ದಕ್ಷಿಣ ಕನ್ನಡದಲ್ಲಿ ನೆರವೇರಿದ ಮಂತ್ರದೇವತೆಯ ಕಾರಣಿಕ, 36 ವರ್ಷಗಳ ನಂತರ ಊರು ಸೇರಿದ ವ್ಯಕ್ತಿ!
ಚಂದ್ರಶೇಖರ್ 36 ವರ್ಷಗಳ ಹಿಂದೆ ಮನೆಬಿಟ್ಟು ಮುಂಬೈಗೆ ಹೋಗಿ ಅಲ್ಲೊಂದು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮೊದಲ 6 ತಿಂಗಳು ಕಾಲ ಮನೆಗೆ ಪತ್ರ ಬರೆಯುತ್ತಿದ್ದ ಅವರು ಇದ್ದಕ್ಕಿದಂತೆ ನಿಲ್ಲಿಸಿಬಿಟ್ಟಿದ್ದಾರೆ. ಮೊಬೈಲ್ ಇಲ್ಲದ ಜಮಾನಾದಲ್ಲಿ ಹುಡುಕುವ ಪ್ರಯತ್ನ ಕುಟುಂಬಸ್ಥರು ಮಾಡಿದ್ದಾರೆ, ಅದರೆ ಎಲ್ಲ ನಿಷ್ಫಲವಾಗಿದೆ. ಮುಂಬೈನಲ್ಲ್ಲಿ ಹೋಟೆಲ್ನವರು ಚಂದ್ರಶೇಖರ್ರನ್ನು ಮಗನಂತೆ ನೋಡಿಕೊಂಡಿದ್ದಾರೆ ಮತ್ತು ಅವರ ಮಾನಸಿಕ ಸ್ವಾಸ್ಥ್ಯ ಕೆಟ್ಟಾಗ ಚಿಕಿತ್ಸೆ ಕೊಡಿಸಿದ್ದಾರೆ.
ದಕ್ಷಿಣ ಕನ್ನಡ, ಜೂನ್ 26: ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದಲ್ಲಿ ಪವಾಡವೊಂದು ನಡೆದಿದ್ದು ತುಳುನಾಡಿನ ಕಾರಣಿಕ ಮಂತ್ರದೇವತೆ ನೀಡಿದ ಕಾರಣಿಕತೆ ನಿಜವಾಗಿದೆ. ವಿಡಿಯೋದಲ್ಲಿ ವೃದ್ಧೆ ಮತ್ತು ಒಬ್ಬ ಹಿರಿಯ ವ್ಯಕ್ತಿಯನ್ನು ನೋಡಬಹುದು. ವ್ಯಕ್ತಿಯ ಹೆಸರು ಚಂದ್ರಶೇಖರ್ ಮತ್ತು 36 ವರ್ಷಗಳ ಹಿಂದೆ ಊರಿಂದ ಕಾಣೆಯಾಗಿದ್ದರು. ಮಗ ಒಂದಿಲ್ಲೊಂದು ವಾಪಸ್ಸು ಬರುತ್ತಾನೆ ಅಂತ ತಾಯಿ ರಾಮನಿಗಾಗಿ ಶಬರಿ ಕಾದಂತೆ ಕಾಯುತ್ತಿದ್ದರೆ ಚಂದ್ರಶೇಖರ್ ಸಹೋದರರು ದೈವದ ಮೊರೆ ಹೊಕ್ಕಿದ್ದರು. ಮೇ 29ರಂದು ನಡೆದ ದೈವ ದರ್ಶನ ಕಾರ್ಯಕ್ರಮಕ್ಕೆ ಚಂದ್ರಶೇಖರ್ ಬಂದೇ ಬರುತ್ತಾರೆ ಮತ್ತು ಹಿರಿಮಗನಿಂದಲೇ ಸೇವೆ ನಡೆಯುತ್ತದೆ ಎಂದು ದೇವ ಹೇಳಿತ್ತಂತೆ. ದೈವದರ್ಶನಕ್ಕೆ ಮೂರು ದಿನ ಮೊದಲು ಚಂದ್ರಶೇಖರ್ ಮನೆಗೆ ಬಂದರು ಎಂದು ಕುಟುಂಬಸ್ಥರು ಹೇಳುತ್ತಾರೆ.
ಇದನ್ನೂ ಓದಿ: ಸಮುದ್ಧ ದಿನಗಳು ಬರುತ್ತವೆ- ಸಾವಿರಾರು ಭಕ್ತ ಸಾಗರದ ನಡುವೆ ಶುಭ ಸಂದೇಶ ನುಡಿದ ಕಾರಣಿಕ ಪೂಜಾರಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ