ಸಮುದ್ಧ ದಿನಗಳು ಬರುತ್ತವೆ- ಸಾವಿರಾರು ಭಕ್ತ ಸಾಗರದ ನಡುವೆ ಶುಭ ಸಂದೇಶ ನುಡಿದ ಕಾರಣಿಕ ಪೂಜಾರಿ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಂಕ್ಲಿಪುರ ಗ್ರಾಮದ ಬಸವೇಶ್ವರ ದೇವರ ಕಾರಣಿಕ ಇತ್ತು. ಸುತ್ತಲಿನ ಹತ್ತಾರು ಗ್ರಾಮಗಳ ದೇವರುಗಳು ಹಾಗೂ ಭಕ್ತರು ಕಾರ್ಣಿಕೋತ್ಸವದಲ್ಲಿ ಭಾಗಿಯಾಗಿದ್ರು. ಈ ವೇಳೆ ಸಮುದ್ಧ ದಿನಗಳು ಬರುತ್ತವೆ ಎಂಬ ಶುಭ ಸಂದೇಶವನ್ನು ಕಾರಣಿಕ ಪೂಜಾರಿ ನುಡಿದಿದ್ದಾರೆ.
ದಾವಣಗೆರೆ: ಕೊರೊನಾ ಮಹಾಮಾರಿ, ನೈಸರ್ಗಿಕ ವಿಪತ್ತುವಳಿಂದ ಬಸವಳಿದು ದಿಕ್ಕೆಟ್ಟು ಹೋಗಿರುವ ಜನತೆಗೆ ದೇವರ ಕಾರಣಿಕವೊಂದು ಶುಭ ಸಂದೇಶ ನೀಡಿದೆ. ತಾಯಿ ಮಡಿಲಿಗೆ ಅಮೃತ ಚೆಲ್ಲಿತಲ್ಲೇ ಪರಾಗ್ ಎಂದು ಸಂಕ್ಲಿಪುರ ಮಲ್ಲನಾಯಕನಹಳ್ಳಿ ಬಸವೇಶ್ವರ ದೇವರ ಕಾರ್ಣಿಕೋತ್ಸವದಲ್ಲಿ ಕಾರಣಿಕ ಪೂಜಾರಿ ಶುಭ ಸಂದೇಶ ನುಡಿದಿದ್ದಾರೆ.
ದಾವಣಗೆರೆಯ ಹರಿಹರ ತಾಲೂಕಿನ ಸಂಗ್ಲಿಪುರ ಗ್ರಾಮದ ಹೊರ ವಲಯದ ಮಲ್ಲನಾಯಕನಹಳ್ಳಿ ಬಸವೇಶ್ವರ ಅಂದ್ರೆ ಈ ಭಾಗದಲ್ಲಿ ಪ್ರಸಿದ್ಧ. ಮೇಲಾಗಿ ವರ್ಷಕ್ಕೊಮ್ಮೆ ನಡೆಯುವ ಬಸವೇಶ್ವರ ಕಾರ್ಣಿಕಕ್ಕೆ ಸಾವಿರಾರು ಜನ ಸೇರುತ್ತಾರೆ. ಇತ್ತೀಚಿಗೆ ಕೊರೊನಾ ಹಾವಳಿಯಿಂದ ಸರಳವಾಗಿಯೇ ಆಚರಿಸಿದರು ಸಹ ಭಕ್ತರು ನಿರೀಕ್ಷಿತ ಪ್ರಮಾಣದಲ್ಲಿ ಸೇರಿದ್ದರು. ಕಾರಣ ಇಲ್ಲಿ ಆಗುವ ಕಾರ್ಣಿಕದಲ್ಲಿ ಬರುವ ನುಡಿಯಲ್ಲಿ ಇಡಿ ವರ್ಷದ ಭವಿಷ್ಯ ಅಡಗಿರುತ್ತದೆ. ಇದಕ್ಕಾಗಿ ಸುತ್ತ ಹಳ್ಳಿಯ ಹತ್ತಕ್ಕೂ ಹೆಚ್ಚು ದೇವರುಗಳನ್ನ ತರಲಾಗುತ್ತದೆ. ಹೀಗಾಗಿ ಹತ್ತಾರು ಪಲ್ಲಕ್ಕಿಗಳು, ಭಕ್ತ ಸಾಗರ ದೇವರ ಸ್ಮರಣೆ ಮಾಡುತ್ತಾ ಪೂಜೆ ಮಾಡುತ್ತಾರೆ.
ಇದಕ್ಕೆಲ್ಲ ಕಾರಣ ಇಲ್ಲೊಂದು ಮೈಲಾರದ ಮಾದರಿಯಲ್ಲಿ ಕಾರ್ಣಿಕ ಆಗುತ್ತದೆ. ಗ್ರಾಮೀಣ ಭಾಷೆಯಲ್ಲಿ ಕಾರ್ಣಿಕ ಅಂದ್ರೆ ದೇವ ವಾಣಿ. ವರ್ಷದಲ್ಲಿ ಘಟಿಸುವ ಮಹತ್ವದ ಘಟನೆಗಳು ಜೊತೆಗೆ ಆಗುವ ಆನಾಹುತ ಹಾಗೂ ಶುಭ ಕಾರ್ಯಗಳ ಬಗ್ಗೆ ಬಸವೇಶ್ವರ ದೇವರ ಪೂಜಾರಿಯಿಂದ ವಾಣಿ ಆಗುತ್ತದೆ. ಒಂದು ಸಣ್ಣ ಕಂಬದ ಮೇಲೆ ನಿಂತು ಬಸವೇಶ್ವರ ದೇವರ ಪೂಜಾರಿ ವಾಣಿ ಹೇಳುತ್ತಾರೆ. ಹೀಗೆ ವಾಣಿ ಹೇಳಿದ ಬಳಿಕ ಅಲ್ಲಿಂದ ಕೆಳಗೆ ಬಿಳುತ್ತಾರೆ ಪೂಜಾರಿ. ಎರಡು ದಿನಗಳ ಉಪವಾಸ ವೃತ ಮಾಡಿ ಪೂಜಾರಿ ನಿರಂತರ ದೇವರ ಪೂಜೆಯಲ್ಲಿ ಇರುತ್ತಾರೆ.
ಈ ವರ್ಷದ ವಾಣಿ ಶುಭ ಸೂಚಕವಾಗಿದ್ದು ಭಕ್ತ ಸಾಗರ ಸಂತಸ ಪಡುವಂತಾಗಿದೆ. ತಾಯಿಯ ಮಡಿಲಿಗೆ ಅಮೃತ್ ಚೆಲ್ಲಿತಲ್ಲೇ ಪರಾಗ್ ಎಂದು ಕಾರಣಿಕ ಪೂಜಾರಿ ನುಡಿದಿದ್ದಾರೆ. ಇದಕ್ಕೆ ಹತ್ತಾರು ಅರ್ಥಗಳನ್ನ ಭಕ್ತರು ಕಲ್ಪಿಸಿಕೊಳ್ಳುತ್ತಿದ್ದಾರೆ. ಮಾಮೂಲಾಗಿ ಈ ಸಲ ಉತ್ತಮ ಬೆಳೆ ಬಂದು ರೈತರು ಸಮೃದ್ಧರಾಗುತ್ತಾರೆ. ಇನ್ನೊಂದು ಕಡೆ ಯಾರ ಮನೆಯಲ್ಲಿ ಮಹಿಳೆ ಗರ್ಭೀಣಿ ಇದ್ರೆ ಚಿನ್ನದಂತಹ ಮಗು ಹುಟ್ಟುತ್ತದೆ. ಯಾವುದೇ ವ್ಯವಹಾರ ಮಾಡಿದ್ರು ಅದರಲ್ಲಿ ಯಶಸ್ಸು ಕಂಡು ಬರುತ್ತದೆ ಎಂಬುದು ಪರಿಣಿತರ ವಿಶ್ಲೇಷನೆ. ಕೊರೊನಾ ಸಂಕಷ್ಟ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲಾ. ಎಕಕಾಲಕ್ಕೆ ಭಾರಿ ಮಳೆ ಬಂದು ಬೆಳೆ ನಾಶ. ಹೀಗೆ ಹತ್ತು ಹಲವಾರು ಸಂಕಷ್ಟಕ್ಕೆ ತುತ್ತಾದ ರೈತರಿಗೆ ಮಲ್ಲನಾಯಕನಹಳ್ಳಿಯ ಬಸವೇಶ್ವರ ದೇವರ ಕಾರ್ಣೀಕ ಸಂತಸ ತಂದಿದೆ. ಬದುಕಿನಲ್ಲಿ ಹೊಸ ಉತ್ಸಾಹ ತಂದಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: ಕಾರಣಿಕ ದೈವ ಕೊರಗಜ್ಜನಿಗೆ ಖಾಸಿಂ ಸಾಹೇಬರ ಪೂಜೆ; 19 ವರ್ಷಗಳಿಂದ ಧಾರ್ಮಿಕ ಸಾಮರಸ್ಯ ಮೆರೆದ ಕೇರಳ ಮೂಲದ ವ್ಯಕ್ತಿ
Published On - 9:09 am, Tue, 31 August 21