AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ

Air India CEO had got big salary hike before airline crash incident: ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನಾಪಘಾತ ಘಟನೆಗೆ 15 ದಿನ ಮುನ್ನ ಅದರ ಸಿಇಒ ಸಂಬಳ ಏರಿಕೆ ಮಾಡಲಾಗಿತ್ತು. ಕ್ಯಾಂಪ್​ಬೆಲ್ ವಿಲ್ಸನ್ ಅವರ ಒಟ್ಟು ಸ್ಯಾಲರಿ ಪ್ಯಾಕೇಜ್ 27.75 ಕೋಟಿ ರೂ ಆಫರ್ ಮಾಡಲಾಗಿತ್ತು. ಇದು ಅವರಿಗೆ ಶೇ. 46ರಷ್ಟು ಸಂಬಳ ಹೆಚ್ಚಳ ಆದಂತಾಗಿದೆ. ಇದರಲ್ಲಿ ಶೇ. 60ರಷ್ಟು ಸಂಬಳವು ಪರ್ಫಾರ್ಮೆನ್ಸ್ ಆಧಾರಿತವಾಗಿದ್ದಾಗಿದೆ.

Air India: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ
ಕ್ಯಾಂಪ್​ಬೆಲ್ ವಿಲ್ಸನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 24, 2025 | 4:47 PM

Share

ನವದೆಹಲಿ, ಜೂನ್ 24: ಗುಜರಾತ್​ನ ಅಹ್ಮದಾಬಾದ್ ಏರ್​ಪೋರ್ಟ್ ಬಳಿ ಏರ್ ಇಂಡಿಯಾ ವಿಮಾನಾಪಘಾತವಾಗಿ 270ಕ್ಕೂ ಹೆಚ್ಚು ಮಂದಿ ಬಲಿಯಾದ ಘಟನೆ ಎಂದಿಗೂ ಮರೆಯಲಾಗದಂಥದ್ದು. ಈ ದುರಂತ ಘಟಿಸುವ ಕೆಲವೇ ದಿನ ಮೊದಲು ಏರ್ ಇಂಡಿಯಾ ಸಿಇಒ ಕ್ಯಾಂಬೆಲ್ ವಿಲ್ಸನ್ (Air India CEO Campbell Wilson) ಅವರಿಗೆ ಭರ್ಜರಿ ಸಂಬಳ ಹೆಚ್ಚಳ ಮಾಡಲಾಗಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ದಿ ಮಿಂಟ್ ಪತ್ರಿಕೆಯಲ್ಲಿ ಇವತ್ತು ಬಂದಿರುವ ವರದಿ ಪ್ರಕಾರ ವಿಲ್ಸನ್ ಅವರಿಗೆ ನಿಗದಿತ ಸಂಬಳ ಸೇರಿ ಒಟ್ಟು ವಾರ್ಷಿಕ ಸಂಭಾವನೆ 27.75 ಕೋಟಿ ರೂ ಆಫರ್ ಮಾಡಲಾಗಿದೆ. 2025ರ ಏಪ್ರಿಲ್ 1ರಿಂದ ಈ ಹೊಸ ಸಂಭಾವನೆ ಚಾಲ್ತಿಗೆ ಬರುತ್ತದೆ.

2022ರಲ್ಲಿ ಏರ್ ಇಂಡಿಯಾ ಸಿಇಒ ಆಗಿ ನೇಮಕವಾದ ಕ್ಯಾಂಪ್​ಬೆಲ್ ವಿಲ್ಸನ್ ಅವರು 2023-24ರ ವರ್ಷದಲ್ಲಿ 18.96 ಕೋಟಿ ರೂ ಸಂಬಳ ಪಡೆದಿದ್ದರು. ಅವರನ್ನು ನೇಮಿಸಿಕೊಂಡಾಗ 21 ಕೋಟಿ ರೂಗೂ ಹೆಚ್ಚಿನ ಸಂಬಳದ ಆಶ್ವಾಸನೆ ಕೊಡಲಾಗಿತ್ತು. ಈ ವರ್ಷ ಆ ಆಶ್ವಾಸನೆಗಿಂತ ಹೆಚ್ಚಿನ ಮೊತ್ತದ ಸಂಬಳವು ವಿಲ್ಸನ್ ಅವರಿಗೆ ಆಫರ್ ಮಾಡಲಾಗಿದೆ. ಹಿಂದಿನ ವರ್ಷದ ಸಂಬಳಕ್ಕೆ ಹೋಲಿಸಿದರೆ ಈಗ ಅವರ ಸ್ಯಾಲರಿ ಶೇ. 46ರಷ್ಟು ಹೆಚ್ಚಾದಂತಾಗಿದೆ.

ಇದನ್ನೂ ಓದಿ: ಮುಂಬೈ ಏರ್​ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್

ವರದಿ ಪ್ರಕಾರ ಏರ್ ಇಂಡಿಯಾ ಸಿಇಒ ಅವರ ಹೊಸ ಸ್ಯಾಲರಿ ಪ್ಯಾಕೇಜ್​​ನಲ್ಲಿ ಕೈಗೆ ಸಿಗುವ ಫಿಕ್ಸೆಡ್ ಸ್ಯಾಲರಿ 11.1 ಕೋಟಿ ರೂ ಮಾತ್ರವೇ. ಇನ್ನುಳಿದದ್ದು ಪರ್ಫಾರ್ಮೆನ್ಸ್ ಆಧಾರಿತ ಭತ್ಯೆಗಳಾಗಿವೆ.

ಏರ್ ಇಂಡಿಯಾ ಸಿಇಒ ವಿಲ್ಸನ್ ಅವರ ಹೊಸ ಸ್ಯಾಲರಿ ಪ್ಯಾಕೇಜ್

ಒಟ್ಟು ಪ್ಯಾಕೇಜ್: 27.75 ಕೋಟಿ ರೂ

  • ನಿಶ್ಚಿತ ವೇತನ: 11.1 ಕೋಟಿ ರೂ
  • ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್: 8.32 ಕೋಟಿ ರೂ
  • ದೀರ್ಘಾವಧಿ ಷೇರು: 8.32 ಕೋಟಿ ರೂ

ಇದರೊಂದಿಗೆ ಸಿಇಒ ಅವರಿಗೆ ಆಫರ್ ಮಾಡಲಾದ ಪ್ಯಾಕೇಜ್​​ನಲ್ಲಿ ಶೇ. 60ಕ್ಕಿಂತ ಹೆಚ್ಚಿನ ಮೊತ್ತವು ಪರ್ಫಾರ್ಮೆನ್ಸ್ ಆಧಾರಿತವಾಗಿದ್ದಾಗಿದೆ. ಅಂದರೆ, ಏರ್ ಇಂಡಿಯಾ ಕಂಪನಿ ಎಷ್ಟು ಉನ್ನತಿ ಸಾಧಿಸುತ್ತದೆ, ಸಿಇಒ ಆಗಿ ವಿಲ್ಸನ್ ಹೇಗೆ ಕಾರ್ಯ ನಿಭಾಯಿಸುತ್ತಾರೆ ಎಂಬುದರ ಮೇಲೆ ಎಷ್ಟು ಸ್ಯಾಲರಿ ಸಿಗುತ್ತದೆ ಎಂಬುದು ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Hormuz Strait: ಇರಾನ್​​ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?

ಈಗ ಅಹ್ಮದಾಬಾದ್​​ನಲ್ಲಿ ಭೀಕರ ಅಪಘಾತವಾಗಿರುವುದು, ವಿವಿಧೆಡೆ ತಾಂತ್ರಿಕ ದೋಷಗಳನ್ನು ಏರ್ ಇಂಡಿಯಾ ವಿಮಾನಗಳು ಎದುರಿಸುತ್ತಿರುವುದು ಸಿಇಒ ಕ್ಯಾಂಪೆಲ್ ವಿಲ್ಸನ್ ಅವರ ಸಂಬಳಕ್ಕೆ ಕುತ್ತು ತರಬಹುದು.

ಬೇರೆ ಭಾರತೀಯ ಎರ್ಲೈನ್ಸ್ ಕಂಪನಿಗಳ ಸಿಇಒ ಸ್ಯಾಲರಿ ಎಷ್ಟಿದೆ?

  • ಇಂಡಿಗೋ ಏರ್​ಲೈನ್ಸ್ ಸಿಇಒ ಪೀಟರ್ ಎಲ್ಬರ್ಸ್: 21.61 ಕೋಟಿ ರೂ ಸಂಬಳ
  • ಆಕಾಶ ಏರ್ ಸಿಇಒ ವಿನಯ್ ದುಬರ್: 8.65 ಕೋಟಿ ರೂ ಸಂಬಳ
  • ಸ್ಪೈಸ್​ಜೆಟ್ ಛೇರ್ಮನ್ ಅಜಯ್ ಸಿಂಗ್: 5.4 ಕೋಟಿ ರೂ ಸಂಬಳ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ