ಮುಂಬೈ ಏರ್ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್
Adani Airports Holdings Ltd raises 1 billion dollar: ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಅನ್ನು ನಿರ್ವಹಿಸುವ ಎಂಐಎಎಲ್ಗೆ ಒಂದು ಬಿಲಿಯನ್ ಡಾಲರ್ ಬಂಡವಾಳ ಪಡೆಯುವಲ್ಲಿ ಅದಾನಿ ಗ್ರೂಪ್ ಯಶಸ್ವಿಯಾಗಿದೆ. ಅದಾನಿ ಎಂಟರ್ಪ್ರೈಸಸ್ನ ಅಂಗಸಂಸ್ಥೆಯಾದ ಅದಾನಿ ಏರ್ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಅಡಿಯಲ್ಲಿ ಎಂಐಎಎಲ್ ಬರುತ್ತದೆ. ಇನ್ವೆಸ್ಟ್ಮೆಂಟ್ ಗ್ರೇಡ್ ಬಾಂಡ್ಗಳನ್ನು ವಿತರಿಸಿ ಜಾಗತಿಕ ಹೂಡಿಕೆದಾರರಿಂದ ಬಂಡವಾಳ ಪಡೆದಿದೆ.

ನವದೆಹಲಿ, ಜೂನ್ 24: ಅದಾನಿ ಏರ್ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆ (AAHL – Adani Airports Holdings Ltd) ಮುಂಬೈ ಏರ್ಪೋರ್ಟ್ ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗತಿಕ ಹೂಡಿಕೆದಾರರಿಂದ (global investors) 1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್ಗೆ ಸೇರಿದ ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನಿರ್ವಹಿಸುತ್ತದೆ. ಎಂಐಎಎಲ್ಗೆ ಬಂಡವಾಳ ಸಂಗ್ರಹಿಸಲು ಅದಾನಿ ಏರ್ಪೋರ್ಟ್ಸ್ ಲಿಮಿಟೆಡ್ ಕಂಪನಿಯು ಬಾಂಡ್ ಬಿಡುಗಡೆ ಮಾಡಿತ್ತು. ಅಪೋಲೋ ನಿರ್ವಹಿತ ಫಂಡ್ಗಳು (Apollo Managed Funds) ಸೇರಿದಂತೆ ಹಲವು ಜಾಗತಿಕ ಇನ್ಷೂರೆನ್ಸ್ ಕಂಪನಿಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು (Institutional investors) ಈ ಬಾಂಡ್ಗಳನ್ನು ಖರೀದಿಸಿವೆ.
ಅದಾನಿ ಕಂಪನಿ ವಿತರಿಸಿದ ಬಾಂಡ್ಗಳು ಏರ್ಪೋರ್ಟ್ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದ ಮೊದಲ ಇನ್ವೆಸ್ಟ್ಮೆಂಟ್ ಗ್ರೇಡ್ ಪ್ರೈವೇಟ್ ಬಾಂಡ್ (Investment Grade Private bond) ಎನಿಸಿರುವುದು ವಿಶೇಷ. ಅಪೋಲ್ಲೋ ನಿರ್ವಹಿತ ಫಂಡ್ಗಳಷ್ಟೆ ಅಲ್ಲದೆ, ಬ್ಲ್ಯಾಕ್ರಾಕ್ ನಿರ್ವಹಿತ ಫಂಡ್ಗಳು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಇತ್ಯಾದಿ ಸಾಂಸ್ಥಿಕ ಹೂಡಿಕೆದಾರರು ಬಾಂಡ್ ಖರೀದಿಸಿದ್ದಾರೆ.
ಬಾಂಡ್ ವಿತರಣೆ ಯೋಜನೆಯಲ್ಲಿ 750 ಮಿಲಿಯನ್ ಡಾಲರ್ ಮೌಲ್ಯದ ಬಾಂಡ್ಗಳನ್ನು ಒದಗಿಸಲಾಗಿದೆ. ಈ ನೋಟ್ ಅಥವಾ ಬಾಂಡ್ಗಳು 2029ರ ಜುಲೈನಲ್ಲಿ ಮೆಚ್ಯೂರ್ ಆಗುತ್ತವೆ. ಹೆಚ್ಚುವರಿ 250 ಮಿಲಿಯನ್ ಡಾಲರ್ ಬಾಂಡ್ಗಳನ್ನು ನೀಡಲು ಈ ಯೋಜನೆಯಲ್ಲಿ ಅವಕಾಶ ಕೊಡಲಾಗಿದೆ. ಇದರೊಂದಿಗೆ ಒಟ್ಟಾರೆ ಒಂದು ಬಿಲಿಯನ್ ಡಾಲರ್ ಮೊತ್ತದ ಬಂಡವಾಳವು ಅದಾನಿ ಏರ್ಪೋರ್ಟ್ಸ್ ಲಿಮಿಟೆಡ್ಗೆ ಸಿಗಲಿದೆ.
ಇದನ್ನೂ ಓದಿ: ತುರ್ತು ಖರೀದಿ ವ್ಯವಸ್ಥೆ ಅಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು 13 ಗುತ್ತಿಗೆಗಳಿಗೆ ಸೇನೆ ಹಸಿರು ನಿಶಾನೆ
‘ಬಾಂಡ್ ವಿತರಣೆ ಯಶಸ್ವಿಯಾಗಿ ಆಗಿರುವುದು ಅದಾನಿ ಏರ್ಪೋರ್ಟ್ಸ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ. ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಮೂಲಭೂತ ಅಂಶಗಳು ಹಾಗೂ ಸುಸ್ಥಿತ ಮೂಸೌಕರ್ಯ ಅಭಿವೃದ್ಧಿಗೆ ನಮಗಿರುವ ಬದ್ಧತೆಗೆ ಸಿಕ್ಕ ಮಾನ್ಯತೆ ಇದು. ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಭಾಗಿಯಾಗಿರುವುದು ನಮ್ಮ ಕಂಪನಿಯ ಬಂಡವಾಳ ಸಂಗ್ರಹಣೆ ವಿಸ್ತಾರ ಹೆಚ್ಚಿದೆ’ ಎಂದು ಅದಾನಿ ಏರ್ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ಸಿಇಒ ಅರುಣ್ ಬನ್ಸಾಲ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




