Mahindra XUV700: ಅಪಾರ ಫೀಚರ್, ಹೊಸತನಗಳ ಮಹೀಂದ್ರಾ XUV700 ಎಸ್​ಯುವಿ ಬೆಲೆ ಮತ್ತಿತರ ವಿವರಗಳು

Mahindra XUV700: ಅಪಾರ ಫೀಚರ್, ಹೊಸತನಗಳ ಮಹೀಂದ್ರಾ XUV700 ಎಸ್​ಯುವಿ ಬೆಲೆ ಮತ್ತಿತರ ವಿವರಗಳು
ಮಹೀಂದ್ರಾ ಎಕ್ಸ್​ಯುವಿ 700

ಮಹೀಂದ್ರಾ XUV 700 (Mahindra XUV 700) ಎಸ್​ಯುವಿ ಕಾರಿನ ಬೆಲೆ, ವೈಶಿಷ್ಟ್ಯ ಮತ್ತಿತರ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

TV9kannada Web Team

| Edited By: Srinivas Mata

Aug 16, 2021 | 4:28 PM

ಬಹು ನಿರೀಕ್ಷಿತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್​ಯುವಿ) ಮಹೀಂದ್ರಾ XUV700 ಹೇಗಿರಲಿದೆ, ಫೀಚರ್ಸ್, ಸುರಕ್ಷತೆ, ಡಿಸೈನ್​ನ ಪ್ರಮುಖಾಂಶಗಳು ಹೀಗೆ ಇತರ ಮಾಹಿತಿಗಳನ್ನು ತಿಳಿಸಲಾಗಿದೆ. ಇನ್ನು ಆರಂಭಿಕ ದರ, ಅಂದರೆ MX ವೇರಿಯಂಟ್​ನ ಪೆಟ್ರೋಲ್​ ಎಂಜಿನ್​ ಬೆಲೆ 11.99 ಲಕ್ಷ ರೂಪಾಯಿ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ಅದೇ MX ವೇರಿಯಂಟ್​ನ ಡೀಸೆಲ್ ಎಂಜಿನ್​ನ ಬೆಲೆ 12.49 ಲಕ್ಷ ರೂಪಾಯಿ ಆಗಲಿದೆ. ಇದರ ಜತೆಗೆ ಮಹೀಂದ್ರಾದಿಂದ AX3 ಹಾಗೂ AX5 ಪೆಟ್ರೋಲ್ ವಾಹನದ ದರವನ್ನು ಸಹ ಘೋಷಣೆ ಮಾಡಲಾಗಿದೆ. ಎಕ್ಸ್​ ಶೋರೂಮ್ ದರವು ಕ್ರಮವಾಗಿ 13.99 ಲಕ್ಷ ರೂಪಾಯಿ ಮತ್ತು 14.99 ಲಕ್ಷ ರೂಪಾಯಿ ಆಗಲಿದೆ. ನೆನಪಿನಲ್ಲಿಡಬೇಕಾದ ಅಂಶ ಏನೆಂದರೆ, ಈ ಎಲ್ಲವೂ 5 ಸೀಟರ್ ಹಾಗೂ ಮ್ಯಾನ್ಯುಯಲ್ ಟ್ರಾನ್ಸ್​ಮಿಷನ್ ಆಯ್ಕೆಯ ಬೆಲೆಯಾಗಿದೆ.

ಅಂದಹಾಗೆ ಮಹೀಂದ್ರಾ ಕಂಪೆನಿಯಿಂದ ಈ ನಾಲ್ಕು ವೇರಿಯಂಟ್​ಗಳ ಬೆಲೆಗಳನ್ನು ಮಾತ್ರ ಘೋಷಿಸಲಾಗಿದೆ, ಪೂರ್ತಿ ದರ ಪಟ್ಟಿಯನ್ನು ಅಲ್ಲ. 6- ಸೀಟರ್​ ವಾಹನದ್ದು ಹಾಗೂ ಆಟೋಮೆಟಿಕ್ ಟ್ರಾನ್ಸ್​ಮಿಷನ್ ಇರುವಂಥದ್ದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಲ್ಲ. ಒಂದು, ಈ ರೀತಿ ಕೆಲವು ವೇರಿಯಂಟ್​ಗಳ ಬೆಲೆಯನ್ನು ಮಾತ್ರ ಘೋಷಣೆ ಮಾಡುವುದರಿಂದ ಕುತೂಹಲವನ್ನು ಕಾಯ್ದುಕೊಳ್ಳಬಹುದು. ಇದೇ ವೇಳೆ ಇನ್ನೆಷ್ಟು ವೇರಿಯಂಟ್ ಇದೆಯೋ ಎಂಬ ಗೊಂದಲ ಸಹ ಗ್ರಾಹಕರಲ್ಲಿ ಉಳಿದುಹೋಗುತ್ತದೆ. ಇನ್ನು XUV700ನಲ್ಲಿ ಹಲವು ಮೊದಲುಗಳು ಸೇರ್ಪಡೆ ಆಗಲಿವೆ.

AndrenoX ತಂತ್ರಜ್ಞಾನದೊಂದಿಗೆ, ಮಹೀಂದ್ರಾ ಬ್ರ್ಯಾಂಡ್​ನ ಹೊಸ ಲೋಗೋ ಜತೆಗೆ ಬರುತ್ತದೆ. ಟ್ವಿನ್ ಪೀಕ್ಸ್, ಸೋನಿ ಎನ್​ಫೋಟೇನ್​ಮೆಂಟ್ ಸಿಸ್ಟಮ್ ಜತೆ ಇರುತ್ತದೆ. AndrenoX ಇಂಟೆಲಿಜೆಂಟ್ ಕಾಕ್​ಪಿಟ್ ತಂತ್ರಜ್ಞಾನದೊಂದಿಗೆ ಬರಲಿದ್ದು, 10.25 ಇಂಚಿನ ಡ್ಯುಯಲ್ ಸ್ಕ್ರೀನ್​ನೊಂದಿಗೆ ಇರುತ್ತದೆ. ಸ್ಮಾರ್ಟ್​ಕೋರ್ ಕಾಕ್​ಪಿಟ್ ಡೊಮೈನ್ ಕಂಟ್ರೋಲರ್ ಟೆಕ್ನಾಲಜಿ ಜತೆಗೆ ಮೂರನೇ ತಲೆಮಾರಿನ ಸ್ನ್ಯಾಪ್​ಡ್ರ್ಯಾಗನ್ ಆಟೋಮೆಟಿವ್ ಕಾಕ್​ಪಿಟ್ ಪ್ಲಾಟ್​ಫಾರ್ಮ್ಸ್​ ಅನ್ನು ವಿಸ್ಟಿಯಾನ್​ ಜತೆಗೂಡಿ ಅಭಿವೃದ್ಧಿಪಡಿಸಲಾಗಿದೆ. ಅಮೆಜಾನ್ ಮತ್ತು ಮಹೀಂದ್ರಾ ಸೇರಿ ಅಲೆಕ್ಸಾ ಬಿಲ್ಟ್​-ಇನ್ ಫಂಕ್ಷಾನಲಿಟಿ ತಂದಿವೆ. ಸೋನಿ ಕಂಪೆನಿಯ 3ಡಿ ಸೌಂಡ್​ ಟೆಕ್ನಾಲಜಿಯ ಅನುಭವವನ್ನು ಪಡೆಯಬಹುದು.

ವಾಯ್ಸ್ ಕಮಾಂಡ್​ನಲ್ಲೇ ಸನ್​ರೂಪ್, ಏಸಿ ಕಂಟ್ರೋಲ್ ಮುಂತಾದವನ್ನು ಮಾಡಬಹುದು. ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್​ನಲ್ಲಿ ಸನ್​ರೂಫ್​, ವಯರ್​ಲೆಸ್ ಚಾರ್ಜಿಂಗ್, ಟೂ-ಝೋನ್ ಕಂಟ್ರೋಲ್ ಮತ್ತಿತರ ಫೀಚರ್​ಗಳಿವೆ. ಆಸಕ್ತಿಕರ ಸಂಗತಿ ಏನೆಂದರೆ, ಈ ಎಸ್​ಯುವಿಯಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದಂತೆಯೇ 60 ಫೀಚರ್​ಗಳಿವೆ.

ಮಹೀಂದ್ರಾ XUV700ನಲ್ಲಿ ಪೆಟ್ರೋಲ್​- ಡೀಸೆಲ್ ಎರಡೂ ಎಂಜಿನ್​ ಆಯ್ಕೆಗಳಿವೆ. 2.2 ಪೆಟ್ರೋಕ್ ಗರಿಷ್ಠ 200bhp, 2.2 ಲೀಟರ್ mHawk ಎಂಜಿನ್ 185 bhp ಉತ್ಪಾದಿಸುತ್ತದೆ. ಎರಡರಲ್ಲೂ ಮ್ಯಾನ್ಯುಯಲ್ ಹಾಗೂ ಆಟೋಮೆಟಿಕ್ ಗೇರ್​ಬಾಕ್ಸ್ ಆಯ್ಕೆಗಳು ಬರುತ್ತವೆ. 7 ಏರ್​ಬ್ಯಾಗ್​ಗಳು, 360 ಕ್ಯಾಮೆರಾ ವ್ಯೂ ಸೇರಿದಂತೆ ಅತ್ಯಾಧುನಿಕವಾದ ಫೀಚರ್​ಗಳನ್ನು ಈ ಕಾರು ಹೊಂದಿದೆ.

ಇದನ್ನೂ ಓದಿ: Mahindra New Logo: ಲೋಗೋ ಬದಲಿಸಿದ ಮಹೀಂದ್ರಾ: ಇಲ್ಲಿದೆ ಹೊಸ ಲೋಗೋ

(Mahindra XUV 700 Price Features And Other Details Are Here )

Follow us on

Related Stories

Most Read Stories

Click on your DTH Provider to Add TV9 Kannada