ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರೆಂಬ ಕಿರೀಟದಿಂದ ಐಎಂಎಫ್ ಡೆಪ್ಯೂಟಿ ಎಮ್​ಡಿ ತನಕ 2021ರ ಸಾಧಕಿಯರು

2021ರಲ್ಲಿ ಸಾಧನೆ ಮಾಡಿದವರ ಪೈಕಿ ಗೀತಾ ಗೋಪಿನಾಥ್​ರಿಂದ ಫಲ್ಗುಣಿ ನಾಯರ್​ ತನಕ ಐವರು ಮಹಿಳೆಯರ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ.

ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರೆಂಬ ಕಿರೀಟದಿಂದ ಐಎಂಎಫ್ ಡೆಪ್ಯೂಟಿ ಎಮ್​ಡಿ ತನಕ 2021ರ ಸಾಧಕಿಯರು
ಗೀತಾ ಗೋಪಿನಾಥ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Dec 22, 2021 | 1:26 PM

ಇನ್ನೇನು 2021ನೇ ಇಸವಿ ಕೊನೆ ಆಗುತ್ತಿದೆ. ಈ ವರ್ಷ ನಮ್ಮೆಲ್ಲರ ಜೀವನದಲ್ಲೂ ನಾನಾ ಬಗೆಯ ಪ್ರಭಾವ ಬೀರಿದೆ. ಇನ್ನು ಮಹಿಳೆಯರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಅದು ಗೀತಾ ಗೋಪಿನಾಥ್​ರಿಂದ ಲೀನಾ ನಾಯರ್​ ತನಕ ಮಾಡಿದ ಸಾಧನೆಯಿಂದಾಗಿ ಭಾರತದಲ್ಲಿ ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ಆ ಮೂಲಕ ಹತ್ತಾರು ಲಕ್ಷ ಮಂದಿಗೆ ಬಹಳ ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆ ಆಗಿದ್ದಾರೆ. ಇನ್ನು ತಮ್ಮ 50ನೇ ವರ್ಷದಲ್ಲಿ ಉದ್ಯಮ ಆರಂಭಿಸಿದ ನೈಕಾ ಸಿಇಒ ಫಲ್ಗುಣಿ ನಾಯರ್ ಕೆಲ ವರ್ಷಗಳಲ್ಲಿ ಬಿಲಯನೇರ್ ಆಗಿದ್ದಾರೆ (1 ಬಿಲಿಯನ್​ಗೆ 100 ಕೋಟಿ). ಆ ರೀತಿ ಈ ವರ್ಷ ದೊಡ್ಡ ಸಾಧನೆಗಳನ್ನು ಮಾಡಿದ ಐವರು ಮಹಿಳೆಯರನ್ನು ಈ ಲೇಖನದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

ಗೀತಾ ಗೋಪಿನಾಥ್ ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆದರು. ಇದಕ್ಕೂ ಮುನ್ನ ಐಎಂಎಫ್​ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಇತಿಹಾಸ ಬರೆದರು. 2022ರ ಜನವರಿಯಲ್ಲಿ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಈ ಸಮಯಕ್ಕೆ ಗೀತಾ ಅವರಂಥವರು ಈ ಹುದ್ದೆ ನಿರ್ವಹಿಸುವ ಅಗತ್ಯ ಇದೆ ಎಂದು ಐಎಂಎಫ್​ನ ಎಂ.ಡಿ. ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಫಲ್ಗುಣಿ ನಾಯರ್ ಫಲ್ಗುಣಿ ನಾಯರ್ ಅವರು ತಮ್ಮ ಇ-ಕಾಮರ್ಸ್ ಸೌಂದರ್ಯ ಪ್ಲಾಟ್​ಫಾರ್ಮ್ ಉದ್ಯಮ ನೈಕಾವನ್ನು ಆರಂಭಿಸಿದ್ದು ತಮ್ಮ 50ನೇ ವಯಸ್ಸಿನಲ್ಲಿ. ಈ ವರ್ಷದ ನವೆಂಬರ್​ನಲ್ಲಿ ಅವರಿಗೆ 58ನೇ ವರ್ಷವಾದಾಗ ಅವರು ಭಾರತದ ಅತಿ ಶ್ರೀಮಂತ ಸೆಲ್ಫ್​ಮೇಡ್ ಮಹಿಳಾ ಬಿಲಿಯನೇರ್ ಅನಿಸಿಕೊಂಡರು. ಎಎಫ್​ಪಿ ವರದಿಯ ಪ್ರಕಾರ ಅವರು ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರು. ಅದಕ್ಕೆ ಕಾರಣ ಆಗಿದ್ದು ಈಚೆಗೆ ಲಿಸ್ಟಿಂಗ್ ಆದ ನೈಕಾ ಷೇರು. ಆ ಮೂಲಕ ನೈಕಾ ಸ್ಥಾಪಕಿ ಹಾಗೂ ಸಿಇಒ ಭಾರತದ ಇತರ ಆರು ಬಿಲಿಯನೇರ್ ಭಾರತೀಯ ಮಹಿಳೆಯರ ಬ್ಲೂಮ್​ಬರ್ಗ್​ ಸೂಚ್ಯಂಕದಲ್ಲಿ ಸೇರ್ಪಡೆ ಆದರು.

ಲೀನಾ ನಾಯರ್ ಫ್ರೆಂಚ್​ ವಿಲಾಸಿ ಫ್ಯಾಷನ್ ಹೌಸ್ ಚಾನೆಲ್​ (Chanel) ಗ್ಲೋಬಲ್​ನ ಹೊಸ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯರು ಲೀನಾ ನಾಯರ್. ಜಾಗತಿಕ ಮಟ್ಟದಲ್ಲಿ ಅವರು ಚಾನೆಲ್​ನ ಸಿಇಒ. ಕಂಪೆನಿಯ ಹೇಳಿಕೆ ಪ್ರಕಾರ, ಲೀನಾ ನಾಯರ್ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾಯರ್ ಅವರು ಯುನಿಲಿವರ್​ನಲ್ಲಿ ಮಾನವ ಸಂಪನ್ಮೂಲ ಉನ್ನತ ಅಧಿಕಾರಿಯಾಗಿದ್ದರು.

ದಿವ್ಯಾ ಗೋಕುಲ್​ನಾಥ್ ಬೈಜೂಸ್ ಥಿಂಕ್ ಅಂಡ್ ಲರ್ನ್ ಎಡ್​ಟೆಕ್ ಪ್ಲಾಟ್​ಫಾರ್ಮ್​ನ ಸಹ ಸಂಸ್ಥಾಪಕರು ದಿವ್ಯಾ ಗೋಕುಲ್​ನಾಥ್. ಅವರು ತಮ್ಮ ಕಂಪೆನಿಯನ್ನು ಯುನಿಕಾರ್ನ್ ಆಗಿ ಬೆಳೆಸಿದವರು. ಜತೆಗೆ 405 ಕೋಟಿ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 35 ವರ್ಷದ ದಿವ್ಯಾ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರುಚಿ ಕರ್ಲಾ ಸಾಫ್ಟ್​ಬ್ಯಾಂಕ್​ನಿಂದ 160 ಮಿಲಿಯನ್ ಡಾಲರ್ ನಿಧಿ ಪಡೆದ ಮೇಲೆ ಆಫ್​ಬಿಜಿನೆಸ್​ ಯುನಿಕಾರ್ನ್ ಆಯಿತು. ಅದರ ಸಹ ಸಂಸ್ಥಾಪಕರು ರುಚಿ ಕರ್ಲಾ. OFB Tech (OfBusiness) ತಂತ್ರಜ್ಞಾನ ಕಂಪೆನಿ. ಅದು ಕಚ್ಚಾ ವಸ್ತುಗಳ ಖರೀದಿ ಮತ್ತು ಉತ್ಪಾದನೆ ಹಾಗೂ ಮೂಲಸೌಕರ್ಯ ವಲಯದಲ್ಲಿ ಇರುವ ಎಸ್​ಎಂಇಗಳಿಗೆ ಸಾಲ ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಎಸ್​ಎಂಇಗಳು ಉತ್ತಮ ಉತ್ಪನ್ನಗಳನ್ನು ಖರೀದಿ ಮಾಡುವುದಕ್ಕೆ ತಂತ್ರಜ್ಞಾನದ ಸಂಯೋಜನೆ ಮಾಡುತ್ತದೆ.

ಇದನ್ನೂ ಓದಿ: Nykaa Falguni Nayar: ವಿಶ್ವದ ಶ್ರೀಮಂತ ಮಹಿಳೆಯರ ಸಾಲಲ್ಲಿ ನೈಕಾದ ಫಲ್ಗುಣಿ ನಾಯರ್; ಆಸ್ತಿ ಮೌಲ್ಯ 48,257 ಕೋಟಿ ರೂ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ