ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
36 ವರ್ಷಗಳ ಬಳಿಕ ತಾಯಿ ಮತ್ತು ಮಗ ಒಂದಾಗಿರುವಂತಹ ಅಪರೂಪ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಆ ಮೂಲಕ ಕಾರಣಿಕ ಮಂತ್ರದೇವತೆ ದೈವದ ನುಡಿ ನಿಜವಾಗಿದೆ. ಈ ಬಗ್ಗೆ ಸಹೋದರ ಪ್ರಭಾಕರ್ ಹೇಳಿದ್ದು ಹೀಗೆ.
ಮಂಗಳೂರು, ಜೂನ್ 26: ಕೆಲಸಕ್ಕಾಗಿ ಮುಂಬೈಗೆ ಹೋಗಿ ಬಳಿಕ ಸಂಪರ್ಕಕ್ಕೆ ಸಿಗದ ಮಗ ಚಂದ್ರಶೇಖರ್ 36 ವರ್ಷಗಳ ಬಳಿಕ ಮನೆಗೆ ವಾಪಸ್ ಆಗಿದ್ದು, ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ಕಾರಣಿಕ ಮಂತ್ರದೇವತೆ ದೈವದ (Daiva) ನುಡಿ ನಿಜವಾಗಿದ್ದು, ಅಚ್ಚರಿಯ ಘಟನೆಯೊಂದು ನಗರದಲ್ಲಿ ನಡೆದಿದೆ. ಈ ಬಗ್ಗೆ ಟಿ.ವಿ 9ಗೆ ಚಂದ್ರಶೇಖರ್ ಸಹೋದರ ಪ್ರಭಾಕರ್ ಹೇಳಿಕೆ ನೀಡಿದ್ದು, ನಮ್ಮ ಅಣ್ಣ ಕೆಲಸಕ್ಕೆಂದು ಮುಂಬೈಗೆ ಹೋದವರು ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಮನೆಯ ದೈವಕ್ಕೆ ಹರಕೆಯನ್ನು ಹೇಳಿದ್ದೆವು. ಮನೆಯಲ್ಲಿ ನಡೆದ ದರ್ಶನ ಸೇವೆಯಲ್ಲಿ ಅಣ್ಣನ ಬಗ್ಗೆ ಕೇಳಿದೆವು. ಅಣ್ಣ ಜೀವಂತವಾಗಿ ಇರುವ ಬಗ್ಗೆ ದೈವ ನುಡಿ ಕೊಟ್ಟಿತು ಎಂದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.