ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್ನಲ್ಲಿ ಶುಭಾಂಶು ಶುಕ್ಲಾ ಯಶಸ್ವೀ ಡಾಕಿಂಗ್, ಅಪ್ಪ-ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪ
ಲಖನೌ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ಮಗ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಅವರನ್ನು ಹೊತ್ತ ರಾಕೆಟ್ ಡಾಕ್ ಆಗುತ್ತಿದ್ದುದನ್ನು ಲೈವ್ ಆಗಿ ವೀಕ್ಷಿಸಿದ ಶುಭಾಂಶು ತಾಯಿ ಆಶಾ ಶುಕ್ಲಾ ಮತ್ತು ತಂದೆ ಶಂಭು ಶುಕ್ಲಾ ಆನಂದಭಾಷ್ಪ ಸುರಿಸಿದರು. ಅಂತರಾಷ್ಟ್ರೀಯ ಸ್ಪೇಸ್ ಸ್ಟೇಶನ್ ತಲುಪಿದ ಮೊದಲ ಭಾರತೀಯ ಗಗನಯಾತ್ರಿಯ ತಂದೆತಾಯಿ ಅನಿಸಿಕೊಳ್ಳೋದು ಅಸಾಮಾನ್ಯ ಅನುಭೂತಿ ಮತ್ತು ಅನುಭವ. ನಿನ್ನೆ ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಲಾಂಚ್ ಆಗುವುದನ್ನೂ ಅವರು ಲೈವ್ ವೀಕ್ಷಿಸಿದ್ದರು.
ಲಖನೌ, ಜೂನ್ 26: ಆ್ಯಕ್ಸಿಯಮ್-4 ಮಿಶನ್ ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಮತ್ತು ಅವರೊಂದಿಗೆ ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಕ್ರ್ಯೂ ಡ್ರಾಗನ್ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್ (ಐಎಸ್ಎಸ್) (International Space Station ) ತಲುಪಿದ್ದು, ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹಾರಿದ ಎರಡನೇ ಭಾರತೀಯ ಮತ್ತು ಐಎಸ್ಎಸ್ ತಲುಪಿದ ಮೊಟ್ಟ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಭಾರತೀಯ ಕಾಲಮಾನದ ಪ್ರಕಾರ ಸಾಯಂಕಾಲ 4:03 ಗಂಟೆಗೆ ಸ್ಪೇಸ್ ಎಕ್ಸ್ ಡ್ರಾಗನ್ ಐಎಸ್ಎಸ್ ನಲ್ಲಿ ಡಾಕ್ ಆಗಿದೆ. ನೌಕೆ ಡಾಕ್ ಆದ ಕೂಡಲೇ ಗಗನಯಾತ್ರಿಗಳು ಸ್ಪೇಸ್ ಸ್ಟೇಶನ್ ಒಳಗಡೆ ಪ್ರವೇಶಿಸುವುದಿಲ್ಲ ಎಂದು ಮಾಹಿತಿಯೊಂದು ಹೇಳುತ್ತದೆ. ಶುಕ್ಲಾ ಅವರೊಂದಿಗೆ ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೊಲೆಂಡ್ನ ಸ್ಲೋವಾಜ್ ಉಜಾನ್ಸ್ಕಿ ಮತ್ತು ಹಂಗರಿಯ ಟೈಬರ್ ಕಾಪು ಗಗನಯಾತ್ರಿಗಳಾಗಿದ್ದಾರೆ.
ಇದನ್ನೂ ಓದಿ: ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆ ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದಾರೆ; ಆಕ್ಸಿಯಮ್ -4 ಉಡಾವಣೆಗೆ ಮೋದಿ ಶ್ಲಾಘನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ