Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ
ಷೇರು ಮಾರುಕಟ್ಟೆಯಲ್ಲಿ ಪೆನ್ನಿ ಸ್ಟಾಕ್‌ಗಳು ಎಂದು ಕರೆಸಿಕೊಳ್ಳುವ ಇವು ಹೂಡಿಕೆಗೆ ಬಹಳ ಅಪಾಯಕಾರಿ. ಆದರೆ ಅಂಥದ್ದೊಂದು ಪೆನ್ನಿ ಸ್ಟಾಕ್‌ನಲ್ಲಿ ಮೂರು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇವತ್ತಿಗೆ ಅದೆಷ್ಟು ಕೋಟಿ ರೂಪಾಯಿ ಗೊತ್ತಾ?
ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳು ಷೇರುದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್ ಷೇರು ಭಾರತದಲ್ಲಿನ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದ್ದು, ಅದು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳ ಪಟ್ಟಿಗೆ ಸೇರಿದೆ. ಈ ಸ್ಟಾಕ್ ಪ್ರತಿ ಷೇರಿಗೆ ರೂ. 0.35 (35 ಪೈಸೆ)ರಿಂದ ರೂ. 198.45ಕ್ಕೆ ಏರಿದೆ. ಆ ಮೂಲಕವಾಗಿ ಸುಮಾರು ಮೂರು ವರ್ಷಗಳ ಅವಧಿಯಲ್ಲಿ 567 ಪಟ್ಟು ಬೆಲೆ ಹೆಚ್ಚಳವನ್ನು ಕಂಡಿದೆ. ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರಿನ ಬೆಲೆ ಇತಿಹಾಸದ ಪ್ರಕಾರ, ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್ ಷೇರಿನ ಬೆಲೆಗಳು ಕಳೆದ ಆರು ತಿಂಗಳಲ್ಲಿ ರೂ. 10.37ರಿಂದ ರೂ. 198.45 ಮಟ್ಟಕ್ಕೆ ಏರಿದೆ. ಅಂದರೆ ಈ ಅವಧಿಯಲ್ಲಿ ಸುಮಾರು ಶೇ 1,913ರಷ್ಟು ಏರಿಕೆಯಾಗಿದೆ.
ವರ್ಷದ ಆರಂಭದಿಂದ ಇಲ್ಲಿಯವರೆಗೆ ಅಂದರೆ 2021ರಲ್ಲಿ ಈ ಪೆನ್ನಿ ಸ್ಟಾಕ್ ರೂ. 1.95ರಿಂದ ರೂ. 198.45ರ ಮಟ್ಟಕ್ಕೆ ಕಡೆಗೆ ಸಾಗಿತು. ಇದರೊಂದಿಗೆ ಅದರ ಷೇರುದಾರರಿಗೆ ಶೇ 10,176ರಷ್ಟು ಲಾಭವನ್ನು ನೀಡಿದೆ. ಹೂಡಿಕೆದಾರರು ಮೂರು ವರ್ಷಗಳ ಹಿಂದೆ ಈ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ಇಂದು ರೂ. 5.67 ಕೋಟಿ ಆಗಿರುತ್ತಿತ್ತು.
ಮಲ್ಟಿಬ್ಯಾಗರ್ ಸ್ಟಾಕ್‌ಗಳು ಅಂದರೇನು? ಮಲ್ಟಿಬ್ಯಾಗರ್ ಸ್ಟಾಕ್‌ಗಳು ನಿಮ್ಮ ಸಂಪತ್ತನ್ನು ಬಹುಪಟ್ಟು ಹೆಚ್ಚಿಸುತ್ತವೆ. ಏಕೆಂದರೆ ಅಂತಹ ಹೂಡಿಕೆಗಳ ಮೇಲಿನ ಆದಾಯವು ಅದ್ಭುತವಾಗಿರುತ್ತವೆ. ಕಂಪೆನಿಯ ಕಾರ್ಯಕ್ಷಮತೆಯನ್ನು ನೋಡುವ ಮೂಲಕ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಸುಲಭವಾಗಿ ಗುರುತಿಸಬಹುದು. ಮಲ್ಟಿಬ್ಯಾಗರ್ ಷೇರುಗಳು ಪ್ರತಿ ಷೇರಿಗೆ ಹೆಚ್ಚಿನ ಗಳಿಕೆಯನ್ನು ಹೊಂದಿರುತ್ತವೆ, ಹೂಡಿಕೆ ಮೊತ್ತದ ಮೇಲೆ ಲಾಭಾಂಶ ಆದಾಯವನ್ನು ಹೆಚ್ಚಿಸುತ್ತವೆ.
ಕೊರೊನಾ ವೈರಸ್ನ ಹೊಸ ರೂಪಾಂತರದ ಆತಂಕದಿಂದ ಜಗತ್ತು ತತ್ತರಿಸಿದ್ದರೂ ಹಣಕಾಸಿನ ಮಾರುಕಟ್ಟೆಗಳು ಮೊದಲಿಗಿಂತ ಹೆಚ್ಚು ಏರಿಳಿತದಿಂದ ಕೂಡಿವೆ ಮತ್ತು ಅಲ್ಪಾವಧಿಗೆ ಮಾರುಕಟ್ಟೆ ಇಳಿಕೆ ಕಾಣುವ ಆತಂಕ ಇದೆ. “ಈ ಏರಿಳಿತ ಸಮಯದ ಮಧ್ಯೆ, ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ತಮ್ಮ ಬಲವಾದ ಬ್ಯಾಲೆನ್ಸ್ ಶೀಟ್, ನಾಯಕತ್ವ ಸ್ಥಾನದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗಿವೆ ಮತ್ತು ಬಹುತೇಕ ಸಾಲ-ಮುಕ್ತವಾಗಿವೆ. ಅವುಗಳು ಈ ಹಿಂದೆ ಯೋಗ್ಯ ಆದಾಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿವೆ ಮತ್ತು ಮುಂದೆ ಷೇರುದಾರರ ಸಂಪತ್ತನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಪೆನ್ನಿ ಸ್ಟಾಕ್‌ಗಳು ಯಾವಾಗಲೂ ಅತಿ ಅಪಾಯದಿಂದ ಕೂಡಿರುತ್ತವೆ. ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು.
ಇದನ್ನೂ ಓದಿ: Multibagger: ಕೇವಲ 18 ತಿಂಗಳಲ್ಲಿ 1 ಲಕ್ಷ ರೂ. ಹೂಡಿಕೆ 1.06 ಕೋಟಿ ರೂಪಾಯಿಗೆ ಬೆಳೆದ ಮಲ್ಟಿಬ್ಯಾಗರ್ ಸ್ಟಾಕ್ ಇದು