Currency Exchange Rate: ಭಾರತದ ರೂಪಾಯಿ ಮೌಲ್ಯ ಏಪ್ರಿಲ್ 29ಕ್ಕೆ ಯಾವ ದೇಶದ ವಿರುದ್ಧ ಎಷ್ಟಿದೆ ಗೊತ್ತಾ?
ವಿಶ್ವದ ಪ್ರಮುಖ ಕರೆನ್ಸಿಗಳ ವಿರುದ್ಧ ಭಾರತದ ರೂಪಾಯಿ ಮೌಲ್ಯ ಏಪ್ರಿಲ್ 29ನೇ ತಾರೀಕಿನ ಶುಕ್ರವಾರ ಎಷ್ಟಿದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.
ಬೇರೆ ದೇಶಗಳಿಂದ ಬಂದವರು ಭಾರತದಲ್ಲಿ ಇಷ್ಟೆಲ್ಲ ಖರ್ಚು ಮಾಡುತ್ತಾರಲ್ಲಾ ಹೇಗೆ? ಅಷ್ಟೇ ಅಲ್ಲ, ಭಾರತೀಯರು ಕೂಡ ಕೆಲವು ದೇಶಗಳಲ್ಲಿ ಕೆಲಸ ಮಾಡುವುದಕ್ಕೆ ಅಂತ ಹೋಗುತ್ತಾರೆ ಯಾಕೆ? ಅಲ್ಲಿಂದ ಬರುವ ಹೊತ್ತಿಗೆ ಮನೆ, ಬಾಗಿಲು, ಕಾರು ಹಾಗೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದು ಹೇಗೆ? ಈ ರೀತಿಯ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಕೊರೆಯುತ್ತಿದೆಯಾ? -ಅದಕ್ಕೆ ಕಾರಣ ಆ ದೇಶಗಳ ಕರೆನ್ಸಿ ಮೌಲ್ಯ. ಎಷ್ಟೋ ದೇಶಗಳ ಕರೆನ್ಸಿ (Currency) ಮೌಲ್ಯ ಭಾರತಕ್ಕಿಂತ ಬಹಳ ಮುಂದಿದೆ. ಆದರೆ ಕೆಲವು ದೇಶಗಳಲ್ಲಿ ಭಾರತದ ರೂಪಾಯಿ ಮೌಲ್ಯವೇ ಜಾಸ್ತಿ. ಉದಾಹರಣೆಗೆ ಶ್ರೀಲಂಕಾ, ಬಾಂಗ್ಲಾದೇಶ್, ನೇಪಾಳ ಹೀಗೆ. ಇದರ ಜತೆಗೆ ಖರೀದಿ, ವ್ಯಾಸಂಗ, ಆಮದು- ರಫ್ತು ಏನೇ ಇರಲಿ ಕರೆನ್ಸಿ ಮೌಲ್ಯ ಮುಖ್ಯ ಪಾತ್ರ ವಹಿಸುತ್ತದೆ. ನಿಮಗೆ ಗೊತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಕರೆನ್ಸಿಗೆ ಮಾನ್ಯತೆ ಹೆಚ್ಚು? ಅದು ಅಮೆರಿಕದ ಡಾಲರ್. ಆದರೆ ಮೌಲ್ಯ ಅನ್ನೋ ವಿಚಾರಕ್ಕೆ ಬಂದಾಗ ಇತರ ದೇಶ, ವಲಯದ ಕರೆನ್ಸಿಗಳಿಗೆ ಬೆಲೆ ಜಾಸ್ತಿ. ಈಗ ಭಾರತದ ರೂಪಾಯಿಯಲ್ಲೇ ನೋಡುತ್ತಾ ಕೆಲವು ದೇಶಗಳ ಕರೆನ್ಸಿಗೆ ಎಷ್ಟು ನೀಡಬೇಕಾಗುತ್ತದೆ ಎಂಬುದನ್ನು ಗಮನಿಸೋಣ. ಏಪ್ರಿಲ್ 29ನೇ ತಾರೀಕಿನ ಶುಕ್ರವಾರದ ವಿನಿಮಯ ದರ (Exchange Rate) ಇಲ್ಲಿ ತಿಳಿಸಲಾಗುತ್ತಿದೆ.
ಅಮೆರಿಕ ಯುಎಸ್ಡಿ 1ಕ್ಕೆ= 76.52000 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 96.08900 ಭಾರತದ ರೂಪಾಯಿ
ಯುರೋಗೆ= 80.69700 ಭಾರತದ ರೂಪಾಯಿ
ಚೀನಾದ ಯುವಾನ್= 11.58160 ಭಾರತದ ರೂಪಾಯಿ
ಜಪಾನ್ನ ಯೆನ್= 0.58974 (58 ಪೈಸೆ)
ಕುವೈತ್ ದಿನಾರ್= 249.89800 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.00177 ಪೈಸೆ
ಬಾಂಗ್ಲಾದೇಶ್ ಟಾಕಾ= 0.88136 (88 ಪೈಸೆ)
ಶ್ರೀಲಂಕಾ ರೂಪಾಯಿ= 0.21196 (21 ಪೈಸೆ)
ಪಾಕಿಸ್ತಾನದ ರೂಪಾಯಿ= 0.41234 (41 ಪೈಸೆ)
ನೇಪಾಳದ ರೂಪಾಯಿ= 0.62481 (62 ಪೈಸೆ)
ರಷ್ಯಾದ ರೂಬೆಲ್= 1.06085 (1.03 ಪೈಸೆ)
ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.
(ಮಾಹಿತಿ ಮೂಲ: goodreturns.in)
ಇದನ್ನೂ ಓದಿ: ಭಾರತೀಯ ಕರೆನ್ಸಿ ನೋಟುಗಳಲ್ಲಿ ಯಾವೆಲ್ಲಾ ಭಾಷೆಗಳಲ್ಲಿ ಮಾಹಿತಿ ನೀಡಿರುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ
Published On - 9:01 pm, Fri, 29 April 22