India Forex Reserves: ಭಾರತದ ವಿದೇಶಿ ವಿನಿಮಯ ಸಂಗ್ರಹ 3.271 ಬಿಲಿಯನ್ ಡಾಲರ್ ಇಳಿದು 600.423 ಶತಕೋಟಿ ಡಾಲರ್​ಗೆ ಕುಸಿತ

ಭಾರತದ ವಿದೇಶಿ ವಿನಿಮಯ ಮೀಸಲು 3.271 ಬಿಲಿಯನ್ ಯುಎಸ್​ಡಿ ಇಳಿಕೆ ಆಗಿ, 600.423 ಬಿಲಿಯನ್ ಯುಎಸ್​ಡಿ ಮುಟ್ಟಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

India Forex Reserves: ಭಾರತದ ವಿದೇಶಿ ವಿನಿಮಯ ಸಂಗ್ರಹ 3.271 ಬಿಲಿಯನ್ ಡಾಲರ್ ಇಳಿದು 600.423 ಶತಕೋಟಿ ಡಾಲರ್​ಗೆ ಕುಸಿತ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Apr 29, 2022 | 10:03 PM

ಏಪ್ರಿಲ್ 22ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಯುಎಸ್​ಡಿ 3.271 ಶತಕೋಟಿ ಇಳಿದು, ಯುಎಸ್​ಡಿ 600.423 ಶತಕೋಟಿಗೆ ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿ-ಅಂಶಗಳು ತೋರಿಸಿವೆ. ಹಿಂದಿನ ವಾರದಲ್ಲಿ ಮೀಸಲು ಯುಎಸ್​ಡಿ 311 ಮಿಲಿಯನ್‌ ಇಳಿದು, ಯುಎಸ್​ಡಿ 603.694 ಶತಕೋಟಿಗೆ ಕುಸಿದಿದೆ. ವರದಿಯ ವಾರದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ಬಿಡುಗಡೆ ಮಾಡಿದ ಸಾಪ್ತಾಹಿಕ ಅಂಕಿ-ಅಂಶಗಳು, ಒಟ್ಟಾರೆ ಮೀಸಲು ಮತ್ತು ಚಿನ್ನದ ಮೀಸಲು ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಮೀಸಲು ಕುಸಿತವಾಗಿದೆ ಎಂದು ತೋರಿಸಿವೆ.

ಏಪ್ರಿಲ್ 22ಕ್ಕೆ ಕೊನೆಗೊಂಡ ವಾರದಲ್ಲಿ ಎಫ್​ಸಿಎ ಯುಎಸ್​ಡಿ 2.835 ಶತಕೋಟಿ ಕುಸಿದು, ಯುಎಸ್​ಡಿ 533.933 ಶತಕೋಟಿಗೆ ಇಳಿದಿದೆ. ಡಾಲರ್ ಪರಿಭಾಷೆಯಲ್ಲಿ ಹೇಳುವುದಾದರೆ, ವಿದೇಶಿ ಕರೆನ್ಸಿ ಸ್ವತ್ತುಗಳು ವಿದೇಶಿ ವಿನಿಮಯ ಮೀಸಲುಗಳಲ್ಲಿ ಹೊಂದಿರುವ ಯುರೋ, ಪೌಂಡ್ ಮತ್ತು ಯೆನ್‌ನಂತಹ ಯುಎಸ್​ ಅಲ್ಲದ ಕರೆನ್ಸಿಗಳ ಏರಿಕೆ ಅಥವಾ ಸವಕಳಿಯ ಪರಿಣಾಮವನ್ನು ಒಳಗೊಂಡಿರುತ್ತದೆ. ಡೇಟಾ ಪ್ರಕಾರ, ವರದಿಯ ವಾರದಲ್ಲಿ ಚಿನ್ನದ ಸಂಗ್ರಹವು ಯುಎಸ್​ಡಿ 377 ಮಿಲಿಯನ್‌ನಿಂದ ಕುಸಿದು, ಯುಎಸ್​ಡಿ 42.768 ಶತಕೋಟಿಗೆ ಇಳಿದಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಜತೆಗೆ ವಿಶೇಷ ಡ್ರಾಯಿಂಗ್ ಹಕ್ಕುಗಳು (SDRs) ಯುಎಸ್​ಡಿ 33 ದಶಲಕ್ಷದಿಂದ ಯುಎಸ್​ಡಿ 18.662 ಶತಕೋಟಿಗೆ ಇಳಿದಿದೆ ಎಂದು ಆರ್​ಬಿಐ ಹೇಳಿದೆ. ಮಾಹಿತಿಯ ಪ್ರಕಾರ, ವರದಿಯ ವಾರದಲ್ಲಿ ಐಎಂಎಫ್​ನೊಂದಿಗೆ ದೇಶದ ಮೀಸಲು ಸ್ಥಾನವು ಯುಎಸ್​ಡಿ 26 ಮಿಲಿಯನ್‌ನಿಂದ ಕುಸಿದು, ಯುಎಸ್​ಡಿ 5.060 ಶತಕೋಟಿಗೆ ಇಳಿದಿದೆ.

ಇದನ್ನೂ ಓದಿ: Currency Exchange Rate: ಭಾರತದ ರೂಪಾಯಿ ಮೌಲ್ಯ ಏಪ್ರಿಲ್ 29ಕ್ಕೆ ಯಾವ ದೇಶದ ವಿರುದ್ಧ ಎಷ್ಟಿದೆ ಗೊತ್ತಾ?