Jeff Bezos: ಗಂಟೆಗಳಲ್ಲಿ ಕಾಣದಂತೆ ಮಾಯವಾಯಿತು ಜೆಫ್​ ಬೆಜೋಸ್​ರ 1,56,872 ಕೋಟಿ ಸಂಪತ್ತು

ಅಮೆಜಾನ್​.ಕಾಮ್ ಇಂಕ್ ಮಾರ್ಚ್ ತ್ರೈಮಾಸಿಕದ ಫಲಿತಾಂಶ ಪ್ರಕಟವಾದ ಗಂಟೆಗಳಲ್ಲಿ ಜೆಫ್​ ಬೆಜೋಸ್ 1,56,872 ಕೋಟಿ ರೂಪಾಯಿ ಸಂಪತ್ತು ಕರಗಿ ಹೋಗಿದೆ.

Jeff Bezos: ಗಂಟೆಗಳಲ್ಲಿ ಕಾಣದಂತೆ ಮಾಯವಾಯಿತು ಜೆಫ್​ ಬೆಜೋಸ್​ರ 1,56,872 ಕೋಟಿ ಸಂಪತ್ತು
ಜೆಫ್​ ಬೆಜೋಸ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Apr 30, 2022 | 10:50 AM

2050 ಕೋಟಿ ಅಮೆರಿಕನ್ ಡಾಲರ್, ಭಾರತದ ರೂಪಾಯಿ ಲೆಕ್ಕದಲ್ಲಿ 1,56,872.77 (1.56 ಲಕ್ಷ ಕೋಟಿ ರೂಪಾಯಿ) ಸಂಪತ್ತು ಕೆಲವೇ ಗಂಟೆಗಳಲ್ಲಿ ಕರಗಿಹೋಯಿತು. ಜಗತ್ತಿನ ಎರಡನೇ ಅತಿದೊಡ್ಡ ಶ್ರೀಮಂತ ಜೆಫ್​ ಬೆಜೋಸ್ (Jeff Bezos) ಶುಕ್ರವಾರ ಕಳೆದುಕೊಂಡ ಹಣದ ಲೆಕ್ಕಾಚಾರ ಇದು. ಅಮೆಜಾನ್​.ಕಾಮ್ ಇಂಕ್​ನ ಫಲಿತಾಂಶದಿಂದ ಹೂಡಿಕೆದಾರರು ನಿರಾಶೆಗೊಂಡಿದ್ದಾರೆ, ಇದರ ಜತೆಗೆ ಟೆಕ್ನಾಲಜಿ ಸ್ಟಾಕ್​ಗಳಿಗೆ ವರ್ಷಗಳಲ್ಲೇ ಬಹಳ ಕೆಟ್ಟ ತಿಂಗಳು ಇದು. ಶುಕ್ರವಾರದಂದು ಅಮೆಜಾನ್​ನ ತ್ರೈಮಾಸಿಕ ಫಲಿತಾಂಶ ಪ್ರಕಟವಾಯಿತು. ಅದರಲ್ಲಿ ನಷ್ಟ ವರದಿ ಮಾಡಲಾಗಿದ್ದು, 2001ನೇ ಇಸವಿಯ ನಂತರದಲ್ಲಿ ಮಾರಾಟದ ಬೆಳವಣಿಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಇತ್ತ ಜೆಫ್​ ಬೆಜೋಸ್​ ನಿವ್ವಳ ಆಸ್ತಿ ಮೌಲ್ಯ 14,840 ಕೋಟಿ ಅಮೆರಿಕನ್ ಡಾಲರ್​ಗೆ ಕುಸಿಯಿತು ಎಂದು ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ವರದಿ ಮಾಡಿದೆ. ನಿಮಗೆ ಗೊತ್ತಾ, ಇದೇ ವರ್ಷದಲ್ಲಿ ಬೆಜೋಸ್​ರ ಆಸ್ತಿ ಗರಿಷ್ಠ ಮಟ್ಟ 21,000 ಕೋಟಿ ಅಮೆರಿಕನ್ ಡಾಲರ್ ಮುಟ್ಟಿತ್ತು.

ಷೇರು ಮಾರುಕಟ್ಟೆಯಲ್ಲಿನ ಕುಸಿತದ ಕಾರಣಕ್ಕೆ ವಿಶ್ವದ 500 ಸಿರಿವಂತ ವ್ಯಕ್ತಿಗಳ ಸಂಪತ್ತು ಒಟ್ಟಾರೆಯಾಗಿ 5400 ಕೋಟಿ ಅಮೆರಿಕನ್​ ಡಾಲರ್​ಗೂ ಹೆಚ್ಚು ಕರಗಿದೆ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ. ಎಸ್​ಅಂಡ್​ಪಿ 500 ಸೂಚ್ಯಂಕವು ಶೇ 3.6ರಷ್ಟು ಕುಸಿದರೆ, ನಾಸ್ಡಾಕ್ 100 ಶೇ 4.5ರಷ್ಟು ನೆಲ ಕಚ್ಚಿತು. ಆ ಮೂಲಕ 2008ರಿಂದ ಈಚೆಗೆ ಅತಿ ಕೆಟ್ಟ ತಿಂಗಳನ್ನು 2022ರ ಏಪ್ರಿಲ್​ನಲ್ಲಿ ಕಂಡಂತಾಯಿತು.

58 ವರ್ಷ ವಯಸ್ಸಿನ ಬೆಜೋಸ್, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ. ಅವರಿಗಿಂತ ಮುಂದಿರುವವರು ಎಲಾನ್​ ಮಸ್ಕ್. ಇದೀಗ 2022ರಲ್ಲಿ ಅತಿ ಹೆಚ್ಚು ಸಂಪತ್ತು ನಷ್ಟ ಅನುಭವಿಸಿದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜನವರಿ 1, 2022ರಿಂದ ಈಚೆಗೆ 4400 ಕೋಟಿ ಅಮೆರಿಕನ್ ಡಾಲರ್ ನಿವ್ವಳ ಆಸ್ತಿ ಮೌಲ್ಯ ಇಳಿದಿದೆ. ಅಮೆಜಾನ್​ಗೆ ಹೆಚ್ಚಿನ ಕಾರ್ಮಿಕ ವೆಚ್ಚದ ಹೊರೆ ಬಿದ್ದಿದೆ. ಜತೆಗೆ ಕೊರೊನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳಲಾಯಿತು. ಹಣದುಬ್ಬರದ ಏರಿಕೆಯಿಂದಾಗಿ ಮಾರಾಟಕ್ಕೆ ಪೆಟ್ಟು ಬಿದ್ದಿದೆ.

ಮಾರ್ಚ್ 31, 2022ಕ್ಕೆ ಕೊನೆಯಾದ ತ್ರೈಮಾಸಿಕಕ್ಕೆ ಅಮೆಜಾನ್ 380 ಕೋಟಿ ಅಮೆರಿಕನ್ ಡಾಲರ್ ನಿವ್ವಳ ನಷ್ಟವನ್ನು ದಾಖಲಿಸಿದೆ. ಅದೇ ಕಳೆದ ವರ್ಷ ಇದೇ ಅವಧಿಗೆ 810 ಕೋಟಿ ಅಮೆರಿಕನ್ ಡಾಲರ್ ವರದಿ ಮಾಡಿತ್ತು.

ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ