ಆಕ್ಸಿಯಮ್ ಮಿಷನ್ ಭಾಗವಾಗಿ ಇಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಭಾರತದ ಹೆಮ್ಮೆಯ ಗಗನಯಾತ್ರಿ ಶುಭಾಂಶು ಶುಕ್ಲಾ
ಗಗನಯಾನ ಭಾರತಕ್ಕೆ ಹೊಸದೇನೂ ಅಲ್ಲ. ಹಿಂದೆ 1984 ರಲ್ಲಿ ಒಂದು ಮಿಷನ್ನೊಂದಿಗೆ ವಿಂಗ್ ಕಮಾಂಡರ್ ರಾಕೇಶ್ ಶರ್ಮ ಬಾಹ್ಯಾಕಾಶಕ್ಕೆ ಹೋಗಿದ್ದರು. ಆಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅಂತರಿಕ್ಷದಲ್ಲಿದ್ದ ಶರ್ಮಾರೊಂದಿಗೆ ಮಾತಾಡಿ ಅಲ್ಲಿಂದ ಭಾರತ ಹೇಗೆ ಕಾಣುತ್ತಿದೆ ಅಂತ ಕೇಳಿದ್ದರು. ರಾಕೇಶ್ ಶರ್ಮಾ ಕೊಟ್ಟ ಉತ್ತರ ಭಾರತೀಯರ ಮೈ ನವಿರೇಳುವಂತೆ ಮಾಡಿತ್ತು: ‘ಸಾರಾ ಜಹಾಂಸೇ ಅಚ್ಛಾ ಹಿಂದೂಸ್ತಾನ್ ಹಮಾರಾ.....’
ಬೆಂಗಳೂರು, ಜೂನ್ 25: ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆ ಕಾರ್ಯಕ್ರಮಗಳ ಇತಿಹಾಸದಲ್ಲಿ ಇವತ್ತು ಒಂದು ಹೊಸ ಮೈಲಿಗಲ್ಲು. 39-ವರ್ಷ ವಯಸ್ಸಿನ ಭಾರತದ ಶುಭಾಂಶು ಶುಕ್ಲಾ ಸ್ಪೇಸ್ ಎಕ್ಸ್ ಫಾಲ್ಕನ್-9 ಸ್ಪೇಸ್ ಶಟಲ್ ಅನ್ನು ಇಂದು ಮಧ್ಯಾಹ್ನ 12:01ಕ್ಕೆ ಅಮೇರಿಕದ ಫ್ಲೋರಿಡಾದಲ್ಲಿರುವ ಕೆನಡಿ ಅಂತರಿಕ್ಷ ಕೇಂದ್ರದಿಂದ ಬಾಹ್ಯಾಕಾಶಕ್ಕೆ (Kennedy Space Centre) ಹಾರಿಸಲಿದ್ದಾರೆ. ಇಸ್ರೋ ಗಗನಯಾತ್ರಿ ಆಗಿರುವ ಶುಕ್ಲಾ ಅವರೊಂದಿಗೆ ಅಮೆರಿಕ, ಹಂಗರಿ ಮತ್ತು ಪೋಲೆಂಡ್ನ ಗಗನಯಾತ್ರಿಗಳೂ ಅಂತರಿಕ್ಷಕ್ಕೆ ಹಾರಲಿದ್ದಾರೆ. ಆಕ್ಸಿಯಮ್ ಮಿಷನ್ ನ ವಿಶೇಷತೆ ಎಂದರೆ ಗಗನಯಾತ್ರಿಗಳು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು ಅಧ್ಯಯನಗಳನ್ನು ನಡೆಸಲಿದ್ದಾರೆ. ಶುಕ್ಲಾ ಅವರು 7 ಪ್ರಯೋಗಗಳನ್ನು ಅಲ್ಲಿ ನಡೆಸಲಿದ್ದು ತಮ್ಮೊಂದಿಗೆ ಕೆಲವು ಕಾಳುಗಳನ್ನು ಒಯ್ಯಲಿದ್ದಾರೆ. ಅಂತರಿಕ್ಷದಲ್ಲಿ ಅವು ಮೊಳಕೆಯೊಡುವುದನ್ನು ಅವರು ಗಮನಿಸಲಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಸ್ಪೇಸ್ ಎಕ್ಸ್ ಫಾಲ್ಕನ್-9 ಸ್ಪೇಸ್ ಶಟಲ್ ಜೂನ್ 26, ಸಂಜೆ 4.30 ಗಂಟೆಗೆ ಐಎಸ್ಎಸ್ ನಲ್ಲಿ ಡಾಕಿಂಗ್ ಆಗಲಿದೆ. ಸ್ಪೇಸ್ ಎಕ್ಸ್ ಫಾಲ್ಕನ್-9 ಸ್ಪೇಸ್ ಶಟಲ್ ಲಾಂಚ್ ಅನ್ನು ನಮ್ಮ ವಾಹಿನಿಯಲ್ಲಿ ಲೈವ್ ವೀಕ್ಷಿಸಬಹುದು.
ಇದನ್ನೂ ಓದಿ: Shubhanshu Shukla: 4 ದಶಕಗಳ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿರುವ ಮೊದಲ ಭಾರತೀಯ ಶುಭಾಂಶು ಶುಕ್ಲ; ಸಂಪೂರ್ಣ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ