊಬ್ಬರನ್ನು ಅಟ್ಟಾಡಿಸಿ ನಕಲಿ ಚಿನ್ನದ ಸರ ದೋಚಿದ ಸರಗಳ್ಳರ ಜೋಡಿ
ಮುಳುಬಾಗಿಲು ದೊಡ್ಡ ಊರೇನಲ್ಲ. ಹಾಗಾಗಿ ಕಳ್ಳರನ್ನು ಗುರುತು ಹಿಡಿಯುವುದು ಮಹಿಳೆಗೆ ಕಷ್ಟವಾಗಲಿಕ್ಕಿಲ್ಲ. ಕಳ್ಳರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಚಿಕ್ಕ ಊರುಗಳಲ್ಲಿ ಕಳ್ಳತನ ನಡೆಯುತ್ತವೆಯೇ ಹೊರತು ಸರಗಳ್ಳತನ ದ ಪ್ರಕರಣಗಳು ಕಡಿಮೆ. ಈ ಕಳ್ಳರ ಡೇರ್ ಡೆವಿಲ್ ಕೃತ್ಯ ನೋಡಿದರೆ ಅವರು ಮುಳುಬಾಗಿಲು ಪೊಲೀಸರನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದಾರೆ.
ಕೋಲಾರ, ಜೂನ್ 26: ಕರ್ನಾಟಕದಲ್ಲಿ ಕಳ್ಳರಿಗೆ ಭಯವಿಲ್ಲದಂತಾಗಿದೆ ಎಂದರೆ ಅತಿಶಯೋಕ್ತಿ ಅನಿಸದು. ಕೋಲಾರ ಜಿಲ್ಲೆಯ ಮುಳುಬಾಗಿಲುನಲ್ಲಿರುವ ಸಂಜಪ್ಪ ಬಡಾವಣೆಯಲ್ಲಿ ಒಂಟಿಮಹಿಳೆಯೊಬ್ಬರನ್ನು ಸ್ಕೂಟರ್ ನಲ್ಲಿ ಹಿಂಬಾಲಿಸಿಕೊಂಡು ಬರುವ ಸರಗಳ್ಳರಿಬ್ಬರು ಸರ ದೋಚುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ತನ್ನ ವಾಹನ ನಿಲ್ಲಿಸಿದ ಬಳಿಕ ಒಬ್ಬಕಳ್ಳ ಅವರ ಬಳಿ ಬರುತ್ತಾನೆ. ಅವನ ಇಂಗಿತ ಅರ್ಥಮಾಡಿಕೊಳ್ಳುವ ಮಹಿಳೆ ಓಡುವ ಪ್ರಯತ್ನ ಮಾಡಿದಾಗ ಕಳ್ಳ ಅವರ ಬೆನ್ನಟ್ಟಿ ಸರ ದೋಚುತ್ತಾನೆ. ಮಹಿಳೆ ಧರಿಸಿದ್ದು ನಕಲಿ ಒಡವೆ ಅನ್ನೋದು ನಿಜವಾದರೂ ಕಳ್ಳರ ಧೈರ್ಯ ಕಂಡು ಜನ ಬೆಚ್ಚಿಬೀಳುತ್ತಿದ್ದಾರೆ.
ಇದನ್ನೂ ಓದಿ: ಆನೇಕಲ್ ನಲ್ಲಿ ಪುನಃ ಶುರವಾದ ಸರಗಳ್ಳತನ, ಇರಾನಿ ಗ್ಯಾಂಗ್ ಸಕ್ರಿಯಗೊಂಡಿರುವ ಬಗ್ಗೆ ಶಂಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos