SBI Internet Banking: ಕನ್ನಡ, ತಮಿಳು, ತೆಲುಗು ಸೇರಿ 15 ಭಾಷೆಗಳಲ್ಲಿ ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ
SBI Online Banking: ಕನ್ನಡ, ಹಿಂದಿ, ಇಂಗ್ಲಿಷ್, ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಎಸ್ಬಿಐ ಬ್ಯಾಂಕಿಂಗ್ ಸೇವೆ ಲಭ್ಯವಿದೆ.
ನವದೆಹಲಿ: ತನ್ನ ಗ್ರಾಹಕರ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 15 ವಿವಿಧ ಭಾಷೆಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ತಮಗೆ ಅನುಕೂಲಕರವಾದ ಭಾಷೆಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಟ್ವೀಟ್ನಲ್ಲಿ ಈ ಮಾಹಿತಿಯನ್ನು ನೀಡಿದೆ. ಎಸ್ಬಿಐ ಗ್ರಾಹಕರು www.onlinesbi.com ನಲ್ಲಿ 15 ಭಾಷೆಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಬಹುದು. ಕನ್ನಡ, ಹಿಂದಿ, ಇಂಗ್ಲಿಷ್, ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಎಸ್ಬಿಐ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಗ್ರಾಹಕರು ತಮಗೆ ಅನುಕೂಲವಾಗುವ ಭಾಷೆಯ ಮೇಲೆ ಕ್ಲಿಕ್ ಮಾಡಿದ ನಂತರ, ಗ್ರಾಹಕರು ಅದಕ್ಕೆ ಅನುಗುಣವಾಗಿ ಸಂಪೂರ್ಣ ವಿವರಗಳನ್ನು ಪಡೆಯಲು ಮತ್ತು ಆ ಭಾಷೆಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.
SBI offers Internet Banking services in 15 languages. Log on to https://t.co/iZkW9hpl83 and avail various banking facilities in your preferred language.#SBI #InternetBanking #RegionalLanguages #Diversity #India pic.twitter.com/bwyEIlnz6a
— State Bank of India (@TheOfficialSBI) October 17, 2021
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ. ಮೆಸೇಜ್ನಲ್ಲಿ ಬರುವ ಯಾವುದೋ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಹಲವು ಬಾರಿ ಯೋಚಿಸಿ ಎಂದು ಎಸ್ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಬ್ಯಾಂಕಿನಿಂದ ನೀವು ಉಡುಗೊರೆಯನ್ನು ಸ್ವೀಕರಿಸಿದ್ದೀರಿ ಎಂದು ಸಂದೇಶದಲ್ಲಿ ಬರೆಯಬಹುದು. ನಿಮಗೆ ಅಂತಹ ಸಂದೇಶ ಬಂದರೆ, ಅದನ್ನು ಓಪನ್ ಮಾಡಬೇಡಿ, ಹಾಗೇ ಅದರಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇದರಿಂದ ನಿಮ್ಮ ಅಕೌಂಟ್ನಲ್ಲಿರುವ ಹಣವನ್ನೆಲ್ಲ ಕಳೆದುಕೊಳ್ಳಬೇಕಾಗಬಹುದು ಎಂದು ಎಸ್ಬಿಐ ಹೇಳಿದೆ.
ಇದನ್ನೂ ಓದಿ: SBI Annuity Deposit: ಎಸ್ಬಿಐನ ಈ ಸ್ಕೀಮ್ನಲ್ಲಿ ಹಣ ಹೂಡಿದರೆ ತಿಂಗಳು ತಿಂಗಳು ಆದಾಯ ಬರುತ್ತೆ
SBI Card Dumdar Dus Offer: ಎಸ್ಬಿಐ ಕಾರ್ಡ್ನಿಂದ ಆನ್ಲೈನ್ ಶಾಪಿಂಗ್ಗೆ ಆಫರ್ ಘೋಷಣೆ; ಅಕ್ಟೋಬರ್ 3ರಿಂದ ಶುರು