Elon Musk: ವಿಶ್ವದ ಸಿರಿವಂತರ ಜಗಳ; ಜೆಫ್ ಬೆಜೋಸ್​ಗೆ ಬೆಳ್ಳಿ ಪದಕ ಕಳಿಸಿದೆ ಎಂದು ಕಾಲೆಳೆದ ಮಸ್ಕ್

ಎಲಾನ್ ಮಸ್ಕ್ ನಿವ್ವಳ ಆಸ್ತಿ 200 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದ ಮೇಲೆ ಜೆಫ್​ ಬೆಜೋಸ್​ರನ್ನು ಗೇಲಿ ಮಾಡಿದ್ದಾರೆ. ಯಾಕೆ ಮತ್ತು ಹೇಗೆ ಎಂಬ ವಿವರ ಇಲ್ಲಿದೆ.

Elon Musk: ವಿಶ್ವದ ಸಿರಿವಂತರ ಜಗಳ; ಜೆಫ್ ಬೆಜೋಸ್​ಗೆ ಬೆಳ್ಳಿ ಪದಕ ಕಳಿಸಿದೆ ಎಂದು ಕಾಲೆಳೆದ ಮಸ್ಕ್
ಜೆಫ್ ಬೆಜೋಸ್ ಮತ್ತು ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Sep 29, 2021 | 2:13 PM

ಇ-ಕಾಮರ್ಸ್​ ದೈತ್ಯ ಕಂಪೆನಿಯಾದ ಅಮೆಜಾನ್​ನ ಸಹಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಟೆಸ್ಲಾ ಸಿಇಒ ಆದ ಎಲಾನ್ ಮಸ್ಕ್ ಮತ್ತೊಮ್ಮೆ ಹಿಂದಿಕ್ಕಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ವಿಚಿತ್ರ ಎನಿಸುವಂತೆ, ಆ ನಂತರ ಜೆಫ್​ ಬೆಜೋಸ್​ರನ್ನು ಮಸ್ಕ್ ಗೇಲಿ ಮಾಡಿದ್ದಾರೆ. ಫೋರ್ಬ್ಸ್ ಪ್ರಕಾರ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಮೂಲಕ ಸೋಮವಾರ ವಿಶ್ವದ ಮೂರನೇ ವ್ಯಕ್ತಿಯಾದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಫೋರ್ಬ್ಸ್​ನ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಅವರು ಎಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ಜ್ಞಾಪಿಸಲು ತಾನು ಬೆಜೋಸ್​ಗೆ ಇದನ್ನು ಕಳುಹಿಸುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ. “ಬೆಳ್ಳಿಯ ಪದಕದೊಂದಿಗೆ ಜೆಫ್​ ಬಿ.ಗೆ ‘2’ ಅಂಕಿಯ ದೈತ್ಯ ಪ್ರತಿಮೆಯನ್ನು ನಾನು ಕಳುಹಿಸುತ್ತಿದ್ದೇನೆ,” ಎಂದು ಫೋರ್ಬ್ಸ್‌ಗೆ ಮಸ್ಕ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಬೆಜೋಸ್ ಕಳೆದ ಆಗಸ್ಟ್‌ನಲ್ಲಿ 200 ಬಿಲಿಯನ್ ಡಾಲರ್ ಆಸ್ತಿಯ ಮೈಲುಗಲ್ಲನ್ನು ತಲುಪಿದ ಮೊದಲ ವ್ಯಕ್ತಿ ಎನಿಸಿಕೊಂಡರು. ಆ ನಂತರ, ಫ್ರೆಂಚ್ ಐಷಾರಾಮಿ ಸಮೂಹ LVMH, ಅರ್ಥಾತ್ ಲೂಯಿಸ್ ವಿಟಾನ್​ ಮೊಯೆಟ್ ಹೆನ್ನೆಸ್ಸಿ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಇತ್ತೀಚೆಗೆ ಆ ಗುರಿ ಮುಟ್ಟಿದರು. ಮಸ್ಕ್ ಮತ್ತು ಅಮೆಜಾನ್‌ನ ಮಾಜಿ ಸಿಇಒ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಹಲವು ಬಾರಿ ಪಡೆದಿದ್ದಾರೆ.

ಬೆಜೋಸ್‌ ಮತ್ತು ಮಸ್ಕ್ ನಡುವೆ ನಡೆಯುತ್ತಿರುವ ಪೈಪೋಟಿ ಇತ್ತೀಚಿನದು. ಈ ವರ್ಷದ ಆರಂಭದಲ್ಲಿ, ಬೆಜೋಸ್‌ನ ರಾಕೆಟ್ ಕಂಪೆನಿ, ಬ್ಲೂ ಆರಿಜಿನ್​ ಚಂದ್ರನ ಮೇಲೆ ಮನುಷ್ಯರನ್ನು ಇಳಿಸಲು ಸ್ಪೇಸ್‌ ಎಕ್ಸ್‌ಗೆ 2.9 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದವನ್ನು ನೀಡುವ NASA ನಿರ್ಧಾರವನ್ನು ವಿರೋಧಿಸಿತು. ಆಗ ಟ್ವಿಟರ್​ನಲ್ಲಿ, ಮಸ್ಕ್, “ಅದನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ (ಕಕ್ಷೆಗೆ)” ಎಂದಿದ್ದರು.

ಕಳೆದ ತಿಂಗಳು, ಅಮೆಜಾನ್ ಅಂಗಸಂಸ್ಥೆ ಕೈಪರ್ ತನ್ನ ಸ್ಟಾರ್‌ಲಿಂಕ್ ಉಪಗ್ರಹ ಜಾಲವನ್ನು ವಿಸ್ತರಿಸುವ ಸ್ಪೇಸ್‌ಎಕ್ಸ್ ಯೋಜನೆಗಳ ಕುರಿತು ಎಫ್‌ಸಿಸಿಗೆ ಪ್ರತಿಭಟನಾ ಪತ್ರವನ್ನು ಸಲ್ಲಿಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಮಸ್ಕ್, “ಸ್ಪೇಸ್‌ಎಕ್ಸ್ ವಿರುದ್ಧ ಮೊಕದ್ದಮೆ ಹೂಡುವುದನ್ನೇ ಪೂರ್ಣ ಸಮಯದ ಉದ್ಯೋಗವಾಗಿ ಮುಂದುವರಿಸಲು ಬೆಜೋಸ್ ನಿವೃತ್ತರಾಗಿದ್ದಾರೆ,” ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Social media viral photo: ಜೆಫ್ ಬೆಜೋಸ್- ಎಲಾನ್ ಮಸ್ಕ್ 17 ವರ್ಷದ ಹಿಂದಿನ ಫೋಟೋ ಈಗ ವೈರಲ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ