AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Economy: ಕೊರೊನಾ ಸಮಯದ ನಷ್ಟ ಸರಿತೂಗಿಸಲು ಭಾರತಕ್ಕೆ 15 ವರ್ಷ ಬೇಕಾಗಬಹುದು ಎನ್ನುತ್ತಿದೆ ಆರ್​ಬಿಐ

ಕೊವಿಡ್​-19ನಿಂದ ಭಾರತದಲ್ಲಿ ಉಂಟಾದ ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಇನ್ನೂ 15 ವರ್ಷ ಬೇಕಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಹೇಳಿದೆ.

Indian Economy: ಕೊರೊನಾ ಸಮಯದ ನಷ್ಟ ಸರಿತೂಗಿಸಲು ಭಾರತಕ್ಕೆ 15 ವರ್ಷ ಬೇಕಾಗಬಹುದು ಎನ್ನುತ್ತಿದೆ ಆರ್​ಬಿಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 29, 2022 | 6:47 PM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ವರ್ಷ 2022ಕ್ಕಾಗಿ ಕರೆನ್ಸಿ ಮತ್ತು ಹಣಕಾಸು ವರದಿಯ ಪ್ರಕಾರ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಆರ್ಥಿಕತೆಗೆ ಉಂಟಾದ ನಷ್ಟವನ್ನು ಸರಿದೂಗಿಸಲು ಸುಮಾರು 15 ವರ್ಷ ತೆಗೆದುಕೊಳ್ಳುತ್ತದೆ. “2020-21ಕ್ಕೆ ಶೇ -6.6ರಷ್ಟು ವಾಸ್ತವಿಕ ಬೆಳವಣಿಗೆ ದರ, 2021-22ಕ್ಕೆ ಶೇ 8.9 ಮತ್ತು 2022-23ಕ್ಕೆ ಶೇ 7.2 ಬೆಳವಣಿಗೆ ದರ ಮತ್ತು ಶೇ 7.5ರ ಬೆಳವಣಿಗೆಯ ದರದ ಆಚೆಗೆ ತೆಗೆದುಕೊಂಡರೆ ಭಾರತವು 2034-35ರಲ್ಲಿ ಕೊವಿಡ್​​​​​​​​​​​​-19 ನಷ್ಟವನ್ನು ನಿವಾರಿಸುವ ನಿರೀಕ್ಷೆಯಿದೆ,” ಎಂದು ಏಪ್ರಿಲ್ 29ರಂದು ಬಿಡುಗಡೆಯಾದ ವರದಿ ಹೇಳಿದೆ. ವರದಿಯ ಈ ವರ್ಷದ ಥೀಮ್ “ಪುನಶ್ಚೇತನ ಮತ್ತು ಪುನರ್​ನಿರ್ಮಾಣ” ಎಂಬುದಾಗಿತ್ತು. ಸಾಂಕ್ರಾಮಿಕ ನಂತರದ ಬಾಳಿಕೆ ಬರುವ ಚೇತರಿಕೆಯನ್ನು ಪೋಷಿಸುವ ಮತ್ತು ಮಧ್ಯಮ ಅವಧಿಯಲ್ಲಿ ಟ್ರೆಂಡ್ ಬೆಳವಣಿಗೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.

ಆದರೆ, ಕೊಡುಗೆದಾರರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತದೆ. ಆರ್‌ಬಿಐನ ಆರ್ಥಿಕ ಮತ್ತು ನೀತಿ ಸಂಶೋಧನಾ ವಿಭಾಗದ ಭಾಗವಾಗಿದೆ. ಮುಂದಿನ ವರ್ಷದಿಂದ ಶೇ 7.5ರ ಬೆಳವಣಿಗೆ ದರದ ಊಹೆಯು ಆಶಾದಾಯಕವಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯು ಹಣಕಾಸು ವರ್ಷ 2024ಕ್ಕಾಗಿ ಭಾರತದ ಬೆಳವಣಿಗೆಯ ದರವನ್ನು ಶೇ 6.9ಕ್ಕೆ ನಿಗದಿಪಡಿಸಿದೆ. ಏಪ್ರಿಲ್ 8ರಂದು ಬಿಡುಗಡೆಯಾದ ಆರ್‌ಬಿಐನ ಸ್ವಂತ ಹಣಕಾಸು ನೀತಿ ವರದಿಯು ರಚನಾತ್ಮಕ ಮಾದರಿಗಳು ಹಣಕಾಸು 2024ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ 6.3 ಎಂದು ಸೂಚಿಸಿದೆ.

ಹಲವು ಸ್ವತಂತ್ರ ಅರ್ಥಶಾಸ್ತ್ರಜ್ಞರು ಹೇಳುವಂತೆ, ಮುಂದಿನ ವರ್ಷ ಜಿಡಿಪಿ ಬೆಳವಣಿಗೆಯನ್ನು ಕಾಣಬಹುದು ಮತ್ತು ಪ್ರಾಯಶಃ ಅದನ್ನು ಮೀರಿ, ಶೇ 6ಕ್ಕೆ ಹತ್ತಿರ ಆಗಬಹುದು. ಇದರರ್ಥ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ನಷ್ಟಗಳನ್ನು ಸರಿತೂಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಣಕಾಸಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ರಿಸರ್ವ್ ಬ್ಯಾಂಕಿನ ಸಿಬ್ಬಂದಿಯು ಮಾಡಿರುವ ಅಂದಾಜಿನಲ್ಲಿ ಹಣಕಾಸು ವರ್ಷ 2021ಕ್ಕೆ ರೂ. 19.1 ಲಕ್ಷ ಕೋಟಿ, ಹಣಕಾಸು ವರ್ಷ 2022ಕ್ಕೆ ರೂ. 17.1 ಲಕ್ಷ ಕೋಟಿ ಮತ್ತು ಹಣಕಾಸು ವರ್ಷ 2023ಕ್ಕೆ ರೂ. 16.4 ಲಕ್ಷ ಕೋಟಿ ಔಟ್​ ಪುಟ್​ ನಷ್ಟವಾಗಿದೆ. ಹಣಕಾಸು ವರ್ಷ 2022ರಲ್ಲಿ ಭಾರತದ ನೈಜ ಜಿಡಿಪಿ 147.54 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

“ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚುವರಿ ಕ್ರಮಗಳು ಮತ್ತು ಉಪಕ್ರಮಗಳೊಂದಿಗೆ ಕೊವಿಡ್​-ಪೂರ್ವ ನಿಧಾನಗತಿಯನ್ನು ಎದುರಿಸಲು ಪ್ರಾರಂಭಿಸಲಾದ ಸುಧಾರಣೆಗಳ ಲಾಭಾಂಶಗಳು ಆರ್ಥಿಕತೆಯನ್ನು ಸುಸ್ಥಿರವಾದ ಉನ್ನತ ಬೆಳವಣಿಗೆಯ ಹಾದಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಕೊರೊನಾ ತಂದ ನಡವಳಿಕೆ ಮತ್ತು ತಾಂತ್ರಿಕ ಬದಲಾವಣೆಗಳು ಹೊಸ ಸಾಮಾನ್ಯ ಸ್ಥಿತಿಗೆ ಕಾರಣ ಆಗಬಹುದು. ಇದು ಪೂರ್ವ-ಸಾಂಕ್ರಾಮಿಕ ಟ್ರೆಂಡ್​ಗೆ ಅಗತ್ಯವಾಗಿ ಅಲ್ಲ. ಆದರೆ ಹೆಚ್ಚು ಪರಿಣಾಮಕಾರಿ, ಸಮಾನ, ಸ್ವಚ್ಛ ಮತ್ತು ಹಸಿರು ತಳಹದಿಯ ಮೇಲೆ ನಿರ್ಮಿಸಲಾಗುತ್ತದೆ,” ಎಂದು ವರದಿಯಲ್ಲಿ ಸೇರಿಸಲಾಗಿದೆ.

ವರದಿಯ ಮುನ್ನುಡಿಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರು ತಿಳಿಸಿರುವಂತೆ, ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಮತ್ತು ಕೊರೊನಾ ಮೊದಲ ಅಲೆಯ ಮುಂಚಿನ ಹಾದಿಗೆ ಮರಳುವುದು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ದಾಸ್ ಅವರ ಪ್ರಕಾರ, ಉದ್ಯಮಿಗಳು, ವ್ಯವಹಾರಗಳು ಮತ್ತು ಹಣಕಾಸಿನ ಪ್ರಾಧಿಕಾರಗಳಿಗೆ “ಹೆಚ್ಚಿನ ಅವಕಾಶಗಳ ಉದಾರ ಚಲನೆ”ಯನ್ನು ರಚಿಸುವ ಕೆಲಸ ಆಗಬೇಕಿತ್ತು.

ಇದನ್ನೂ ಓದಿ: ಕೊವಿಡ್ ಸಂಬಂಧಿತ ಲಿಕ್ವಿಡಿಟಿ ಕ್ರಮಗಳೆಲ್ಲವೂ ಕೊನೆ ದಿನಾಂಕದೊಂದಿಗೆ ಬಂದವು: ಆರ್‌ಬಿಐ ಗವರ್ನರ್ ದಾಸ್

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ