ಚಿಕ್ಕಮಗಳೂರು: ಬುಕ್ಕಸಾಗರ ಗೇಟ್ ಬಳಿ ಹಾಲಿನ ಟ್ಯಾಂಕರ್ ಪಲ್ಟಿ, ಸಾವಿರಾರು ಲೀಟರ್ ಹಾಲು ಮಣ್ಣುಪಾಲು
ರಸ್ತೆ ಮೇಲೆ ಬಿದ್ದಿರುವ ಟ್ಯಾಂಕರ್, ರಸ್ತೆಯಲ್ಲೆಲ್ಲ ಹರಿದುಹೋಗುತ್ತಿರುವ ಹಾಲು! ಈ ದೃಶ್ಯ ಕಂಡಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬುಕ್ಕಸಾಗರ ಗೇಟ್ ಬಳಿ. ಚಾಲಕನ ನಿಯಂತ್ರಣ ತಪ್ಪಿದ ಹಾಲಿನ ಟ್ಯಾಂಕರ್ ಪಿಕ್ಅಪ್ ವಾಹನದ ಮೇಲೆ ಬಿದ್ದಿದ್ದೇ ಈ ಎಲ್ಲ ಅಧ್ವಾನಗಳಿಗೆ ಕಾರಣ. ವಿಡಿಯೋ ಇಲ್ಲಿದೆ ನೋಡಿ.
ಚಿಕ್ಕಮಗಳೂರು, ಜೂನ್ 26: ಚಾಲಕನ ನಿಯಂತ್ರಣ ತಪ್ಪಿ ಸಾವಿರಾರು ಲೀ.ಹಾಲಿನ ಟ್ಯಾಂಕರ್ ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬುಕ್ಕಸಾಗರ ಗೇಟ್ ಬಳಿ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಪಿಕಪ್ ವಾಹನದ ಮೇಲೆ ಹಾಲಿನ ಟ್ಯಾಂಕರ್ ಬಿದ್ದಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಸಾವಿರಾರು ಲೀಟರ್ ಹಾಲು ಮಣ್ಣುಪಾಲಾಯಿತು. ವಿಡಿಯೋ ಇಲ್ಲಿದೆ.
Follow Us
Latest Videos
ಗ್ಯಾಂಗ್ಸ್ಟರ್ ಸಂದೀಪ್ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು

