SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಕ್ಟೋಬರ್ 25ರಿಂದ ಆಸ್ತಿಗಳ ಮೆಗಾ ಇ- ಹರಾಜು ಆರಂಭವಾಗಿದೆ. ಆ ಬಗ್ಗೆ ವಿವರಗಳು ಇಲ್ಲಿ ಇದ್ದು, ಹಂತಹಂತವಾಗಿ ಮಾಹಿತಿ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಆಸ್ತಿ ಖರೀದಿದಾರರಿಗೆ ಅದ್ಭುತವಾದ ಅವಕಾಶವೊಂದು ಸಿಗುತ್ತಿದೆ. ಇಂದಿನಿಂದ ಅನ್ವಯ ಆಗುವಂತೆ (ಅಕ್ಟೋಬರ್ 25, 2021) ಆಸ್ತಿಗಳ ಇ-ಹರಾಜು ಆರಂಭಿಸಿದೆ. ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬಗೆಯ ಆಸ್ತಿಗಳ ಹರಾಜು ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲ ಬಗೆಯ ಆಸ್ತಿಗಳು, ಸೆಕ್ಯೂರಿಟೀಸ್ ಮತ್ತು ಅಡಮಾನ ಮಾಡಿದ ಆಸ್ತಿಗಳನ್ನು ಇ-ಹರಾಜು ಮಾಡಲಾಗುತ್ತದೆ. ವೆಬ್ಸೈಟ್- https://www.bankeauctions.com/Sbi ಇದರಲ್ಲಿ ಆಸ್ತಿ, ಮೀಸಲು ಬೆಲೆಗಳು ಮತ್ತು ಇತರ ಮಾಹಿತಿಗಳ ಬಗ್ಗೆ ಪರಿಶೀಲನೆ ಮಾಡಬಹುದು. ಈ ಎಸ್ಬಿಐ ಮೆಗಾ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸಬೇಕು ಅಂದರೆ ಎಸ್ಬಿಐ ವೆಬ್ಸೈಟ್ನಲ್ಲಿ ಪ್ರಸ್ತಾವ ಮಾಡಿರುವ ದಾಖಲೆಗಳು ಇರಬೇಕು.
– ಇ-ಹರಾಜಿನ ನೋಟಿಸ್ನಲ್ಲಿ ತಿಳಿಸಿರುವಂತೆ ಆ ನಿರ್ದಿಷ್ಟ ಆಸ್ತಿಯ ಇಎಂಡಿ ಇರಬೇಕು.
– ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲಾತಿಗಳು ಸಲ್ಲಿಸಬೇಕು.
– ಸಿಂಧುವಾದ ಡಿಜಿಟಲ್ ಸಿಗ್ನೇಚರ್- ಬಿಡ್ಡರ್ಗಳು ಇ-ಹರಾಜುದಾರರನ್ನು ಅಥವಾ ಯಾವುದಾದರೂ ಅಂಗೀಕೃತ ಸಂಸ್ಥೆಯಿಂದ ಡಿಜಿಟಲ್ ಸಿಗ್ನೇಚರ್ ಪಡೆಯಬೇಕು.
-ಲಾಗ್ ಇನ್ ಐಡಿ ಮತ್ತು ಪಾಸ್ವರ್ಡ್- ಇದನ್ನು ಇಎಂಡಿ ಠೇವಣಿ ಸಲ್ಲಿಸಿ ಹಾಗೂ ಸಂಬಂಧಪಟ್ಟ ಶಾಖೆಯಲ್ಲಿ ಕೆವೈಸಿ ದಾಖಲಿಸಿದ ನಂತರ ಇ-ಹರಾಜುದಾರರು ಬಿಡ್ಡರ್ನ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.
– ಬಿಡ್ಡರ್ಗಳು ಲಾಗ್ ಇನ್ ಮಾಡಿ ಮತ್ತು ನಿಯಮಾವಳಿಯ ಪ್ರಕಾರ ಹರಾಜಿನ ಅವಧಿಯಲ್ಲಿ ಬಿಡ್ ಮಾಡಬೇಕು.
ಎಸ್ಬಿಐ ಆಸ್ತಿ ಇ- ಹರಾಜಿನಲ್ಲಿ ಭಾಗವಹಿಸುವುದು ಹೇಗೆ? ಇ- ಹರಾಜಿಗೆ ಆನ್ಲೈನ್ನಲ್ಲಿ ಬಿಡ್ ಮಾಡಬೇಕಾಗುತ್ತದೆ. ಒಂದು ವೇಳೆ ಈ ಡಿಜಿಟಲ್ ಹರಾಜಿನಲ್ಲಿ ಭಾಗವಹಿಸಲು ಬಯಸಿದರೆ ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಆಗಬೇಕು. ಆ ನಂತರ ಕೆವೈಸಿ ಕಾಗದಗಳನ್ನು ಅಪ್ಲೋಡ್ ಆದ ಮೇಲೆ ಒಂದು ಸಲ ದೃಢೀಕರಣ ಸಂಪೂರ್ಣವಾದ ನಂತರ ಆನ್ಲೈನ್ ಚಲನ್ ಭರ್ತಿ ಮಾಡಬೇಕಾಗುತ್ತದೆ. ಆ ನಂತರ ಆನ್ಲೈನ್ನಲ್ಲಿ ಬಿಡ್ ಮಾಡಬಹುದು. ಸಾಮಾನ್ಯವಾಗಿ, ಯಾರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲವೋ ಅಂಥವರ ಆಸ್ತಿ ಇದಾಗಿರುತ್ತದೆ. ಹಾಗೆ ಸಾಲ ಬಾಕಿ ಉಳಿಸಿಕೊಂಡವರ ಆಸ್ತಿಯನ್ನು ಬ್ಯಾಂಕ್ಗಳು ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಮೂಲಕ ಹರಾಜಿಗೆ ಇಡುತ್ತವೆ.
“ಇಂಡಿಯನ್ ಬ್ಯಾಂಕ್ಸ್ ಆಕ್ಷನ್ಸ್ ಮಾರ್ಟಗೇಜ್ಡ್ ಪ್ರಾಪರ್ಟೀಸ್ ಇನ್ಫರ್ಮೇಷನ್ (IBAPI) ಪೋರ್ಟಲ್ ಎಂಬುದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಉಪಕ್ರಮ. ಹಣಕಾಸು ಸೇವೆ ಇಲಾಖೆಯ (Department Of Financial Services) ಅಡಿಯಲ್ಲಿ ರೂಪಿಸಿರುವ ನೀತಿಗಳಲ್ಲಿ ಬರುತ್ತದೆ. ಹಣಕಾಸು ಸಚಿವಾಲಯ ಸಾಮಾನ್ಯ ಪ್ಲಾಟ್ಫಾರ್ಮ್ ಒದಗಿಸಿದ್ದು, ಅಡಮಾನ ಮಾಡಿ ಸಾಲ ಹಿಂತಿರುಗಿಸದ ಆಸ್ತಿಯನ್ನು ಹರಾಜು ಮಾಡುವ ಮುನ್ನ ಅಲ್ಲಿ ಮಾಹಿತಿ ಪ್ರದರ್ಶಿಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಂದ ಇದು ಶುರುವಾಗುತ್ತದೆ. ಖರೀದಿ ಮಾಡಬೇಕು ಎಂದಿರುವವರು ಈ ಪೋರ್ಟಲ್ ಬಳಸಿ ಆಸ್ತಿಯ ಮಾಹಿತಿಯನ್ನು ಹುಡುಕಬಹುದು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು,” ಎಂದು Ibapi ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: SBI Internet Banking: ಕನ್ನಡ, ತಮಿಳು, ತೆಲುಗು ಸೇರಿ 15 ಭಾಷೆಗಳಲ್ಲಿ ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ