Work From Anywhere: ಈ ಕಂಪೆನಿ ಉದ್ಯೋಗಿಗಳು 190 ದೇಶಗಳಲ್ಲಿ ಎಲ್ಲಾದರೂ ಇರಬಹುದು, ಎಲ್ಲಿಂದಾದರೂ ಕೆಲಸ ಮಾಡಬಹುದು

ಏರ್​ಬಿಎನ್​ಬಿ ತನ್ನ ಸಿಬ್ಬಂದಿಗೆ ಎಲ್ಲಿಂದಲಾದರೂ ಕಾರ್ಯ ನಿರ್ವಹಿಸುವ ವರ್ಕ್ ಫ್ರಮ್​ ಎನಿವೇರ್​ ಅನ್ನು ಪರಿಚಯಿಸಲಿದೆ. ಆ ಬಗ್ಗೆ ವಿವರ ಇಲ್ಲಿದೆ.

Work From Anywhere: ಈ ಕಂಪೆನಿ ಉದ್ಯೋಗಿಗಳು 190 ದೇಶಗಳಲ್ಲಿ ಎಲ್ಲಾದರೂ ಇರಬಹುದು, ಎಲ್ಲಿಂದಾದರೂ ಕೆಲಸ ಮಾಡಬಹುದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 29, 2022 | 11:11 PM

ಏರ್​ಬಿಎನ್​ಬಿ (Airbnb) ತನ್ನ ಉದ್ಯೋಗಿಗಳನ್ನು ಪ್ರಪಂಚದಾದ್ಯಂತ ಎಲ್ಲಿಯಾದರೂ ವಾಸಿಸಲು ಮತ್ತು ಕೆಲಸ ಮಾಡಲು (Work From Anywhere) ಅನುಮತಿಸಲಿದ್ದು, ಸಿಬ್ಬಂದಿಯನ್ನು ಆಕರ್ಷಿಸಲು ಮತ್ತು ಆರಾಮದಾಯಕ ಕೆಲಸ ನಿರ್ವಹಣೆ ಖಚಿತಪಡಿಸಿಕೊಳ್ಳಲು ರಿಮೋಟ್ ವರ್ಕಿಂಗ್ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತದೆ. ಹೊಸ ನೀತಿಯಡಿ ಉದ್ಯೋಗಿಗಳು ಕಚೇರಿ, ಮನೆ ಅಥವಾ 190 ದೇಶಗಳಿಗೆ ತಮ್ಮ ಪ್ರಯಾಣದ ಸಮಯದಲ್ಲಿ ಕೆಲಸ ಮಾಡಬಹುದು ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪೆನಿ ಗುರುವಾರ ಹೇಳಿದೆ. ಸಾಮಾನ್ಯ ತಂಡದ ಸಭೆಗಳು ಮತ್ತು ಕಾರ್ಯಕ್ರಮಗಳಿಗಾಗಿ ಸಿಬ್ಬಂದಿ ಇನ್ನೂ ವೈಯಕ್ತಿಕವಾಗಿ ಭೇಟಿ ಆಗಬೇಕಾಗುತ್ತದೆ ಎಂದು ಸಿಇಒ ಬ್ರಿಯಾನ್ ಚೆಸ್ಕಿ ಉದ್ಯೋಗಿಗಳಿಗೆ ಸಂದೇಶದಲ್ಲಿ ತಿಳಿಸಿದ್ದಾರೆ. ನೌಕರರು ಸ್ಥಳಾಂತರಗೊಳ್ಳಲು ನಿರ್ಧರಿಸಿದರೆ ಸಂಬಳವು ಬದಲಾಗುವುದಿಲ್ಲ.

ಬೇರೆ ದೇಶದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ತೆರಿಗೆ ಮತ್ತು ವೇತನ ಕಾರಣಗಳಿಗಾಗಿ ಶಾಶ್ವತ ವಿಳಾಸದ ಅಗತ್ಯವಿರುತ್ತದೆ. ಕಂಪೆನಿಯು ಓಪನ್ ಸೋರ್ಸ್ ಪರಿಹಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಚೆಸ್ಕಿ ಹೇಳಿದ್ದಾರೆ. ಹೊಸ ನೀತಿಯು “ನಮ್ಮ ಕಚೇರಿಗಳ ಸುತ್ತಲಿನ ಪ್ರಯಾಣದಲ್ಲೇ ಪ್ರತಿಭಾವಂತರ ಗುಂಪನ್ನು ಸೀಮಿತಗೊಳಿಸದೆ” ಉತ್ತಮ ಜನರನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಕಂಪೆನಿಯನ್ನು ಉತ್ತಮ ಸ್ಥಾನದಲ್ಲಿ ಇರಿಸುತ್ತದೆ ಎಂದು ಚೆಸ್ಕಿ ಹೇಳಿದ್ದಾರೆ. ರಿಮೋಟ್ ವರ್ಕಿಂಗ್ ಮತ್ತು ಆರಾಮದಾಯಕ ಕೆಲಸದ ಸಮಯ “ಇಂದಿನಿಂದ 10 ವರ್ಷಗಳ ನಂತರ ನಾವೆಲ್ಲರೂ ಕೆಲಸ ಮಾಡುವ ಪ್ರಮುಖ ಮಾರ್ಗವಾಗಿದೆ” ಎಂದು ಅವರು ಹೇಳಿದ್ದಾರೆ.

ಕೊವಿಡ್​-19ಗೆ ಸಂಭಾವ್ಯವಾಗಿ ಒಡ್ಡಿಕೊಳ್ಳುವ ಸಾಧ್ಯತೆಯನ್ನು ಮಿತಿಗೊಳಿಸಲು ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರು ದೂರದಿಂದಲೇ ಕೆಲಸ ಮಾಡಲು ಆರಂಭಿಸಿದರು. ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ಕಂಪೆನಿಗಳನ್ನು ಒಳಗೊಂಡಂತೆ ಕನಿಷ್ಠ ಹೈಬ್ರಿಡ್ ಆಧಾರದ ಮೇಲೆ ಕಂಪೆನಿಗಳು ಆ ಕೆಲಸಗಾರರನ್ನು ಕಚೇರಿಗೆ ಹಿಂತಿರುಗಲು ಕೇಳಲು ಪ್ರಾರಂಭಿಸುತ್ತಿವೆ.

ಇದನ್ನೂ ಓದಿ: Meesho: ಈ ಇ- ಕಾಮರ್ಸ್ ಕಂಪೆನಿ ಸಿಬ್ಬಂದಿ ಬೇಕಾದ ಸ್ಥಳದಿಂದ ಶಾಶ್ವತವಾಗಿ ಕೆಲಸ ಮಾಡಬಹುದು

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್