ಎನ್​ಎಸ್​ಇಯಲ್ಲಿ 5 ಕೋಟಿ ದಾಟಿದ ಹೂಡಿಕೆದಾರರ ನೋಂದಣಿ ಸಂಖ್ಯೆ; ಹೊಸ ನೋಂದಣಿಯಲ್ಲಿ ಮಹಾರಾಷ್ಟ್ರ ಟಾಪ್

ಎನ್​ಎಸ್​ಇ ಹೂಡಿಕೆದಾರರ ಸಂಖ್ಯೆ 5 ಕೋಟಿ ದಾಟಿದೆ. ಯಾವ ರಾಜ್ಯದ ಪಾಲು ಎಷ್ಟಿದೆ ಎಂಬಿತ್ಯಾದಿ ವಿವರಗಳು ಈ ಲೇಖನದಲ್ಲಿ ಇದೆ.

ಎನ್​ಎಸ್​ಇಯಲ್ಲಿ 5 ಕೋಟಿ ದಾಟಿದ ಹೂಡಿಕೆದಾರರ ನೋಂದಣಿ ಸಂಖ್ಯೆ; ಹೊಸ ನೋಂದಣಿಯಲ್ಲಿ ಮಹಾರಾಷ್ಟ್ರ ಟಾಪ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 25, 2021 | 10:56 PM

ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ನೋಂದಾಯಿತ ಹೂಡಿಕೆದಾರರ ಸಂಖ್ಯೆ ಸೋಮವಾರ (ಅಕ್ಟೋಬರ್ 25, 2021) ಐದು ಕೋಟಿ ದಾಟಿದೆ. ಮೂರು ಕೋಟಿ ನೋಂದಾಯಿತ ಹೂಡಿಕೆದಾರರಿಂದ ನಾಲ್ಕು ಕೋಟಿ ನೋಂದಾಯಿತ ಹೂಡಿಕೆದಾರರಿಗೆ ಪ್ರಯಾಣವು ಸುಮಾರು 15 ತಿಂಗಳನ್ನು ತೆಗೆದುಕೊಂಡರೆ, ಮುಂದಿನ ಒಂದು ಕೋಟಿ ಹೂಡಿಕೆದಾರರ ನೋಂದಣಿ ಏಳು ತಿಂಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿತು ಎಂದು ಪ್ರಮುಖ ಷೇರುಪೇಟೆ ಹೇಳಿಕೆಯಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾದ ಯೂನಿಕ್ (ವಿಶಿಷ್ಟ) ಕ್ಲೈಂಟ್ ಕೋಡ್‌ಗಳ ಒಟ್ಟು ಸಂಖ್ಯೆ 8.86 ಕೋಟಿ (ಕ್ಲೈಂಟ್‌ಗಳು ಒಂದಕ್ಕಿಂತ ಹೆಚ್ಚು ಟ್ರೇಡಿಂಗ್ ಸದಸ್ಯರೊಂದಿಗೆ ನೋಂದಾಯಿಸಿಕೊಳ್ಳಬಹುದು). “ಇಂದು ಸಾಧಿಸಿದ ಮೈಲುಗಲ್ಲು ಸರ್ಕಾರಗಳು, ನಿಯಂತ್ರಕರು ಮತ್ತು ಎಲ್ಲ ಪಾಲುದಾರ ಉತ್ಪನ್ನಗಳ ಗುಚ್ಛ, ಸರಳೀಕೃತ ಕ್ಲೈಂಟ್ ಆನ್‌ಬೋರ್ಡಿಂಗ್ ಪ್ರಕ್ರಿಯೆಗಳು, ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿಗಾಗಿ ಮಾಡಿದ ಪ್ರಯತ್ನಗಳ ಫಲವಾಗಿದೆ,” ಎಂದು ಎನ್​ಎಸ್​ಇ ಎಂಡಿ ಮತ್ತು ಸಿಇಒ ವಿಕ್ರಮ್ ಲಿಮಯೆ ಹೇಳಿದ್ದಾರೆ.

“ಎಲ್ಲ ಪಾಲುದಾರರ ಕೇಂದ್ರೀಕೃತ ಪ್ರಯತ್ನಗಳಿಂದ ಖಚಿತವಾಗಿದೆ; ನಾವು ಮುಂದೆ ಈ ಸಂಖ್ಯೆಯನ್ನು ಹೆಚ್ಚಿಸುವುದನ್ನು ನೋಡಬೇಕು ಮತ್ತು ಮುಂದಿನ 3-4 ವರ್ಷಗಳಲ್ಲಿ 10 ಕೋಟಿ ಯೂನಿಕ್ ಹೂಡಿಕೆದಾರರ ಮೈಲುಗಲ್ಲನ್ನು ಮುಟ್ಟಬೇಕು,” ಎಂದು ಅವರು ಹೇಳಿದ್ದಾರೆ. ಎರಡು ಡೆಪಾಸಿಟರಿಗಳೊಂದಿಗೆ ಹೊಂದಿರುವ ದೇಶದ ಒಟ್ಟು ಡಿಮ್ಯಾಟ್ ಖಾತೆಗಳು – CDSL ಮತ್ತು NSDL- ಸುಮಾರು 7.02 ಕೋಟಿಯಷ್ಟಿದೆ. ಇದರಲ್ಲಿ ಯೂನಿಕ್ PAN ಹೊಂದಿರುವ ಒಬ್ಬ ಹೂಡಿಕೆದಾರ ಹೊಂದಿರುವ ಬಹು ಡಿಮ್ಯಾಟ್ ಖಾತೆಗಳು ಸೇರಿವೆ. ಒಬ್ಬ ಹೂಡಿಕೆದಾರ ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆ ಅಥವಾ ವ್ಯಾಪಾರ ಖಾತೆಯನ್ನು ಹೊಂದಿರಬಹುದು. ಮತ್ತು ಬೇರೆ ಬೇರೆ ಡೆಪಾಸಿಟರಿಯಲ್ಲಿ ಭಾಗವಹಿಸುವವರು ಹಾಗೂ ಒಂದೇ ಪ್ಯಾನ್‌ಗೆ ಜೋಡಣೆ ಆಗಿರುವ ವ್ಯಾಪಾರ ಸದಸ್ಯರನ್ನು ಹೊಂದಬಹುದು.

NSEನಲ್ಲಿ ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಉತ್ತರ ಭಾರತದ ರಾಜ್ಯಗಳು ಶೇಕಡಾ 36ರಷ್ಟು ಕೊಡುಗೆ ನೀಡಿವೆ. ಪಶ್ಚಿಮದ ರಾಜ್ಯಗಳದು ಶೇಕಡಾ 31ರಷ್ಟಿದ್ದರೆ, ದಕ್ಷಿಣ ಮತ್ತು ಪೂರ್ವ ರಾಜ್ಯಗಳು ಕ್ರಮವಾಗಿ ಶೇ 20 ಮತ್ತು ಶೇ 13ರಷ್ಟು ಕೊಡುಗೆ ಇದೆ. ರಾಜ್ಯವಾರು ನೋಡಿದರೆ ಮಹಾರಾಷ್ಟ್ರವು ಶೇ 17ರಷ್ಟು ಕೊಡುಗೆ ನೀಡಿದೆ. ಉತ್ತರ ಪ್ರದೇಶವು ಶೇ 10ರಷ್ಟು ಮತ್ತು ಗುಜರಾತ್ ಶೇ 7ರಷ್ಟು ಹೊಸ ಹೂಡಿಕೆದಾರರ ನೋಂದಣಿ ನೀಡಿದೆ. ಟಾಪ್ 10 ರಾಜ್ಯಗಳು ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಶೇಕಡಾ 71ರಷ್ಟು ಹೊಂದಿವೆ.

ಹೂಡಿಕೆದಾರರ ನೋಂದಣಿಯಲ್ಲಿನ ಬೆಳವಣಿಗೆಯು ಹೆಚ್ಚಾಗಿ ಮೆಟ್ರೋಯೇತರ ನಗರಗಳಿಂದ ಬಂದಿದೆ. ಅಗ್ರ 50 ನಗರಗಳ ಆಚೆಗಿನ ನಗರಗಳು ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಶೇ 57 ರಷ್ಟು ಹೊಂದಿವೆ. ಆದರೆ ಅಗ್ರ 100 ನಗರಗಳನ್ನು ಮೀರಿದ ನಗರಗಳು ಶೇ 43ರಷ್ಟು ಕೊಡುಗೆ ನೀಡಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ಬೆಳೆಯುತ್ತಿರುವ ಆಸಕ್ತಿಯು ಮಹಾನಗರಗಳಿಗೆ ಮತ್ತು ಕೆಲವು ಟಯರ್-I ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಸೂಚಿಸುತ್ತದೆ.

ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್​ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್