Social media viral photo: ಜೆಫ್ ಬೆಜೋಸ್- ಎಲಾನ್ ಮಸ್ಕ್ 17 ವರ್ಷದ ಹಿಂದಿನ ಫೋಟೋ ಈಗ ವೈರಲ್
ಎಲಾನ್ ಮಸ್ಕ್- ಜೆಫ್ ಬೆಜೋಸ್ ಮಧ್ಯೆ 17 ವರ್ಷದ ಹಿಂದೆ ನಡೆದಿದ್ದ ಭೇಟಿಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರಿಬ್ಬರು ಈಗ ವಿಶ್ವದ ನಂಬರ್ 1 ಹಾಗೂ ಎರಡನೇ ಶ್ರೀಮಂತರ ಎಂಬುದು ಸುದ್ದಿಗೆ ಮತ್ತಷ್ಟು ತೂಕ ತಂದಿದೆ.
ಯಾವುದಕ್ಕೆ ಯಾವಾಗ ಬೆಲೆ ಬರುತ್ತದೆ ಎಂಬುದನ್ನು ಹೇಳುವುದಕ್ಕೆ ಅಸಾಧ್ಯ. ಈಗಿನ ಉದಾಹರಣೆ ಬಗ್ಗೆಯೇ ಹೇಳುವುದಾದರೆ, 17 ವರ್ಷದ ಹಿಂದೆ ತೆಗೆದ ಹಳೇ ಫೋಟೋವೊಂದು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋವನ್ನು ಇಷ್ಟಪಡುತ್ತಿರುವವರು, ಷೇರ್ ಮಾಡಿಕೊಳ್ಳುತ್ತಿರುವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.
ಸದ್ಯಕ್ಕೆ ವಿಶ್ವದ ನಂಬರ್ 1 ಶ್ರೀಮಂತ ಆಗಿರುವ ಜೆಫ್ ಬೆಜೋಸ್ ಹಾಗೂ ಎರಡನೇ ಸ್ಥಾನದಲ್ಲಿ ಇರುವ ಎಲಾನ್ ಮಸ್ಕ್ ಒಟ್ಟಿಗೆ ಇರುವ ಹಳೇ ಫೋಟೋವೊಂದು ಈಗ ವೈರಲ್ ಆಗಿದೆ. ಈ ಫೋಟೋವನ್ನು ಹಂಚಿಕೊಂಡಿರುವವರು ಟ್ರಂಗ್ ಫನ್. ಯಾವಾಗ ಈ ಟ್ವೀಟ್ಗೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದರೋ ಆಗಿನಿಂದ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ಫೋಟೋ ನೋಡಿದ ಅಚ್ಚರಿ ವ್ಯಕ್ತಪಡಿಸಿರುವ ಮಸ್ಕ್, ಇದನ್ನು 17 ವರ್ಷದ ಹಿಂದೆ ತೆಗೆದಿದ್ದು ಎಂದು ಹೇಳಿದ್ದಾರೆ. “ವಾವ್, ಇದು 17 ವರ್ಷದ ಹಿಂದಿನದು ನಂಬಲಿಕ್ಕೆ ಸಾಧ್ಯವೇ ಆಗ್ತಿಲ್ಲ!” ಎಂದಿದ್ದಾರೆ. ಈ ಫೋಟೋದ ಹಿಂದಿನ ಕಥೆಯನ್ನು ಸಹ ಟ್ರಂಗ್ ಫನ್ ತೆರೆದಿಟ್ಟಿದ್ದಾರೆ.
“ಬಾಹ್ಯಾಕಾಶದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ 2004ರಲ್ಲಿ ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಒಟ್ಟಿಗೆ ಊಟ ಮಾಡುತ್ತಾ ಭೇಟಿಯಾದರು. ಇವರಿಬ್ಬರು ನೇರಾನೇರ ಒಟ್ಟಿಗೆ ಕೂತು ನಡೆಸಿದ ಕೆಲವೇ ಸಂವಾದದಲ್ಲಿ ಇದೂ ಒಂದು. ಬಾಹ್ಯಾಕಾಶ ಅನ್ವೇಷಣೆ ಕುರಿತಾಗಿ ಇವರಿಬ್ಬರು ಕೈಗೊಂಡ ವಿವಿಧ ಮಾರ್ಗಗಳನ್ನು ಈ ಫೋಟೋ ಸೆರೆ ಹಿಡಿದಿದೆ,” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಟ್ವಿಟ್ಟರ್ನಲ್ಲಿ ಈ ಫೋಟೋ ಹಂಚಿಕೊಂಡ ನಂತರ ಎಲಾನ್ ಮಸ್ಕ್ ಪ್ರತಿಕ್ರಿಯೆಗೆ 5700ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಸಂಖ್ಯೆಯು ಏರುತ್ತಲೇ ಸಾಗಿದೆ.
1/ In 2004, Elon Musk and Jeff Bezos met for a meal to discuss space.
It was one of their few in-person interactions.
The conversation they had perfectly captures the different approaches they’ve taken to space exploration.
Here’s the story ? pic.twitter.com/g8hAsEj3d4
— Trung Phan ?? (@TrungTPhan) March 1, 2021
ಇದನ್ನೂ ಓದಿ: SpaceX: ಉಪಗ್ರಹದಿಂದ ನೇರವಾಗಿ ಮನೆಮನೆಗೂ ಅಂತರ್ಜಾಲ; ಭಾರತದಲ್ಲೂ ದೊರೆಯಲಿದೆಯಾ ಎಲಾನ್ ಮಸ್ಕ್ ಹೊಸ ಸೇವೆ?