Mahindra New Logo: ಲೋಗೋ ಬದಲಿಸಿದ ಮಹೀಂದ್ರಾ: ಇಲ್ಲಿದೆ ಹೊಸ ಲೋಗೋ
Mahindra XUV 700 SUV: ಹೊಸ XUV700 ಅನ್ನು ಬಿಡುಗಡೆಗೆ ಮಹೀಂದ್ರಾ ಕಂಪೆನಿ ಕೌಂಟ್ಡೌನ್ ಅನ್ನು ಪ್ರಾರಂಭಿಸಿದ್ದು, ಅದರಂತೆ ಹೊಸ ಲೋಗೋ ಜೊತೆಗಿನ ವಾಹನವು ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
Updated on: Aug 09, 2021 | 10:49 PM

ಭಾರತದ ಜನಪ್ರಿಯ ವಾಹನ ತಯಾರಿಕಾ ಕಂಪೆನಿ ಮಹೀಂದ್ರಾ & ಮಹೀಂದ್ರಾ ತನ್ನ ಲೋಗೋವನ್ನು ಬದಲಿಸಿದೆ. ಅಷ್ಟೇ ಅಲ್ಲದೆ ಮಹೀಂದ್ರಾ ಕಂಪೆನಿ ನೂತನ ಲೋಗೋ ಬಿಡುಗಡೆ ಮಾಡಿದ್ದು, ಅದರಂತೆ ಮುಂಬರುವ ವಾಹನಗಳಲ್ಲಿ ಹೊಸ ಲೋಗೋ ಕಾಣಿಸಲಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV 700 SUV ನಲ್ಲಿ ಹೊಸ ಲೋಗೋ ನೀಡಿದ್ದು, ಈ ಲೋಗೋವನ್ನು 'ಅವಳಿ ಶಿಖರಗಳಂತೆ' ವಿನ್ಯಾಸಗೊಳಿಸಲಾಗಿದೆ.

ಹೊಸ ಲೋಗೋವನ್ನು ಮಹೀಂದ್ರಾ ಕಂಪೆನಿಯ ಎಸ್ಯುವಿ ವಾಹನಗಳಲ್ಲಿ ಮಾತ್ರ ಬಳಸಲಾಗುತ್ತಿದ್ದು, ಆ ಬಳಿಕ ಇನ್ನಿತರ ಹೊಸ ವಾಹನಗಳೂ ಇದೇ ಲೋಗೋ ಮೂಲಕ ಬಿಡುಗಡೆಯಾಗಲಿದೆ ಎಂದು ಮಹೀಂದ್ರಾ ಕಂಪೆನಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ & ಎಂ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಸಿಇಒ ವಿಜಯ್ ನಕ್ರಾ, "ಇದು ಹೊಸ ಲೋಗೋ ಮಾತ್ರವಲ್ಲದೆ ಮಹೀಂದ್ರಾದ ನವಚೈತನ್ಯವನ್ನು ಪ್ರತಿನಿಧಿಸುತ್ತದೆ. ನೂತನ ಲೋಗೋ ಜೊತೆ ಹೊಸ XUV700 ಅನ್ನು ಜಗತ್ತಿಗೆ ಪರಿಚಯಿಸಲಿದ್ದೇವೆ. ಆ ಬಳಿಕ ಇನ್ನಿತರ ವಾಹನಗಳಲ್ಲೂ ಹೊಸ ಲೋಗೋ ಕಾಣಿಸಲಿದೆ ಎಂದಿದ್ದಾರೆ.

ಹೊಸ XUV700 ಅನ್ನು ಬಿಡುಗಡೆಗೆ ಮಹೀಂದ್ರಾ ಕಂಪೆನಿ ಕೌಂಟ್ಡೌನ್ ಅನ್ನು ಪ್ರಾರಂಭಿಸಿದ್ದು, ಅದರಂತೆ ಹೊಸ ಲೋಗೋ ಜೊತೆಗಿನ ವಾಹನವು ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. XUV 700 ಹೊಸ W601 ಮೊನೊಕೊಕ್ ಪ್ಲಾಟ್‌ಫಾರ್ಮ್ ಹೊಂದಿದ್ದು, ಇದು ಹ್ಯುಂಡೈ ಅಲ್ಕಾಜಾರ್, MG ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿಗೆ ಪೈಪೋಟಿ ನೀಡಲಿದೆ.

ಹಾಗೆಯೇ XUV 700 ಈ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ SUV ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದು 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಮಾಡೆಲ್ಗಳಲ್ಲಿ ಬಿಡುಗಡೆ ಆಗಲಿದ್ದು, ಎರಡೂ ಎಂಜಿನ್ ಗಳು ಕ್ಲಾಸ್ ಲೀಡಿಂಗ್ ಪವರ್ ಔಟ್ ಪುಟ್ ಗಳನ್ನು ಉತ್ಪಾದಿಸುತ್ತವೆ. ಪೆಟ್ರೋಲ್ ಎಂಜಿನ್ ಗರಿಷ್ಠ 200 ಪಿಎಸ್ ಪವರ್ ನೀಡಿದರೆ ಡೀಸೆಲ್ ಎಂಜಿನ್ ಗರಿಷ್ಠ 185 ಪಿಎಸ್ ಪವರ್ ನೀಡಲಿದೆ. ಇನ್ನು ಎರಡೂ ಎಂಜಿನ್ಗಳು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರಲಿದೆ. ಹಾಗೆಯೇ XUV 700 ಆಲ್-ವೀಲ್-ಡ್ರೈವ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುವ ಏಕೈಕ SUV ಇದಾಗಿರಲಿದೆ ಎಂದು ಮಹೀಂದ್ರಾ ಕಂಪೆನಿ ಹೇಳಿಕೊಂಡಿದೆ.



















