Kolhapuri Chappal: ಕೊಲ್ಹಾಪುರಿ ಚಪ್ಪಲಿ ಹಾಕಿದ್ದೀರಾ? ವಿದೇಶೀ ಕಂಪನಿ ಕೈಗೆ ಸಿಕ್ಕ ಈ ಚಪ್ಪಲಿಯ ಹೊಸ ಬೆಲೆ ಕೇಳಿದ್ರೆ ಶಾಕ್
Kolhapuri chappal at Italy Milan Fashion show: ಭಾರತದ ಕೊಲ್ಹಾಪುರಿ ಶೈಲಿಯ ಚಪ್ಪಲಿಯು ಇಟಲಿಯ ಫ್ಯಾಷನ್ ಶೋನಲ್ಲಿ ಗಮನ ಸೆಳೆದಿದೆ. ವಿಶ್ವದ ಖ್ಯಾತ ಫ್ಯಾಷನ್ ಬ್ರ್ಯಾಂಡ್ ಆದ ಪ್ರಾದ ಈ ಕೊಲ್ಹಾಪುರಿ ಶೈಲಿಯ ಚಪ್ಪಲಿಯನ್ನು ಫ್ಯಾಷನ್ ಶೋನಲ್ಲಿ ಪ್ರದರ್ಶಿಸಿದೆ. ಆದರೆ, ಇದು ಕೊಲ್ಹಾಪುರಿ ಚಪ್ಪಲಿ ಎಂದು ಕ್ರೆಡಿಟ್ ನೀಡಿಲ್ಲ. ಪ್ರಾದ ಬ್ರ್ಯಾಂಡ್ನಲ್ಲಿರುವ ಈ ಚಪ್ಪಲಿಯ ಬೆಲೆ ಲಕ್ಷ ರೂಗೂ ಹೆಚ್ಚು.

ಮುಂಬೈ, ಜೂನ್ 25: ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳು ಸ್ಥಳೀಯರ ಅವಗಣನೆಗೆ ಆಗುವುದು ಒಂದೆಡೆಯಾದರೆ, ವಿದೇಶಗಳಲ್ಲಿ ಅವರು ಮಾನ್ಯತೆ ಪಡೆದು ಭಾರತಕ್ಕೆ ಹೊಸ ರೂಪದಲ್ಲಿ ವಾಪಸ್ ಬರುವ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇಂಥದ್ದೇ ಒಂದು ಉದಾಹರಣೆ ಕೊಲ್ಹಾಪುರಿ ಚಪ್ಪಲಿ. ಮಹಾರಾಷ್ಟ್ರದ ಕೊಲ್ಹಾಪುರಿ ಚಪ್ಪಲಿ (Kolhapuri chappal) ಕನ್ನಡಿಗರಿಗೆ ಚಿರಪರಿಚಿತ ಇದ್ದೇ ಇದೆ. ಕೊಲ್ಹಾಪುರದ ಕುಶಲಕರ್ಮಿ ಚಮ್ಮಾರರು ಕೈಯಿಂದಲೇ ತಯಾರಿಸಲಾದ ಸೊಗಸಾದ ವಿನ್ಯಾಸದ ಮತ್ತು ಗಟ್ಟಿಮುಟ್ಟಿನ ಚಪ್ಪಲಿ ಇದು. ಈ ಕೊಲ್ಹಾಪುರಿ ಚಪ್ಪಲಿ ಈ ಜಾಗತಿಕ ಫ್ಯಾಷನ್ ಎನಿಸುತ್ತಿದೆ. ಪ್ರಾದ (Prada) ಎನ್ನುವ ಇಟಲಿಯ ಫ್ಯಾಷನ್ ಸಂಸ್ಥೆ ತನ್ನ ಮಾಡಲ್ಗಳಿಗೆ ಕೊಲ್ಹಾಪುರಿ ಶೈಲಿಯ ಚಪ್ಪಲಿ ತೊಡೆಸಿ ರ್ಯಾಂಪ್ ವಾಕ್ ಮಾಡಿಸಿದೆ.
ಇಟಲಿಯ ಫ್ಯಾಷನ್ ಶೋನಲ್ಲಿ ವಿವಿಧ ಮಹಿಳಾ ರೂಪದರ್ಶಿಗಳು ನಾನಾ ತರಹದ ಪೋಷಾಕುಗಳನ್ನು ಧರಿಸಿ ಸ್ಟೇಜ್ ಮೇಲೆ ನಡೆದಾಡಿದ್ದಾರೆ. ಕೆಲವರು ಧರಿಸಿದ ಚಪ್ಪಲಿಗಳು ಥೇಟ್ ನಮ್ಮ ಕೊಲ್ಹಾಪುರಿ ಚಪ್ಪಲಿಯದ್ದೇ ಹೋಲಿಕೆ ಹೊಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನರು ಈ ಹೋಲಿಕೆಯನ್ನು ಗುರುತಿಸಿದ್ದಾರೆ. ವಿದೇಶೀ ಕಂಪನಿಯೊಂದು ಭಾರತದ ಪಾರಂಪರಿಕ ಉತ್ಪನ್ನವನ್ನು ನಕಲು ಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?
ಆದರೆ, ಪ್ರಾದ ಕಂಪನಿಯು ಈ ಚಪ್ಪಲಿಗೆ ಕೊಲ್ಹಾಪುರಿಗೆ ಕ್ರೆಡಿಟ್ ನೀಡಿಲ್ಲ. ಕೊಲ್ಹಾಪುರದ ಕುಶಲಕರ್ಮಿಗಳಿಂದಲೇ ಈ ಚಪ್ಪಲಿಯನ್ನು ಮಾಡಿಸಲಾಗಿದೆಯಾ ಎಂಬುದು ಗೊತ್ತಿಲ್ಲ.
‘ಧೋರಣೆ ಬದಲಾಗಿದೆ. ಅರ್ಥ ಮತ್ತು ಅಧಿಕಾರ ಬಿಡಿಸೋಣ’ ಎಂದು ಅಡಿಬರಹ ಹಾಕಿ ಪ್ರಾದ ಸಂಸ್ಥೆಯು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದೆ. ಕೆಲ ಮಾಡಲ್ಗಳು ಕೊಲ್ಹಾಪುರಿ ಚಪ್ಪಲಿ ಧರಿಸಿರುವಂತೆ ಈ ವಿಡಿಯೋದಲ್ಲಿ ಕಾಣಬಹುದು.
View this post on Instagram
500 ರೂನಿಂದ 3,000 ರೂ ಬೆಲೆಯ ಕೊಲ್ಹಾಪುರಿ ಚಪ್ಪಲಿ ಬೆಲೆ ಲಕ್ಷಕ್ಕೂ ಹೆಚ್ಚು?
ಕೊಲ್ಹಾಪುರಿ ಚಪ್ಪಲಿ ಗುಣಮಟ್ಟದಲ್ಲಿ ಬಹಳ ಶ್ರೇಷ್ಠ ಇದೆ. ಇದು ಕೊಲ್ಹಾಪುರಿಯ ಚಮ್ಮಾರರಿಗೆ ಸಿದ್ಧಿಸಿರುವ ಕಲೆಯ ಪ್ರತಿರೂಪ. ಈ ಚಪ್ಪಲಿ ಬೆಲೆ 1-2 ಸಾವಿರ ರೂ ಇರಬಹುದು. ಆದರೆ, ಇಟಲಿಯ ಫ್ಯಾಷನ್ ಸಂಸ್ಥೆ ಪ್ರದಾ ಪ್ರಸ್ತುತಪಡಿಸಿರುವ ಈ ಚಪ್ಪಲಿ ಬೆಲೆ 1.2 ಲಕ್ಷ ರೂ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ
ಮುಂದೆ, ಕೊಲ್ಹಾಪುರಿ ಚಪ್ಪಲಿಗಳು ಪ್ರಾದ ಬ್ರ್ಯಾಂಡ್ನಲ್ಲಿ ಭಾರತದ ಲಕ್ಷುರಿ ಮಾರುಕಟ್ಟೆಗೆ ದಾಂಗುಡಿ ಇಡಬಹುದು. ಸಾವಿರ ರೂ ಬೆಲೆಯ ಚಪ್ಪಲಿ ಲಕ್ಷಕ್ಕೆ ಸೇಲ್ ಆಗಬಹುದು. ಆದರೆ, ಬಡಪಾಯಿ ಕೊಲ್ಹಾಪುರಿ ಚಮ್ಮಾರರದ್ದು ಅದೇ ಬದುಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Wed, 25 June 25




