AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್ ಅಕೌಂಟ್​​ನಿಂದ ಒಮ್ಮೆಗೆ 5 ಲಕ್ಷ ರೂವರೆಗೆ ಅಡ್ವಾನ್ಸ್ ವಿತ್​​ಡ್ರಾ ಸಾಧ್ಯ; ಇಲ್ಲಿದೆ ಹಿಂಪಡೆಯುವ ಕ್ರಮ

EPFO raises advance withdrawal limit from PF account: ಇಪಿಎಫ್ ಅಕೌಂಟ್​​ನಿಂದ 1 ಲಕ್ಷ ರೂವರೆಗೂ ಆಟೊಸೆಟಲ್ಮೆಂಟ್ ಮೋಡ್​​ನಲ್ಲಿ ಅಡ್ವಾನ್ಸ್ ಹಣ ಹಿಂಪಡೆಯಲು ಅವಕಾಶ ಇತ್ತು. ಈಗ ಅದನ್ನು ಐದು ಲಕ್ಷ ರೂಗೆ ಏರಿಸಲಾಗಿದೆ. ಇನ್ಮುಂದೆ ಜನರು ಕೇವಲ ಮೂರು ದಿನದಲ್ಲಿ 5 ಲಕ್ಷ ರೂವರೆಗೆ ಪಿಎಫ್ ಹಣವನ್ನು ಕ್ಲೇಮ್ ಮಾಡಲು ಸಾಧ್ಯ. ಇಪಿಎಫ್ ಸದಸ್ಯರ ಅಗತ್ಯಗಳಿಗೆ ತಕ್ಕಂತೆ ಈ ಬದಲಾವಣೆ ಮಾಡಲಾಗಿದೆ.

ಇಪಿಎಫ್ ಅಕೌಂಟ್​​ನಿಂದ ಒಮ್ಮೆಗೆ 5 ಲಕ್ಷ ರೂವರೆಗೆ ಅಡ್ವಾನ್ಸ್ ವಿತ್​​ಡ್ರಾ ಸಾಧ್ಯ; ಇಲ್ಲಿದೆ ಹಿಂಪಡೆಯುವ ಕ್ರಮ
ಇಪಿಎಫ್​​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2025 | 4:21 PM

Share

ನವದೆಹಲಿ, ಜೂನ್ 25: ಇಪಿಎಫ್​​ಒದಿಂದ ಮತ್ತೊಂದು ಗಮನಾರ್ಹ ಅಪ್​ಡೇಟ್ ಬಂದಿದೆ. ಇಪಿಎಫ್ ಅಕೌಂಟ್​​ನಿಂದ ಅಡ್ವಾನ್ಸ್ ಹಣ ವಿತ್​ಡ್ರಾ (EPF advance withdrawal) ಮಾಡಲು ಇರುವ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ. ಆಟೊ ಸೆಟಲ್ಮೆಂಟ್ ಮೋಡ್​​ನಲ್ಲಿ ನಿಮಗೆ ಅಡ್ವಾನ್ಸ್ ಹಣ ಸಂದಾಯವಾಗುತ್ತದೆ. ಅಂದರೆ, ಮೂರು ದಿನದೊಳಗೆ ನೀವು ಐದು ಲಕ್ಷ ರೂವರೆಗೆ ಪಿಎಫ್ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಹಿಂಪಡೆಯಲು ಅವಕಾಶ ಇದೆ. ಈ ವಿಷಯವನ್ನು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ನಿನ್ನೆ ಹೇಳಿದ್ದಾರೆ.

ಹೆಚ್ಚಿನ ಮೊತ್ತದ ಅಡ್ವಾನ್ಸ್ ಹಿಂಪಡೆಯಲು ಅವಕಾಶ ಕೊಡುವಂತೆ ಬಹಳಷ್ಟು ಉದ್ಯೋಗಿಗಳಿಂದ ಬೇಡಿಕೆ ಇತ್ತು. ಸರ್ಕಾರ ಕೂಡ ಸ್ಪಂದಿಸಿ ಈ ಕ್ರಮ ತೆಗೆದುಕೊಂಡಿದೆ. ಇಪಿಎಫ್​ಒದಲ್ಲಿ ಅಕೌಂಟ್​​​ಗಳನ್ನು ಹೊಂದಿರುವ ಏಳು ಕೋಟಿಗೂ ಅಧಿಕ ಮಂದಿ ಇದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಆರ್ಥಿಕ ತೊಂದರೆಯಾದಾಗ, ಅವರಿಗೆ ನೆರವಾಗಲು ಸರ್ಕಾರ ತೆಗೆದುಕೊಂಡ ಕ್ರಮಗಳಲ್ಲಿ ಇಪಿಎಫ್ ಅಡ್ವಾನ್ಸ್ ಹಣ ಹಿಂಪಡೆಯುವುದೂ ಒಂದಾಗಿತ್ತು.

ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ಕಟ್ಟಡ ನಿರ್ಮಾಣ ಇತ್ಯಾದಿ ಉದ್ದೇಶಗಳಿಗೆ ಇಪಿಎಫ್ ಮುಂಗಡ ಹಣ ಹಿಂಪಡೆಯುವ ಅವಕಾಶಗಳನ್ನು ವಿಸ್ತರಿಸಲಾಗಿತ್ತು. 2024-25ರಲ್ಲಿ ಆಟೊ ಸೆಟಲ್ಮೆಂಟ್ ಮೂಲಕ ಇಪಿಎಫ್​​ಒ 2.34 ಕೋಟಿ ಅಡ್ವಾನ್ಸ್ ಕ್ಲೇಮ್ ಅನ್ನು ಪೂರ್ಣಗೊಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡೂವರೆ ತಿಂಗಳಲ್ಲಿ 76.52 ಲಕ್ಷ ಅಡ್ವಾನ್ಸ್ ಕ್ಲೇಮ್​​ಗಳನ್ನು ಆಟೊ ಸೆಟಲ್ಮೆಂಟ್ ಮೂಲಕ ಸೆಟಲ್ ಮಾಡಲಾಗಿದೆ.

ಇದನ್ನೂ ಓದಿ: ಇಎಲ್​​ಐ ಸ್ಕೀಮ್​​ಗೆ ಯುಎಎನ್ ಸಕ್ರಿಯಗೊಳಿಸಲು ಡೆಡ್​​ಲೈನ್ ವಿಸ್ತರಣೆ; ಏನಿದು ಯೋಜನೆ, ಸುಲಭದಲ್ಲಿ ಯುಎಎನ್ ಆ್ಯಕ್ಟಿವೇಟ್ ಹೇಗೆ?

ಪಿಎಫ್ ಅಡ್ವಾನ್ಸ್ ಹಣ ಹಿಂಪಡೆಯುವುದು ಹೇಗೆ?

  • ಯುಎಎನ್ ಮೆಂಬರ್ ಇ-ಸೇವಾ ಪೋರ್ಟಲ್​​ಗೆ ಯುಎಎನ್ ನಂಬರ್ ಮೂಲಕ ಲಾಗಿನ್ ಆಗಿರಿ.
  • ಆನ್ಲೈನ್ ಸರ್ವಿಸಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಕ್ಲೇಮ್ (ಫಾರ್ಮ್ 31, 19 ಮತ್ತು 10ಸಿ_ ಅನ್ನು ಆಯ್ಕೆ ಮಾಡಿ
  • ನಿಮ್ಮ ನೊಂದಾಯಿತ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ, ಅದನ್ನು ವೆರಿಫೈ ಮಾಡಿ.
  • ಕ್ಲೇಮ್ ಟೈಪ್ ಆಗಿ ಪಿಎಫ್ ಅಡ್ವಾನ್ಸ್ (ಫಾರ್ಮ್ 31) ಅನ್ನು ಆಯ್ಕೆ ಮಾಡಿ.
  • ಹಣ ಹಿಂಪಡೆಯಲು ಕಾರಣ ಏನೆಂದು ನಮೂದಿಸಿ.
  • ಅರ್ಜಿ ಪೂರ್ಣಗೊಂಡ ಬಳಿಕ ಅದನ್ನು ಸಬ್ಮಿಟ್ ಮಾಡಿ.
  • ನೀವು ಕೆಲಸ ಮಾಡುತ್ತಿರುವ ಕಂಪನಿ ವತಿಯಿಂದ ಅನುಮೋದನೆ ಸಿಗುವವರೆಗೂ ಕಾಯಬೇಕು.
  • ಅನುಮೋದನೆ ಸಿಕ್ಕ ಮೂರ್ನಾಲ್ಕು ದಿನದಲ್ಲಿ ಅಡ್ವಾನ್ಸ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ