ಭೂಮಿಯಿಂದ ಅಂತರಿಕ್ಷದೆಡೆ ನಮ್ಮ ಯಾನ ರೋಮಾಂಚಕ ಮತ್ತು ರೋಚಕ: ಶುಭಾಂಶು ಶುಕ್ಲಾ, ಗಗನಯಾತ್ರಿ
ಗಗನಯಾತ್ರಿಗಳು ತಮ್ಮೊಂದಿಗೆ ಹಂಸದ ಒಂದು ಪುಟ್ಟ ಬೊಂಬೆಯನ್ನು ತೆಗೆದುಕೊಂಡು ಹೋಗಿದ್ದಾರೆ ಮತ್ತು ಅದು ಕ್ಯಾಪ್ಸೂಲ್ನಲ್ಲಿ ತೇಲಾಡುವುದನ್ನು ನೋಡಬಹುದು. ನಿನ್ನೆಯೆಲ್ಲ ನಾನು ನಿದ್ರಿಸುತ್ತಿದ್ದೆ ಎಂದು ನನ್ನ ಜೊತೆಗಾರರು ಹೇಳುತ್ತಾರೆ, ಹೊಸ ಪರಿಸರದಲ್ಲಿದ್ದೇನೆ, ಚಿಕ್ಕಮಕ್ಕಳ ಹಾಗೆ ಎಲ್ಲವನ್ನು ಹೊಸದಾಗಿ ಕಲಿಯುತ್ತಿದ್ದೇನೆ, ನಮಗೆಲ್ಲ ಇದೊಂದು ಸವಾಲು ಎಂದು ಶುಭಾಂಶು ಶುಕ್ಲಾ ಹೇಳುತ್ತಾರೆ.
ಬೆಂಗಳೂರು, ಜೂನ್ 26: ನಮ್ಮೆಲ್ಲರನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಿಂದ ಮಾತಾಡಿದ್ದಾರೆ. ಶುಕ್ಲಾ ಮತ್ತು ಅವರೊಂದಿಗಿರುವ ಇತರ ಮೂವರು ಗಗನಯಾತ್ರಿಗಳು ಈಗ ನಿರ್ವಾತ ಪ್ರದೇಶದಲ್ಲಿರುವುದರಿಂದ (vacuum place) ತಾವಿರುವ ಕ್ಯಾಪ್ಸೂಲ್ ನಲ್ಲಿ ತೇಲಾಡುತ್ತಿದ್ದಾರೆ. ಈ ಹಂತದವರೆಗೆ ನಮ್ಮ ಯಾನ ಅದ್ಭುತವಾಗಿತ್ತು, ನಮ್ಮ ಸ್ಪೇಸ್ ಶಟಲ್ ಉಡಾವಣೆ ಶುರುಮಾಡಿದಾಗ ಅನುಭವಿಸಿದ ರೋಮಾಂಚನ ಮತ್ತು ರೋಚಕತೆ ಅಸಾಮಾನ್ಯವಾದದ್ದು, ನಮ್ಮ ಶ್ರೇಯಸ್ಸು ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದ, ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಚಿರಋಣಿಯಾಗಿದ್ದೇನೆ, ಅವರ ನೆರವಿಲ್ಲದಿದ್ದರೆ ಗುರಿಯ ಸಾಧನೆ ಆಗುತ್ತಿರಲಿಲ್ಲ, ಇದು ಖಂಡಿತ ವೈಯಕ್ತಿಕ ಸಾಧನೆ ಅಲ್ಲ, ಸಾಮೂಹಿಕ ಪ್ರಯತ್ನದಿಂದ ಈ ಮಿಷನ್ ಸಾಧ್ಯವಾಗಿದೆ ಎಂದು ಶುಕ್ಲಾ ಹೇಳುತ್ತಾರೆ.
ಇದನ್ನೂ ಓದಿ: ಆಕ್ಸಿಯಮ್ ಮಿಷನ್ ಭಾಗವಾಗಿ ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಭಾರತದ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ