AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GAIL: ಗೇಲ್​ನಿಂದ ಪ್ರತಿ ಷೇರಿಗೆ ರೂ. 4ರ ಮಧ್ಯಂತರ ಲಾಭಾಂಶ ಘೋಷಣೆ

ಗೇಲ್ ಇಂಡಿಯಾ ಮಧ್ಯಂತರ ಲಾಭಾಂಶವಾಗಿ ರೂ. 4 ಅನ್ನು ಡಿಸೆಂಬರ್ 23ನೇ ತಾರೀಕಿನಂದು ಘೋಷಣೆ ಮಾಡಿದೆ. ರೆಕಾರ್ಡ್ ದಿನಾಂಕ ಮತ್ತಿತರ ವಿವರ ಇಲ್ಲಿದೆ.

GAIL: ಗೇಲ್​ನಿಂದ ಪ್ರತಿ ಷೇರಿಗೆ ರೂ. 4ರ ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Dec 23, 2021 | 3:05 PM

Share

ಹಣಕಾಸು ವರ್ಷ 2021-22ಕ್ಕಾಗಿ ಗೇಲ್ (ಇಂಡಿಯಾ) ಲಿಮಿಟೆಡ್ ಗುರುವಾರ ತನ್ನ ಸಭೆಯಲ್ಲಿ ಮಂಡಳಿಯು ಪ್ರತಿ ಷೇರಿಗೆ 4 ರೂಪಾಯಿಯ ಮಧ್ಯಂತರ ಲಾಭಾಂಶವನ್ನು (Interim dividend) ಪಾವತಿಸಲು ಅನುಮೋದಿಸಿದೆ ಎಂದು ಘೋಷಿಸಿದೆ. ಮಧ್ಯಂತರ ಲಾಭಾಂಶಕ್ಕೆ ‘ರೆಕಾರ್ಡ್ ದಿನಾಂಕ’ ಅಂದರೆ ಶುಕ್ರವಾರ, ಡಿಸೆಂಬರ್ 31, 2021 ನಿಗದಿಪಡಿಸಲಾಗಿದೆ ಎಂದು ಅದು ಸೇರಿಸಿದೆ. “ಕಂಪೆನಿಯ ನಿರ್ದೇಶಕರ ಮಂಡಳಿಯು ಇಂದು (23.12.2021ರಂದು) ನಡೆದ 435ನೇ ಸಭೆಯಲ್ಲಿ ಪೇಯ್ಡ್ ಅಪ್ ಕ್ಯಾಪಿಟಲ್ ಮೇಲೆ FY 2021-22ರಲ್ಲಿ ಶೇ 40ರಷ್ಟು (ಪ್ರತಿ ಈಕ್ವಿಟಿ ಷೇರಿಗೆ 4) ಡಿವಿಡೆಂಡ್ ಅನುಮೋದಿಸಿದೆ,” ಎಂದು ಕಂಪೆನಿಯು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ.

ಗೇಲ್ ಷೇರುಗಳು ಗುರುವಾರ ಮಧ್ಯಾಹ್ನದ ವಹಿವಾಟಿನಲ್ಲಿ ಬಿಎಸ್​ಇನಲ್ಲಿ ರೂ. 132ರಂತೆ ಶೇ 2ಕ್ಕಿಂತ ಹೆಚ್ಚಿನ ಏರಿಕೆ ದರದಲ್ಲಿ ವಹಿವಾಟು ನಡೆಸುತ್ತಿದ್ದವು. ಇತ್ತೀಚಿನ “ಬುಲ್ ಮಾರ್ಕೆಟ್”ನಲ್ಲಿ ಸ್ಟಾಕ್ ಸ್ವಲ್ಪಮಟ್ಟಿಗೆ ಮಂದ ಪ್ರದರ್ಶನ ತೋರಿದೆ. ಏಕೆಂದರೆ ಇದು ಬೆಂಚ್‌ಮಾರ್ಕ್ ಸೆನ್ಸೆಕ್ಸ್‌ನಲ್ಲಿನ ಸುಮಾರು ಶೇ 20ರ ಏರಿಕೆಗೆ ಹೋಲಿಸಿದರೆ ಕೇವಲ ಶೇ 7ರಷ್ಟು ಹೆಚ್ಚಳವಾಗಿದೆ. ಒಂದು ವರ್ಷದ ಅವಧಿಯಲ್ಲಿ ಗೇಲ್ ಷೇರುಗಳು ಶೇ 11ಕ್ಕಿಂತ ಹೆಚ್ಚಿವೆ.

ಗೇಲ್ (ಇಂಡಿಯಾ) ಲಿಮಿಟೆಡ್ ಭಾರತದ ಪ್ರಮುಖ ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪಿಎಸ್‌ಯು ಹಿಂದಿನ ವರ್ಷದ ಅವಧಿಯಲ್ಲಿ ರೂ. 1,239.6 ಕೋಟಿಗೆ ಹೋಲಿಸಿದರೆ ರೂ. 2,862.9 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 13,647 ಕೋಟಿ ರೂಪಾಯಿಯಿಂದ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಅದರ ಆದಾಯವು ರೂ.21,515 ಕೋಟಿಗೆ ಶೇ 57.6ಕ್ಕೆ ಹೆಚ್ಚಾಗಿದೆ.

ಇದನ್ನೂ ಓದಿ: Tech Mahindra: ಟೆಕ್​ ಮಹೀಂದ್ರಾ ಎರಡನೇ ತ್ರೈಮಾಸಿಕ ಲಾಭ ಶೇ 26ರಷ್ಟು ಹೆಚ್ಚಳ; 15 ರೂ. ವಿಶೇಷ ಡಿವಿಡೆಂಡ್ ಘೋಷಣೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ