Tech Mahindra: ಟೆಕ್​ ಮಹೀಂದ್ರಾ ಎರಡನೇ ತ್ರೈಮಾಸಿಕ ಲಾಭ ಶೇ 26ರಷ್ಟು ಹೆಚ್ಚಳ; 15 ರೂ. ವಿಶೇಷ ಡಿವಿಡೆಂಡ್ ಘೋಷಣೆ

ಟೆಕ್​ ಮಹೀಂದ್ರಾದಿಂದ 2021-22ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ಶೇ 26ರಷ್ಟು ಹೆಚ್ಚು ಲಾಭ ಗಳಿಸಿದೆ. 15 ರೂಪಾಯಿಯಂತೆ ಪ್ರತಿ ಷೇರಿಗೆ ವಿಶೇಷ ಲಾಭಾಂಶ ಘೋಷಣೆ ಮಾಡಲಾಗಿದೆ.

Tech Mahindra: ಟೆಕ್​ ಮಹೀಂದ್ರಾ ಎರಡನೇ ತ್ರೈಮಾಸಿಕ ಲಾಭ ಶೇ 26ರಷ್ಟು ಹೆಚ್ಚಳ; 15 ರೂ. ವಿಶೇಷ ಡಿವಿಡೆಂಡ್ ಘೋಷಣೆ
ಸಾಂದರ್ಭಿಕ ಚಿತ್ರ

ಮಾಹಿತಿ ತಂತ್ರಜ್ಞಾನ ಕಂಪೆನಿ ಟೆಕ್​ ಮಹೀಂದ್ರಾದ ಕ್ರೋಡೀಕೃತ ಲಾಭವು ಸೆಪ್ಟೆಂಬರ್ ತ್ರೈಮಾಸಿಕಕ್ಕೆ (Q2FY22) ಶೇ 26ರಷ್ಟು ಹೆಚ್ಚಾಗಿ 1,338 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1064 ಕೋಟಿ ರೂಪಾಯಿ ಲಾಭ ಬಂದಿತ್ತು. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ತೆರಿಗೆ ನಂತರದ ಲಾಭ (PAT) ಶೇ 1.1ರಷ್ಟು ಇಳಿಕೆ ಆಗಿದೆ. ಮೊದಲ ತ್ರೈಮಾಸಿಕದಲ್ಲಿ 1353 ಕೋಟಿ ಲಾಭ ಬಂದಿತ್ತು.

ಕಾರ್ಯ ನಿರ್ವಹಣೆಯಿಂದ ಕ್ರೋಡೀಕೃತ ಆದಾಯವು ಶೇ 16ರಷ್ಟು ಏರಿಕೆಯಾಗಿ 10,881 ಕೋಟಿ ಬಂದಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 9371 ಕೋಟಿ ರೂಪಾಯಿ ಆಗಿತ್ತು. ಡಾಲರ್ ಪರಿಭಾಷೆಯಲ್ಲಿ, ಆದಾಯವು ಈ ತ್ರೈಮಾಸಿಕದಲ್ಲಿ 1473 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಆಗಿದೆ. ಕಂಪೆನಿಯು ಪ್ರತಿ ಈಕ್ವಿಟಿ ಷೇರಿಗೆ 15 ರೂಪಾಯಿ ವಿಶೇಷ ಲಾಭಾಂಶ ಘೋಷಣೆ ಮಾಡಲಾಗಿದೆ.

ಈ ತ್ರೈಮಾಸಿಕದಲ್ಲಿ ಟೆಕ್​ ಮಹೀಂದ್ರಾಗೆ EBITDA 1995 ಕೋಟಿ ಬಂದಿದೆ. ಸೆಪ್ಟೆಂಬರ್ ಕೊನೆಗೆ ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 1,41,193 ಇದೆ. ಕೆಲಸ ಬಿಡುವವರ ಸಂಖ್ಯೆ ಈ ತ್ರೈಮಾಸಿಕದಲ್ಲಿ ಶೇ 21ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಜಾಸ್ತಿಯಾಗಿದ್ದು, ಜೂನ್ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇ17ರಷ್ಟು ಹೆಚ್ಚಾಗಿದೆ. ಫಲಿತಾಂಶಕ್ಕೂ ಮುನ್ನ ಟೆಕ್​ ಮಹೀಂದ್ರಾ ಷೇರಿನ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿ, ಎನ್​ಎಸ್​ಇಯಲ್ಲಿ 1531 ರೂಪಾಯಿಗೆ ಸೋಮವಾರದ ವಹಿವಾಟು ಮುಗಿದಿದೆ.

ಇದನ್ನೂ ಓದಿ: Mahindra XUV700: ಅಪಾರ ಫೀಚರ್, ಹೊಸತನಗಳ ಮಹೀಂದ್ರಾ XUV700 ಎಸ್​ಯುವಿ ಬೆಲೆ ಮತ್ತಿತರ ವಿವರಗಳು

Published On - 6:58 pm, Mon, 25 October 21

Click on your DTH Provider to Add TV9 Kannada