AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ತಿಗೆ ಕೈಹಾಕಿ ಸರಗಳ್ಳತನ; ವೃದ್ಧೆಯ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ಎಗರಿಸಿದ ಸರಗಳ್ಳರು

ಡಿಯೋ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕತ್ತಿಗೆ ಕೈಹಾಕಿ ಸರಗಳ್ಳತನ; ವೃದ್ಧೆಯ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ಎಗರಿಸಿದ ಸರಗಳ್ಳರು
ಸೋಲದೇವನಹಳ್ಳಿ ಪೊಲೀಸ್ ಠಾಣೆ
TV9 Web
| Updated By: preethi shettigar|

Updated on:Aug 10, 2021 | 1:44 PM

Share

ಬೆಂಗಳೂರು: ಮನೆ ಬಳಿ ನಿಂತಿದ್ದ ವೃದ್ಧೆಯ ಮಾಂಗಲ್ಯ ಸರ ಎಗರಿಸಿದ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಸಾಸುವೆಘಟ್ಟದ ಬಳಿ ನಡೆದಿದೆ. 2 ಲಕ್ಷ ರೂಪಾಯಿ ಬೆಲೆಬಾಳುವ ಗಂಗಮ್ಮ(60) ನವರ ಮಾಂಗಲ್ಯ ಸರವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಡಿಯೋ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿ ಬಳಿ ನಡೆದಿದೆ. ಅಟ್ಟುವನಹಳ್ಳಿಯಲ್ಲಿ 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮಹದೇವು ಎಂಬುವವರ ಜಮೀನಿನಲ್ಲಿ ಶವ ಪತ್ತೆಯಾಗಿದ್ದು, ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ: ಮೇಕೆ ಹಾಗೂ ಟಗರು ಕಳವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದ ಮಾದೇಗೌಡ ಎಂಬುವವರಿಗೆ ಸೇರಿದ ಮೇಕೆ ಮತ್ತು ಟಗರುಗಳನ್ನು ಖದೀಮರು ಹೊತ್ತೊಯ್ದಿದ್ದಾರೆ. ತಮ್ಮ ಜಮೀನಿನಲ್ಲಿ ಮೇಕೆ ಫಾರಂ ಮಾಡಿದ್ದ ಮಾದೇಗೌಡರು, 8 ಟಗರು, 2 ಮೇಕೆ ಸಾಕಿದ್ದರು. ತಡ ರಾತ್ರಿ ಎಲ್ಲಾ ಟಗರು ಮತ್ತು ಮೇಕೆಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಫಾರಂನಲ್ಲಿ ಇದ್ದ ಸಿಸಿ ಕ್ಯಾಮರಾಗಳನ್ನು ಕೂಡ ನಾಶಪಡಿಸಿದ್ದಾರೆ. ಸದ್ಯ ಮಾದೇಗೌಡರು ತಮ್ಮ ಮೇಕೆಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 1 ವಾರದಲ್ಲಿ 10 ಸರಗಳ್ಳತನ: ಗುಂಡು ಹಾರಿಸಿ ಇಬ್ಬರ ಬಂಧನ

ದೇವಸ್ಥಾನದಲ್ಲಿ ಸರಗಳ್ಳತನಕ್ಕೆ ಯತ್ನಿಸಿದವನಿಗೆ ಸಾರ್ವಜನಿಕರಿಂದ ಧರ್ಮದೇಟು

Published On - 1:34 pm, Tue, 10 August 21