AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ವಿಜ್ಞಾನಿಗಳಿಗೆ ಮಾರ್ಗ ಸಲೀಸು ಮಾಡುತ್ತಿರುವ ಸರ್ಕಾರ; ಇತ್ತೀಚಿನ ವರ್ಷಗಳಲ್ಲಿ ಬದಲಾಗಿರುವುದು ಏನು?

India's research field boosted by Govt reforms: ಸರ್ಕಾರದ ನೀತಿ, ಅಸಂಬದ್ಧ ಕಾನೂನು ಇತ್ಯಾದಿ ಕಾರಣಕ್ಕೆ ಭಾರತದ ಸಂಶೋಧನಾ ಕ್ಷೇತ್ರ ದೀರ್ಘಕಾಲ ಹಿಂದುಳಿದಿದೆ. ಇತ್ತೀಚೆಗೆ ಸರ್ಕಾರವು ಕೆಲ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದು ಸಂಶೋಧನಾ ಕ್ಷೇತ್ರಕ್ಕೆ ಪುಷ್ಟಿ ಕೊಡುವ ನಿರೀಕ್ಷೆ ಇದೆ. ಭಾರತದಲ್ಲೇ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು ಎನ್ನುವುದು, ಹಾಗೂ ತೀರಾ ಕಡಿಮೆ ಖರೀದಿ ಮಿತಿ ಇತ್ಯಾದಿ ನಿಯಮಗಳನ್ನು ಸರ್ಕಾರ ಬದಲಿಸಿದೆ.

ಭಾರತದಲ್ಲಿ ವಿಜ್ಞಾನಿಗಳಿಗೆ ಮಾರ್ಗ ಸಲೀಸು ಮಾಡುತ್ತಿರುವ ಸರ್ಕಾರ; ಇತ್ತೀಚಿನ ವರ್ಷಗಳಲ್ಲಿ ಬದಲಾಗಿರುವುದು ಏನು?
ಸಂಶೋಧನಾ ಕ್ಷೇತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2025 | 12:54 PM

Share

ಭಾರತದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ (Research field) ಮೊದಲಿಂದಲೂ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಅದರಲ್ಲೂ ಸಂಶೋಧನಾ ಕ್ಷೇತ್ರ ದೀರ್ಘಕಾಲ ದುಸ್ಥಿತಿಯಲ್ಲಿ ಮಿಂದೆದ್ದಿದೆ. ಅಸಂಬದ್ಧ ಎನಿಸುವ ಖರೀದಿ ನಿಯಮಗಳು ಈ ಕ್ಷೇತ್ರದ ಬೆಳವಣಿಗೆಗೆ ತಡೆಯೊಡ್ಡಿವೆ. 2017ರ ಜನರಲ್ ಫೈನಾನ್ಸ್ ರೂಲ್ಸ್ (GFR) ಪ್ರಕಾರ, ಸಂಶೋಧನೆಗೆ ವಸ್ತುಗಳನ್ನು ಖರೀದಿಸಬೇಕಾದರೆ ಅದು ಭಾರತದಲ್ಲೇ ತಯಾರಾಗಿರಬೇಕು ಎನ್ನುವ ನಿಯಮ, ಸಂಕುಚಿತ ಟೆಂಡರ್ ವಿಧಾನ, ಹಣಕಾಸು ಕೊರತೆ ಇತ್ಯಾದಿ ಸಮಸ್ಯೆಗಳು ಕ್ಷೇತ್ರವನ್ನು ಬಾಧಿಸಿವೆ. ಇತ್ತೀಚಿನ ದಿನಗಳಲ್ಲಿ ಬದಲಾವಣೆ ಕಾಣತೊಡಗಿದೆ. ಸರ್ಕಾರವು ಸಂಶೋಧನಾ ಕ್ಷೇತ್ರದಲ್ಲಿ ಸುಧಾರಣೆ ತರಲು ಗಂಭೀರ ಹೆಜ್ಜೆಗಳನ್ನು ಇರಿಸುತ್ತಿರುವುದು ಫಲ ಕೊಡತೊಡಗಿದೆ.

ಸಂಶೋಧನಾ ಕ್ಷೇತ್ರಕ್ಕೆ ನಿರಾಳತೆ ತಂದ ಸರ್ಕಾರದ ಕ್ರಮಗಳು

ಸರ್ಕಾರ ಜೂನ್ ತಿಂಗಳ ಮೊದಲ ವಾರದಲ್ಲಿ ಜನರಲ್ ಫೈನಾನ್ಸ್ ರೂಲ್ 2017ಗೆ ತಿದ್ದುಪಡಿ ತಂದಿದೆ. ಅದರಲ್ಲಿ ಏನೇನು ಪ್ರಸ್ತಾಪ ಅಥವಾ ಸುಧಾರಣೆ ತರಲಾಗಿದೆ ಎನ್ನುವ ವಿವರ ಮುಂದಿದೆ.

  • ನೇರ ಖರೀದಿ ಮಿತಿ ಹೆಚ್ಚಳ: ಸಂಶೋಧನಾ ಸಂಸ್ಥೆಗಳು ಅನುಮೋದನೆ ಇಲ್ಲದೇ ಖರೀದಿಸಬಹುದಾದ ಮಿತಿಯನ್ನು 1 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲಾಗಿದೆ. ಸಮಿತಿ ಅನುಮೋದನೆ ಪಡೆದು ಖರೀದಿಸಬಹುದಾದ ಮಿತಿ 10 ಲಕ್ಷ ರೂನಿಂದ 25 ಲಕ್ಷ ರೂಗೆ ಏರಿಸಲಾಗಿದೆ.
  • ಟೆಂಡರ್ ಮಿತಿ ಹೆಚ್ಚಳ: ಸೀಮಿತ ಟೆಂಡರ್ ಅಥವಾ ಲಿಮಿಟೆಡ್ ಟೆಂಡರ್ (ಎಲ್​ಟಿಇ) 50 ಲಕ್ಷ ರೂ ಇದ್ದದ್ದು 1 ಕೋಟಿ ರೂಗೆ ಹೆಚ್ಚಳ ಆಗಿದೆ. ಮುಕ್ತ ಟೆಂಡರ್​ಗಳ ಮೂಲಕ 1 ಕೋಟಿ ರೂಗೂ ಅಧಿಕ ಮೊತ್ತದ ವಸ್ತುಗಳನ್ನು ಖರೀದಿಸಲು ಅವಕಾಶ ಇರುತ್ತದೆ.
  • ಖಾಸಗಿ ಇಮಾರುಕಟ್ಟೆಗೂ ಅವಕಾಶ: ಸರ್ಕಾರದ ಸಂಶೋಧನಾ ಸಂಸ್ಥೆಗಳು ಸರ್ಕಾರೀ ಇ-ಮಾರುಕಟ್ಟೆಗಳ ಮೂಲಕ ಖರೀದಿಸಬೇಕು ಎನ್ನುವ ನಿಯಮ ಇತ್ತು. ಆದರೆ, ಈಗ ಸರ್ಕಾರೇತರ ಇ-ಮಾರುಕಟ್ಟೆಯನ್ನೂ ಬಳಸಿಕೊಳ್ಳಬಹುದು. ಅಮೇಜಾನ್, ಫ್ಲಿಪ್​ಕಾರ್ಟ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಿಂದಲೂ ಸರಬರಾಜು ಪಡೆಯಬಹುದು.
  • ಜಾಗತಿಕ ಟೆಂಡರ್​​ಗಳಲ್ಲಿ ಸುಧಾರಣೆ: ಉಪಕುಲಪತಿ ಅಥವಾ ನಿರ್ದೇಶಕರ ಮಟ್ಟದಲ್ಲಿ ಅನುಮೋದನೆ ಪಡೆದು 200 ಕೋಟಿ ರೂವರೆಗೂ ಜಾಗತಿಕ ಟೆಂಡರ್​ನಲ್ಲಿ ಖರೀದಿ ಮಾಡಬಹುದು.

ಇದನ್ನೂ ಓದಿ: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ

ಭಾರತದ ಈ ಸುಧಾರಣಾ ಕ್ರಮಗಳು ಇನ್ನೂ ಆರಂಭಿಕ ಹೆಜ್ಜೆ ಎನಿಸಿವೆ. ಜಾಗತಿಕ ಸಂಶೋಧನಾ ಸಂಸ್ಥೆಗಳ ಮಟ್ಟಕ್ಕೆ ಭಾರತ ತಲುಪಬೇಕಾದರೆ ಇನ್ನೂ ಹೆಚ್ಚಿನ ಸುಧಾರಣೆಗಳ ಅಗತ್ಯ ಇದೆ ಎನ್ನುತ್​ತಾರೆ ಸಂಶೋಧಕರು. ಆದಾಗ್ಯೂ ಹಿಂದಿದ್ದ ದುಸ್ಥಿತಿಯನ್ನು ತೊಡೆದು ಹಾಕಲು ಸರ್ಕಾರದ ಈ ಕ್ರಮ ಸಹಾಯಕವಾಗಬಹುದು ಎನ್ನುವ ಆಶಾಭಾವನೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ