Stock Market investors wealth: ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು 6.56 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು ಕೇವಲ ಎರಡು ದಿನದಲ್ಲಿ 6.56 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಡಿ. 22ರ ವಹಿವಾಟಿನಲ್ಲಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 22ನೇ ತಾರೀಕಿನ ಬುಧವಾರ ಎರಡನೇ ದಿನವೂ ಗಳಿಕೆಯನ್ನು ಮುಂದುವರಿಸಿದ್ದರಿಂದ ಹೂಡಿಕೆದಾರರ ಸಂಪತ್ತು 6,56,828.59 ಕೋಟಿ ರೂಪಾಯಿಗಳಷ್ಟು ಜಿಗಿತ ಕಂಡಿದೆ. 30-ಷೇರುಗಳ ಗುಚ್ಛವಾದ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು 611.55 ಪಾಯಿಂಟ್‌ಗಳು ಅಥವಾ ಶೇ 1.09ರಷ್ಟು ಏರಿಕೆ ಕಂಡು, 56,930.56 ಪಾಯಿಂಟ್ ಅನ್ನು ಮುಟ್ಟಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 670 ಪಾಯಿಂಟ್‌ಗಳಷ್ಟು ಜಿಗಿದು, 56,989.01 ಪಾಯಿಂಟ್ಸ್ ತಲುಪಿತ್ತು. ಬಿಎಸ್‌ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಎರಡು ದಿನಗಳಲ್ಲಿ 6,56,828.59 ಕೋಟಿ ರೂಪಾಯಿ ಹೆಚ್ಚಳವಾಗಿ, 2,59,14,409.64 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
“ಜಾಗತಿಕ ಮಾರುಕಟ್ಟೆಯಲ್ಲಿ ಪಾಸಿಟಿವ್ ಹಿಂತಿರುಗವುದರ ಮಧ್ಯೆ ದೇಶೀಯ ಮಾರುಕಟ್ಟೆಯು ನೆಲೆಯನ್ನು ಕಂಡುಕೊಳ್ಳುತ್ತಿದೆ. ಹಿಂತಿರುಗಿಸುವಿಕೆ ವಿಶಾಲವಾಗಿ ಆಧಾರಿತವಾಗಿದೆ. ಆದರೆ ಮಧ್ಯಮ ಮತ್ತು ಸಣ್ಣ ಕ್ಯಾಪ್ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದವು ಏಕೆಂದರೆ ಚೌಕಾಶಿ ಅವಕಾಶವು ಹೂಡಿಕೆದಾರರು ಇಳಿಕೆ ಕಂಡ ಷೇರುಗಳನ್ನು ಖರೀದಿಸಲು ಕಾರಣವಾಯಿತು,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
30-ಮುಂಚೂಣಿ ಕಂಪೆನಿಗಳ ಪೈಕಿ ಬಜಾಜ್ ಫೈನಾನ್ಸ್ ಅತಿ ಹೆಚ್ಚು ಲಾಭ ಕಂಡಿದ್ದು, ಶೇ 2.94ರಷ್ಟು ಜಿಗಿದಿದೆ. ಆ ನಂತರ ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಸ್‌ಬಿಐ ಗಳಿಕೆ ಕಂಡಿವೆ. ಇದಕ್ಕೆ ವ್ಯತಿರಿಕ್ತವಾಗಿ ವಿಪ್ರೋ, ಐಟಿಸಿ ಮತ್ತು ನೆಸ್ಲೆ ಇಂಡಿಯಾ ಇಳಿಕೆ ಕಂಡವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ 1.66ರ ವರೆಗೆ ಜಿಗಿದವು.
ಇದನ್ನೂ ಓದಿ: Multibagger stock: ಒಂದು ವಾರದಲ್ಲಿ ಶೇ 95ರಷ್ಟು ರಿಟರ್ನ್ಸ್ ನೀಡಿದೆ ಈ ಮಲ್ಟಿಬ್ಯಾಗರ್ ಸ್ಟಾಕ್