AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ದೊಡ್ಡ ಆರ್ಥಿಕತೆ ಇಷ್ಟು ವೇಗದಲ್ಲಿ ಬೆಳೆಯುವುದು ಅಪರೂಪ: ಭಾರತವನ್ನು ಪ್ರಶಂಸಿಸಿದ ವಾಲ್​ಮಾರ್ಟ್ ಸಿಇಒ

Rare to see such a large economy growing so fast: Walmart CEO on India: ಅಮೆರಿಕದ ವಾಲ್ಮಾರ್ಟ್ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಡೌಗ್ ಮೆಕ್ಮಿಲನ್ ಅವರು ಭಾರತದ ಆರ್ಥಿಕ ಶಕ್ತಿಯನ್ನು ಪ್ರಶಂಸಿಸಿದ್ಧಾರೆ. ಇಷ್ಟು ದೊಡ್ಡ ಆರ್ಥಿಕತೆಯು ಇಷ್ಟು ವೇಗದಲ್ಲಿ ಬೆಳೆಯುವುದು ಅಪರೂಪದ ಸಂಗತಿ ಎಂದಿದ್ದಾರೆ. ರೀಟೇಲ್ ಚೈನ್ ಕಂಪನಿ ಎನಿಸಿದ್ದ ವಾಲ್ಮಾರ್ಟ್ ಭಾರತದ ಫ್ಲಿಪ್​ಕಾರ್ಟ್ ಮತ್ತು ಫೋನ್ ಪೇ ಸಂಸ್ಥೆಗಳನ್ನು ಖರೀದಿಸಿದೆ.

ಇಷ್ಟು ದೊಡ್ಡ ಆರ್ಥಿಕತೆ ಇಷ್ಟು ವೇಗದಲ್ಲಿ ಬೆಳೆಯುವುದು ಅಪರೂಪ: ಭಾರತವನ್ನು ಪ್ರಶಂಸಿಸಿದ ವಾಲ್​ಮಾರ್ಟ್ ಸಿಇಒ
ಡೌಗ್ ಮೆಕ್ಮಿಲನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2025 | 5:07 PM

Share

ನವದೆಹಲಿ, ಜೂನ್ 25: ಅಮೆರಿಕದ ರೀಟೇಲ್ ಚೈನ್ ಕಂಪನಿಯಾದ ವಾಲ್ಮಾರ್ಟ್​ನ ಗ್ಲೋಬಲ್ ಸಿಇಒ ಮತ್ತು ಅಧ್ಯಕ್ಷ ಡೌಗ್ ಮೆಕ್ಮಿಲನ್ (Walmart CEO Doug McMillon) ಅವರು ಭಾರತದ ಆರ್ಥಿಕ ಶಕ್ತಿ ಬಗ್ಗೆ ಬೆರಗಾಗಿದ್ದಾರೆ. ಭಾರತದ ಫ್ಲಿಪ್​​ಕಾರ್ಟ್ ಮತ್ತು ಫೋನ್​ಪೇ ಕಂಪನಿಗಳನ್ನು ಖರೀದಿಸಿದ ಬಳಿಕ ವಾಲ್ಮಾರ್ಟ್ ಸಾಕಷ್ಟು ಕಲಿಯುತ್ತಿದೆ ಎಂದು ಮೆಕ್ಮಿಲನ್ ಹೇಳಿದ್ದಾರೆ. ಭಾರತದಿಂದ ವರ್ಷಕ್ಕೆ ತಮ್ಮ ಸಂಸ್ಥೆ 10 ಬಿಲಿಯನ್ ಡಾಲರ್ ಆದಾಯ ಹೊಂದುವ ಗುರಿ ಇಟ್ಟಿದೆ ಎಂದು ಹೇಳಿದ ಅವರು, ಭಾರತದಂತಹ ದೊಡ್ಡ ಆರ್ಥಿಕತೆಯು ಇಷ್ಟು ವೇಗದಲ್ಲಿ ಬೆಳವಣಿಗೆ ಹೊಂದುವುದು ನಿಜಕ್ಕೂ ವಿಶೇಷ ಸಂಗತಿ ಎಂದಿದ್ದಾರೆ.

ಭಾರತದಲ್ಲಿ ವಾಲ್ಮಾರ್ಟ್ ಸಂಸ್ಥೆ ಮಾಡುತ್ತಿರುವ ವ್ಯವಹಾರಗಳ ಬಗ್ಗೆ ಮಾತನಾಡಿದ ವಾಲ್ಮಾರ್ಟ್ ಸಿಇಒ ಡೌಗ್ ಮೆಕ್​​ಮಿಲನ್, ಭಾರತಕ್ಕೆ ಒಮ್ಮೆ ಬಂದು ಹೋದರೆ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಸಂಕ್ಷಿಪ್ತ ಚಿತ್ರಣ ಸಿಗುತ್ತದೆ. ಆದರೆ, ತಾನು ಭಾರತಕ್ಕೆ ಬಾರಿ ಬಾರಿ ಆಗಮಿಸಿದ್ದೇನೆ. ಭಾರತದ ಯಶೋಗಾಥೆ ಸ್ಪಷ್ಟವಾಗಿ ಗೋಚರವಾಗುತ್ತಿದೆ, ಹೆಚ್ಚು ಕುತೂಹಲಕಾರಿ ಎನಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ

‘ಹಲವು ವರ್ಷಗಳಿಂದ ನಾವು ಭಾರತದಲ್ಲಿರುವ ಬೆಳವಣಿಗೆಯನ್ನು ಕಂಡಿದ್ದೇವೆ. ಇದು ಮುಂದುವರಿಯುತ್ತದೆ ಎಂದು ಭಾವಿಸಿದ್ದೇನೆ. ಇಲ್ಲಿ ಉದ್ದಿಮೆಗಾರಿಕೆ ಹೆಚ್ಚುತ್ತಿದೆ. ಇಷ್ಟು ದೊಡ್ಡ ಆರ್ಥಿಕತೆಯು ಇಷ್ಟು ವೇಗವಾಗಿ ಬೆಳೆಯುತ್ತಿರುವುದು, ಇಷ್ಟೆಲ್ಲಾ ಅವಕಾಶಗಳನ್ನು ಸೃಷ್ಟಿಸುತ್ತಿರುವುದು ನಿಜಕ್ಕೂ ಅಪರೂಪ’ ಎಂದು ಡೌಗ್ ಮೆಕ್​ಮಿಲನ್ ಬಣ್ಣಿಸಿದ್ದಾರೆ.

ಫ್ಲಿಪ್​​ಕಾರ್ಟ್ ಮತ್ತು ಫೋನ್​​ಪೇ ಸಂಸ್ಥೆಗಳಿಂದ ಸಾಕಷ್ಟು ಕಲಿಯುತ್ತಿದ್ದೇವೆ. ನಾವೀನ್ಯತೆ ಸಾಧಿಸುವ ಸಾಮರ್ಥ್ಯ, ಕ್ಷಿಪ್ರತೆ ಸಾಧಿಸುವುದು, ಹೆಚ್ಚೆಚ್ಚು ಗ್ರಾಹಕರಿಗೆ ಸೇವೆ ನೀಡುವುದು, ಮಾರಾಟಗಾರರನ್ನು ಬಳಸುವುದು, ಇಕಾಮರ್ಸ್ ಮಾರುಕಟ್ಟೆ ನಿರ್ಮಿಸುವುದು ಇತ್ಯಾದಿ ಹಲವು ವಿಷಯಗಳನ್ನು ನಾವು ಕಲಿತಿದ್ದೇವೆ’ ಎಂದು ಅಮೆರಿಕದ ರೀಟೇಲ್ ದೈತ್ಯ ಕಂಪನಿಯ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ವಿಜ್ಞಾನಿಗಳಿಗೆ ಮಾರ್ಗ ಸಲೀಸು ಮಾಡುತ್ತಿರುವ ಸರ್ಕಾರ; ಇತ್ತೀಚಿನ ವರ್ಷಗಳಲ್ಲಿ ಬದಲಾಗಿರುವುದು ಏನು?

‘ಮೊದಲಿಗೆ ನಾವು ಭಾರತದಲ್ಲಿಂದ ಉತ್ಪನ್ನಗಳನ್ನು ಪಡೆಯುತ್ತಿದ್ದೆವು. ಸೀಮಿತ ವಿಭಾಗಗಳಲ್ಲಿ ಆರಂಭಿಸಿದೆವು. ಆದರೆ ಈಗ ಏನಾಗುತ್ತಿದೆ ನೋಡಿ, ಸಾಕಷ್ಟು ಬೆಳೆದಿದ್ದೇವೆ. ವರ್ಷಕ್ಕೆ 10 ಬಿಲಿಯನ್ ಡಾಲರ್ ಬ್ಯುಸಿನೆಸ್ ಗುರಿ ಇಟ್ಟಿದ್ದೇವೆ. ಇದು ನಿಜಕ್ಕೂ ದೊಡ್ಡ ಮೊತ್ತವೇ ಸರಿ. ಆದರೂ ಈ ದೊಡ್ಡ ಗುರಿ ಮುಟ್ಟಲು ಕೆಲಸ ಮಾಡುತ್ತಿದ್ದೇವೆ’ ಎಂದು ವಾಲ್ಮಾರ್ಟ್ ಸಿಇಒ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ