Ola Cars: ಓಲಾ ಕಾರ್ಸ್, ಇಲ್ಲಿ ಕಡಿಮೆ ಬೆಲೆಗೆ ಕಾರುಗಳು ಸಿಗಲಿದೆ
ಭಾರತದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ದೇಖೋ, ಕಾರ್ಸ್ 24, ಡ್ರೂಮ್, ಸ್ಪಿನ್ನಿ ಮತ್ತು ಕಾರ್ಡ್ರೇಡ್ ನಂತಹ ಹಲವಾರು ಸ್ಟಾರ್ಟಪ್ ಕಂಪೆನಿಗಳಿವೆ.
ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Ola Electric Scooter) ಮೂಲಕ ಸಂಚಲನ ಸೃಷ್ಟಿಸಿರುವ ಓಲಾ ಕಂಪೆನಿ ಶೀಘ್ರದಲ್ಲೇ ಹೊಸ ವ್ಯವಹಾರ ಆರಂಭಿಸಲಿದೆ ಎಂದು ವರದಿಯಾಗಿದೆ. ಈ ವರದಿಯಂತೆ ಓಲಾ ಕಂಪೆನಿಯು ಓಲಾ ಕಾರ್ಸ್ (Ola Cars) ಹೆಸರಿನಲ್ಲಿ ಹಳೆಯ ಕಾರುಗಳ ಮಾರಾಟಕ್ಕೆ ಮುಂದಾಗಲಿದೆ. ಅಂದರೆ ಯೂಸ್ಡ್ ಕಾರುಗಳ ಮಾರಾಟ ಕ್ಷೇತ್ರಕ್ಕೂ ಕಾಲಿಡಲು ಓಲಾ ಕಂಪೆನಿ ಯೋಜನೆ ರೂಪಿಸುತ್ತಿದ್ದು, ಅದರಂತೆ ಓಲಾ ಕಾರ್ಸ್ ಹೆಸರಿನ ವೆಬ್ಸೈಟ್ ಮೂಲಕ ಕಡಿಮೆ ಬೆಲೆಗೆ ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಲಿದೆ.
ಈ ಆ್ಯಪ್ನಲ್ಲಿ ಓಲಾ ತನ್ನ ಒಡೆತನದಲ್ಲಿರುವ ಕಾರುಗಳ ಜೊತೆಗೆ ಇತರೆ ಮಾಲೀಕರ ಕಾರುಗಳ ಮಾರಾಟಕ್ಕೂ ವೇದಿಕೆ ರೂಪಿಸಲಿದೆ. ಅದರಂತೆ ಕಾರು ಮಾಲೀಕರು ಓಲಾ ಕಾರ್ಸ್ ವೈಬ್ಸೈಟ್ ಮೂಲಕ ತಮ್ಮ ವಾಹನಗಳನ್ನು ಮಾರಾಟ ಮಾಡಬಹುದು. ಇನ್ನು ಇತರೆ ಮಾಲೀಕರ ಕಾರುಗಳ ಮೌಲ್ಯಮಾಪನಕ್ಕಾಗಿ ಪ್ರತಿ ನಗರಗಳಲ್ಲಿ ವಿಶೇಷ ತಂಡವನ್ನು ರೂಪಿಸಲಿದೆ. ಈ ತಂಡವು ವಾಹನದ ಗುಣಮಟ್ಟವನ್ನು ಪರೀಕ್ಷಿಸಿದ ಕಾರುಗಳ ಖರೀದಿಗೆ ಓಲಾ ಗ್ಯಾರೆಂಟಿ ನೀಡಲಿದೆ.
ಭಾರತದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಕಾರ್ದೇಖೋ, ಕಾರ್ಸ್ 24, ಡ್ರೂಮ್, ಸ್ಪಿನ್ನಿ ಮತ್ತು ಕಾರ್ಡ್ರೇಡ್ ನಂತಹ ಹಲವಾರು ಸ್ಟಾರ್ಟಪ್ ಗಳು ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರವನ್ನು ಪ್ರವೇಶಿಸಿವೆ. ಇದೀಗ ಈ ಕ್ಷೇತ್ರಕ್ಕೂ ಓಲಾ ಕಾಲಿಡಲು ಮುಂದಾಗಿದ್ದು, ಹೀಗಾಗಿ ಬಳಸಿದ ಕಾರುಗಳ ಮಾರಾಟದಲ್ಲಿ ಪೈಪೋಟಿಗಿಳಿಯಲಿದೆ.
ಇನ್ನು ಓಲಾ ಕಾರ್ಸ್ಗಾಗಿ ಕಂಪೆನಿಯು ಹೊಸ ಆ್ಯಪ್ನ್ನು ಕೂಡ ಪರಿಚಯಿಸುವ ಸಾಧ್ಯತೆಯಿದ್ದು, ಆ ಮೂಲಕ ಬಳಕೆದಾರರಿಗೆ ಬೇಕಾದ ವಿವಿಧ ಕಾರುಗಳ ಸಂಪೂರ್ಣ ಮಾಹಿತಿ ನೀಡಲಿದೆ. ಈಗಾಗಲೇ ಓಲಾ ಸ್ಕೂಟರ್ನ ಎರಡು ಮಾಡೆಲ್ಗಳು ಬಿಡುಗಡೆ ಆಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಓಲಾ ಸೆಕೆಂಡ್ ಹ್ಯಾಂಡ್ ಕಾರ್ಸ್ ಆರಂಭವಾದರೂ, ವಾಹನ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(After electric scooter, Ola wants to sell used cars online)