AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger stock: ಒಂದು ವಾರದಲ್ಲಿ ಶೇ 95ರಷ್ಟು ರಿಟರ್ನ್ಸ್​ ನೀಡಿದೆ ಈ ಮಲ್ಟಿಬ್ಯಾಗರ್ ಸ್ಟಾಕ್

ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ ಒಂದು ವಾರದಲ್ಲಿ ಶೇ 95ರಷ್ಟು ರಿಟರ್ನ್ಸ್ ನೀಡಿದೆ. ಅಷ್ಟೇ ಅಲ್ಲ, ಅದೇ ರೀತಿ ಇತರ ಎರಡು ಸ್ಟಾಕ್​ಗಳು ಸಹ ಕನಿಷ್ಠ ಶೇ 60ರಷ್ಟು ರಿಟರ್ನ್ಸ್​​ ನೀಡಿದೆ.

Multibagger stock: ಒಂದು ವಾರದಲ್ಲಿ ಶೇ 95ರಷ್ಟು ರಿಟರ್ನ್ಸ್​ ನೀಡಿದೆ ಈ ಮಲ್ಟಿಬ್ಯಾಗರ್ ಸ್ಟಾಕ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 21, 2021 | 12:03 PM

Share

ಕಳೆದ ಎರಡು ಟ್ರೇಡಿಂಗ್​ ಸೆಷನ್‌ಗಳಲ್ಲಿ ಷೇರು ಮಾರುಕಟ್ಟೆ ಕುಸಿತದ ಮಧ್ಯೆಯೂ ಕೆಲವು ಗುಣಮಟ್ಟದ ಷೇರುಗಳ ಮೇಲೆ ಅಂಥ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ಆದರೆ ಜಾಗತಿಕವಾಗಿಯೇ ನೆಗೆಟಿವ್ ಭಾವನೆಗಳ ಹೊರತಾಗಿಯೂ ಅದರ ಷೇರುದಾರರಿಗೆ ಅದ್ಭುತವಾದ ರಿಟರ್ನ್ಸ್ ನೀಡುವುದನ್ನು ಮುಂದುವರಿಸಿದ ಕೆಲವು ಷೇರುಗಳು ಇವೆ. ಭಿಲ್ವಾರಾ ಸ್ಪಿನ್ನರ್ಸ್ ಷೇರುಗಳು ಅಂಥವುಗಳಲ್ಲಿ ಒಂದು. ಈ ಬಿಎಸ್​ಇ-ಲಿಸ್ಟೆಡ್ ಮಲ್ಟಿಬ್ಯಾಗರ್ ಸ್ಟಾಕ್ ಒಂದೇ ವಾರದಲ್ಲಿ ರೂ. 21ರಿಂದ ರೂ. 41.10ಕ್ಕೆ ಏರಿಕೆ ಕಂಡಿದೆ. ಆ ಮೂಲಕ ಅದರ ಷೇರುದಾರರಿಗೆ ಶೇ 95ರಷ್ಟು ಲಾಭವನ್ನು ನೀಡಿದೆ.

ಭಿಲ್ವಾರಾ ಸ್ಪಿನ್ನರ್ಸ್ ಷೇರು ಬೆಲೆ ಇತಿಹಾಸ ಭಿಲ್ವಾರಾ ಸ್ಪಿನ್ನರ್ಸ್‌ನ ಷೇರು ಬೆಲೆ ಇತಿಹಾಸವನ್ನು ಗಮನಿಸುವುದಾದರೆ, ಇದು 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಮೇಲೆ ಹೇಳಿದಂತೆ, ಈ ಸ್ಟಾಕ್ ಬೆಲೆ ಕಳೆದ ಒಂದು ವಾರದಲ್ಲಿ ಶೇಕಡಾ 95ರಷ್ಟು ಏರಿಕೆಯಾಗಿದೆ ಅಥವಾ ಎಲ್ಲ 5 ಸೆಷನ್‌ಗಳಲ್ಲಿ ಅಪ್ಪರ್ ಸರ್ಕ್ಯೂಟ್ ಮುಟ್ಟಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ ರೂ. 19.30ರಿಂದ ರೂ. 41.10 ಮಟ್ಟಕ್ಕೆ ಏರಿದೆ. ಅಂದರೆ, ಈ ಅವಧಿಯಲ್ಲಿ ಸುಮಾರು ಶೇ 115ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, ಕಳೆದ 6 ತಿಂಗಳಲ್ಲಿ ಈ ಸ್ಟಾಕ್ ರೂ. 17.25ರಿಂದ 41.10 ರೂಪಾಯಿಗೆ ಏರಿಕೆಯಾಗಿ, ಶೇ 140ರಷ್ಟು ಗಳಿಕೆ ನೀಡಿದೆ. ಇನ್ನು ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ, ರೂ. 14.90ರಿಂದ ರೂ. 41.10 ಮಟ್ಟಕ್ಕೆ ಮೇಲೇರಿ, ಅದರ ಷೇರುದಾರರಿಗೆ ಶೇ 175ರಷ್ಟು ಲಾಭವನ್ನು ನೀಡಿದೆ.

ಭಿಲ್ವಾರಾ ಸ್ಪಿನ್ನರ್ಸ್ ಷೇರುಗಳಂತೆ, ಸೂರತ್ ಟೆಕ್ಸ್‌ಟೈಲ್ ಮಿಲ್ಸ್ ಮತ್ತು ಆಕ್ಮೆ ರಿಸೋರ್ಸಸ್‌ಗಳು ಕಳೆದ ಒಂದು ವಾರದಲ್ಲಿ ಅದರ ಷೇರುದಾರರಿಗೆ ಅಮೋಘ ಆದಾಯವನ್ನು ನೀಡಿದ ಇತರ ಎರಡು ಮಲ್ಟಿಬ್ಯಾಗರ್ ಸ್ಟಾಕ್‌ಗಳಾಗಿವೆ. ಕಳೆದ ಒಂದು ವಾರದಲ್ಲಿ ಸೂರತ್ ಟೆಕ್ಸ್‌ಟೈಲ್ ಮಿಲ್ಸ್ ಷೇರಿನ ಬೆಲೆಯು ಸುಮಾರು ಶೇ 67ರಷ್ಟು ಗಳಿಕೆ ಕಂಡಿದ್ದರೆ, ಈ ಅವಧಿಯಲ್ಲಿ ಆಕ್ಮೆ ರಿಸೋರ್ಸಸ್ ಷೇರುಗಳು ಸುಮಾರು ಶೇ 60ರಷ್ಟು ಏರಿತು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತದ ಹೊರತಾಗಿಯೂ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳು ಒಂದು ವಾರದಲ್ಲಿ ಶೇ 60ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿವೆ.

ಸೂರತ್ ಟೆಕ್ಸ್‌ಟೈಲ್ ಮಿಲ್ಸ್ ಷೇರುಗಳು ಕಳೆದ ಒಂದು ತಿಂಗಳಲ್ಲಿ ಶೇರುದಾರರಿಗೆ ಶೇ 145ರಷ್ಟು ಲಾಭವನ್ನು ನೀಡಿದರೆ, ಕಳೆದ 6 ತಿಂಗಳಲ್ಲಿ ಶೇ 220ರಷ್ಟು ಲಾಭ ನೀಡಿದೆ. ಆಕ್ಮೆ ರಿಸೋರ್ಸಸ್​ ಷೇರುಗಳು ರೂ. 9.24ರಿಂದ ರೂ.19.44ರ ವರೆಗೆ ಏರಿಕೆ ಕಂಡು, 2021ರಲ್ಲಿ ಸುಮಾರು ಶೇ 110ರಷ್ಟು ಲಾಭ ನೀಡಿದೆ.

ಇದನ್ನೂ ಓದಿ: Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ